ಖ್ಯಾತ ಗಾಯಕ ಯೋ ಯೋ ಹನಿ ಸಿಂಗ್ ವಿರುದ್ಧ ಏಕಾಏಕಿ ಕೋರ್ಟ್‌ ಮೆಟ್ಟಿಲೇರಿದ ಖ್ಯಾತ ನಟಿ

Sampriya
ಗುರುವಾರ, 6 ಮಾರ್ಚ್ 2025 (18:37 IST)
Photo Courtesy X
ಪಾಟ್ನಾ: ಗಾಯಕ ಯೋ ಯೋ ಹನಿ ಸಿಂಗ್ ಅವರ ಇತ್ತೀಚಿನ ಚಾರ್ಟ್‌ಬಸ್ಟರ್ 'ಮ್ಯಾನಿಯನ್' ಚಿತ್ರದ ಹಾಡು ಅಶ್ಲೀಲತೆಯಿಂದ ಕೂಡಿದೆ ಎಂದು ಆರೋಪಿಸಿ ಖ್ಯಾತ ನಟಿ ನಿತು ಚಂದ್ರ ಅವರು ಪಾಟ್ನಾ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ತಿಂಗಳ ಕೊನೆಯಲ್ಲಿ ವಿಚಾರಣೆ ನಡೆಯುವ ಸಾದ್ಯತೆಯಿದೆ. ಹನಿ ಸಿಂಗ್ ಜತೆ ಹಾಡಿನಲ್ಲಿ ಸಹಕರಿಸಿದವರ ಹೆಸರುಗಳಿವೆ. ಅದರಲ್ಲಿ ಗೀತರಚನೆಕಾರ ಲಿಯೋ ಗ್ರೆವಾಲ್ ಮತ್ತು ಭೋಜ್‌ಪುರಿ ಗಾಯಕರಾದ ರಾಗಿಣಿ ವಿಶ್ವಕರ್ಮ ಮತ್ತು ಅರ್ಜುನ್ ಅಜನಾಬಿ ಸೇರಿದ್ದಾರೆ.

ಹಲವಾರು ಬಾಲಿವುಡ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಭೋಜ್‌ಪುರಿ ಮತ್ತು ಮೈಥಿಲಿ ಚಲನಚಿತ್ರಗಳನ್ನು ನಿರ್ಮಿಸಿರುವ ಪಾಟ್ನಾ ಮೂಲದ ನಟಿ ಇವರಾಗಿದ್ದಾರೆ. "ಸಾಹಿತ್ಯವನ್ನು ತಿದ್ದುಪಡಿ ಮಾಡಲು" ಪ್ರತಿವಾದಿಗಳಿಗೆ ನ್ಯಾಯಾಲಯದಿಂದ ನಿರ್ದೇಶನವನ್ನು ಕೋರಿದ್ದಾರೆ.

ಈ ಹಾಡು "ಬಹಿರಂಗ ಲೈಂಗಿಕತೆಯನ್ನು ಚಿತ್ರಿಸುತ್ತದೆ", "ಮಹಿಳೆಯರನ್ನು ಕೇವಲ ಲೈಂಗಿಕ ವಸ್ತುಗಳಾಗಿ ತೋರಿಸಲಾಗಿದೆ" ಎಂದು ಅವರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮದುವೆ ದಿನ ಸಮಂತಾ ಪತಿ ರಾಜ್ ನಿಡಿಮೋರು ಬಗ್ಗೆ ಈ ವಿಚಾರ ಹೆಚ್ಚು ಹುಡುಕಾಟ

ದರ್ಶನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಚಾಲೆಂಜಿಂಗ್‌ ಸ್ಟಾರ್‌ ಧ್ವನಿಯಲ್ಲೇ ಡೆವಿಲ್ ಟ್ರೇಲರ್ ದಿನಾಂಕ ರಿವಿಲ್‌

ನಿರ್ದೇಶಕ ರಾಜ್ ನಿಡಮೋರು ಜೊತೆ ಸದ್ದಿಲ್ಲದೇ ಮದುವೆಯಾದ ಸಮಂತಾ

ಮುಂದಿನ ಸುದ್ದಿ