Select Your Language

Notifications

webdunia
webdunia
webdunia
webdunia

ಸೆಟ್‍ನಲ್ಲಿ ಅನುಷ್ಕಾ ಸ್ವೀಟ್ ಉಮ್ಮಾ ಕೊಟ್ಟಿದ್ದು ಯಾರಿಗೆ?

ಸೆಟ್‍ನಲ್ಲಿ ಅನುಷ್ಕಾ ಸ್ವೀಟ್ ಉಮ್ಮಾ ಕೊಟ್ಟಿದ್ದು ಯಾರಿಗೆ?
Mumbai , ಗುರುವಾರ, 2 ಫೆಬ್ರವರಿ 2017 (11:41 IST)
ಬಾಲಿವುಡ್ ನಟಿ ಅನುಷ್ಕಾ ಶರ್ಮಾಗಾಗಿ ಪೋರಿಯೊಬ್ಬಳು ಹಾಡಿದ್ದಾಳೆ. ತನ್ನ ಅಭಿಮಾನಿ ತಾರೆ ಮುಂದೆ ಆಕೆ ಅಭಿನಯಿಸಿದ ಸಿನಿಮಾದ ಹಾಡೊಂದನ್ನು ಹಾಡಿದಕ್ಕೆ ಆ ಬಾಲೆ ಸಂತೋಷಕ್ಕೆ ಪಾರವೇ ಇರಲಿಲ್ಲ. ಇವರ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ. 
 
ಕೇಂದ್ರ ಸರಕಾರ ಪ್ರತಿಷ್ಠಿತವಾಗಿ ಕೈಗೆತ್ತಿಕೊಂಡ ಸ್ವಚ್ಚ ಭಾರತ ಅಭಿಯಾನ್ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಚಾರ ಸನ್ನಿವೇಶಗಳ ಚಿತ್ರೀಕರಣಕ್ಕಾಗಿ ಅನುಷ್ಕಾ ಶರ್ಮಾ ಇತ್ತೀಚೆಗೆ ಸ್ಥಳವೊಂದಕ್ಕೆ ಭೇಟಿ ನೀಡಿದ್ದರು. ತನ್ನ ಅಭಿಮಾನ ತಾರೆ ಬಂದಿದ್ದಾಳೆಂದು ತಿಳಿದುಕೊಂಡ ಆ ಪೋರಿ ಶೂಟಿಂಗ್ ಸ್ಪಾಟ್‌ಗೆ ಬಂದಿದ್ದಾಳೆ. 
 
ಆದರೆ ಭದ್ರತಾ ಸಿಬ್ಬಂದಿ ಅನುಷ್ಕಾ ಭೇಟಿಗೆ ಅವಕಾಶ ಮಾಡಿಕೊಡಲಿಲ್ಲ. ದೂರದಿಂದಲೇ ಆಕೆಯನ್ನು ನೋಡುತ್ತಾ ನಿಂತುಬಿಟ್ಟಳು. ಆದರೆ ಹೇಗಾದರೂ ಮಾಡಿ ಆಕೆಯನ್ನು ಭೇಟಿಯಾಗಬೇಕೆಂಬ ಕೋರಿಕೆ ಮಾತ್ರ ಒಳಗಿತ್ತು. ವಿಷಯವನ್ನು ತಿಳಿದುಕೊಂಡ ಅನುಷ್ಕಾ ಪೋರಿಯನ್ನು ಭೇಟಿಯಾಗಲು ಅನುಮತಿ ಕೊಟ್ಟಿದ್ದಾರೆ. 
 
ಇದರಿಂದ ಖುಷಿಯಾಗಿ ಅನುಷ್ಕಾರನ್ನು ಭೇಟಿ ಮಾಡಿದರು. ಸ್ವಲ್ಪ ಹೊತ್ತು ಚಿನ್ನಾರಿ ಜತೆ ಕಳೆದ ಅನುಷ್ಕಾಗೆ ಅಚ್ಚರಿ ಕಾದಿತ್ತು. ಯಾಕೆಂದರೆ ಸಲ್ಮಾನ್ ಖಾನ್-ಅನುಷ್ಕಾ ಜೋಡಿಯ ಜಗ್ ಘುಮೆಯೋ ಚಿತ್ರದ ಹಾಡನ್ನು ಹಾಡಿ ಚಕಿತಗೊಳಿಸಿದರು. ಇದರಿಂದ ಖುಷಿಯಾದ ಅನುಷ್ಕಾ ಆ ಪೋರಿಯನ್ನು ತಬ್ಬಿಕೊಂಡು ಕೆನ್ನೆಗೆ ಸ್ವೇಟ್ ಆದ ಉಮ್ಮಾ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ನಟನ ತಿಂಗಳ ಖರ್ಚು ಬರೋಬ್ಬರಿ ರೂ.13 ಕೋಟಿ