Article Bollywood Gossips %e0%b2%b9%e0%b3%8a%e0%b2%b8 %e0%b2%b6%e0%b3%8b%e0%b2%b2%e0%b3%86 %e0%b2%b8%e0%b3%81%e0%b2%b7%e0%b3%8d%e0%b2%ae%e0%b2%bf%e0%b2%a4%e0%b2%be %e0%b2%96%e0%b3%81%e0%b2%b7%e0%b2%bf 107080100013_1.htm

Select Your Language

Notifications

webdunia
webdunia
webdunia
webdunia

ಹೊಸ ಶೋಲೆ:ಸುಷ್ಮಿತಾ ಖುಷಿ

ಹೊಸ ಶೋಲೆ
ರಾಂಗೋಪಾಲ್‌ ವರ್ಮ ಅವರ ಹೊಸ ಚಿತ್ರ ಶೋಲೆಯಲ್ಲಿ ಅಭಿನಯಿಸಿರುವ ಥಳುಕುಬಳುಕಿನ ಬೆಡಗಿ ಸುಷ್ಮಿತಾ ಸೆನ್ ಖುಷಿಯಾಗಿದ್ದಾರೆ, ಇದು ನನ್ನ ವಿಶೇಷ ಸಾಧನೆ ಅನ್ನುತ್ತಿದ್ದಾರೆ.

ನಾನು ಈ ವರೆಗೆ ನಿರ್ವಹಿಸಿದ ಪಾತ್ರಗಳಿಗಿಂತ ತೀರಾ ಭಿನ್ನ ಹಾಗೂ ಸವಾಲಿನ ಸನ್ನಿವೇಶಗಳು ಇದರಲ್ಲಿವೆ. ಚಿತ್ರದಲ್ಲಿ ನಾನು ಮಾತನಾಡುವುದು ವಿರಳ, ಆದರೆ ಕಣ್ಣುಗಳು ಎಲ್ಲವನ್ನೂ ಹೇಳುತ್ತವೆ. ಭಾವಾಭಿನಯಕ್ಕೆ ಹೆಚ್ಚಿನ ಅವಕಾಶ ನೀಡಲಾಗಿದೆ. ಇದು ಸುಷ್ಮಿತಾ ಹೇಳುವಂತೆ ಖುಷಿಗೆ ಕಾರಣ.

ಹೊಸ ಶೋಲೆಯಲ್ಲಿರುವ ಕಥಾಪಾತ್ರ ದುರ್ಗಾ‌ ತುಂಬಾ ಕ್ಲಿಷ್ಟಕರ ಅಭಿನಯ. ಇಂತಹ ವಿಶೇಷ ಕಥಾ ಪಾತ್ರಕ್ಕಾಗಿ ನನ್ನನ್ನು ಆರಿಸಿದ್ದಕ್ಕಾಗಿ ರಾಮ್ ಅವರನ್ನು ನಾನು ಅಭಿನಂದಿಸಬೇಕಿದೆ ಎನ್ನುತ್ತಾರೆ ಸುಷ್ಮಿತಾ.

ರಮೇಶ್ ಸಿಪಿ ಅವರ ಹಳೆಯ ಶೋಲೆಯಲ್ಲಿ ದುರ್ಗಾಳ ಪಾತ್ರವನ್ನು ಜಯಾ ಬಚ್ಚನ್ ನಿರ್ವಹಿಸಿದ್ದರು, ಶುಷ್ಮಿತಾ ಈ ಕುರಿತು ನೆನಪಿಸಿಕೊಂಡು ಮತ್ತಷ್ಟು ಹರ್ಷಿತರಾಗುತ್ತಾರೆ, ಬೀಗುತ್ತಿದ್ದಾರೆ.

Share this Story:

Follow Webdunia kannada