ಹ್ಯಾಪಿ ಬರ್ತಡೇ ಸೂಪರ್ ಸ್ಟಾರ್ ರಜನಿಜೀ
Publish Date: Thu, 12 Dec 2013 (11:02 IST)
Updated Date: Thu, 12 Dec 2013 (11:01 IST)
ಇಂದು ರಜನಿಕಾಂತ್ ಅವರ ಜನ್ಮದಿನ. ಭಾರತದಲ್ಲಿ ಸೂಪರ್ ಸ್ಟಾರ್ ಗಳಲ್ಲಿ ಸೂಪರ್ ಸ್ಟಾರ್ ರಜನಿಕಾಂತ್. ಕಂಡಕ್ಟರ್ ಆಗಿ ವೃ ತ್ತಿ ಆರಂಭಿಸಿದ್ದ ರಜನಿಕಾಂತ್ ಆ ಬಳಿಕ ಕನ್ನಡ ಚಿತ್ರರಂಗಕ್ಕೆ ಬಂದರಾದರೂ ಅವರನ್ನು ಬೆಳೆಸಿದ್ದು ತಮಿಳು ಚಿತ್ರರಂಗ. ಅವರ ವಿಶೇಷವಾದ ಆಂಗಿಕ ಅಭಿನಯ, ಅತ್ಯದ್ಭುತ ಸಿನಿಮಾಗಳು, ಅದರ ಕಥೆ, ಹಾಡುಗಳೆಲ್ಲವೂ ರಜನಿಯನ್ನು ಜನರ ಮನದಲ್ಲಿ ಶಾಶ್ವತವಾಗಿ ಇಡುವಂತೆ ಮಾಡಿದೆ. ರಜನಿ ಅತ್ಯಂತ ಹಾರ್ಡ್ ವರ್ಕರ್ ಎಂಬುದು ಎಲ್ಲರಿಗೂ ಗೊತ್ತು. ತಮ್ಮ ಪಾತ್ರಕ್ಕೆ ಜೀವ ತುಂಬಲು ಅವರು ಎಂತಹ ಸಾಹಸಕ್ಕೂ ಸಿದ್ಧ. ಸಾಮಾನ್ಯವಾಗಿ ರಜನಿ ಅವರ ಸೂಪರ್ ಹಿಟ್ ಹಾಡುಗಳನ್ನು ಹಾಡಿರುವುದು ಭಾರತದ ಪ್ರಸಿದ್ಧ ಗಾಯಕ ಎಸ್ ಪಿ.ಬಾಲಸುಬ್ರಮಣ್ಯಂ. ಗಾಂಧಿ ದೇಸಮೆ ಚಿತ್ರದಲ್ಲಿ ನಾನ್ ಸಿಗಪ್ಪು ಮನಿದನ್ , ಅಣ್ಣಾ ಮಲೈ ಚಿತ್ರದ ವತೆಂದ ಪಾಲ್ಕರೆನ್ ಭಾಷ ಚಿತ್ರದ ರಾರಾ ರಾಮಯ್ಯ ಸೇರಿದಂತೆ ಈಗಿನ ಕೊಚಾಡಿಯನ್ ಸಿನಿಮಾದವರೆಗೂ ಈ ಕಾಂಬಿನೇಷನ್ ಇದ್ದೇ ಇದೆ. ಭಾರತೀಯ ಚಿತ್ರ ರಂಗದಲ್ಲಿ ರಜನಿ ಕಾಂತ್ ಅವರ ಈ ಸಾಧನೆಯು ಮತ್ತಷ್ಟು ಹೊಸತನಗಳನ್ನು ನೀಡಲಿ. ಈ ಡೈನಮಿಕ್- ಎನರ್ಜಿಟಿಕ್ ನಟನ ಆಯಸ್ಸು ಹೆಚ್ಚು ಹೆಚ್ಚಾಗಲಿ ಎಂದು ಹಾರೈಸುತ್ತಿದೆ ವೆಬ್ ದುನಿಯಾ ಪತ್ರಿಕೆ ಹ್ಯಾಪಿ ಬರ್ತಡೇ ಸೂಪರ್ ಸ್ಟಾರ್ ರಜನಿಜೀ.