ಹೊಸ ರೂಪದಲ್ಲಿ ಬರಲಿದೆ ಹಳೆಯ ದಿವಾನಾ ಚಿತ್ರ
Publish Date: Thu, 18 Jul 2013 (10:58 IST)
Updated Date: Thu, 18 Jul 2013 (10:58 IST)
ಎರಡು ದಶಕಗಳ ಹಿಂದೆ ದಿವಾನಾ ಎಂಬ ಹೆಸರಿನಲ್ಲಿ ಬಿಡುಗಡೆಯಾದ ಸಿನೆಮಾ ಇದೀಗ ಮರುನಿರ್ಮಾಣಗೊಳ್ಳಲಿದೆ. ಕಥೆ, ಕಲಾವಿದರು ಬೇರೆ ಎಂದಿದ್ದಾರೆ ನಿರ್ದೇಶಕ ರಾಜ್.ಹಳೇ ದಿವಾನಾ ಚಿತ್ರದಲ್ಲಿ ಶಾರೂಖ್ ಖಾನ್, ರಿಶಿ ಕಪೂರ್, ದಿವ್ಯಾ ಭಾರತಿ ನಟಿಸಿದ್ದರು, ಅಂದು ಚಿತ್ರ ನಿರ್ದೇಶಿಸಿದ್ದ ರಾಜ್ ಕನ್ವರ್ ಇಂದೂ ಚಿತ್ರ ನಿರ್ಮಿಸುವ ಜವಾಬ್ದಾರಿ ಹೊತ್ತಿದ್ದಾರೆ. ನಮ್ಮ ಕಥೆ ಡಿಫರೆಂಟ್ ಆಗಿದೆ. ಚಿತ್ರಕಥೆ ರೆಡಿಯಾಗಿದ್ದು ತಾರಾಗಣದ ಹುಡುಕಾಟ ನಡೆಯುತ್ತಿದೆ. ಇಲ್ಲಿ ಶಾರೂಖ್ ಖಾನ್ ತಂಡ ಇರುವುದಿಲ್ಲ. ಮಹೇಶ್ ಭಟ್ ತಮ್ಮ ಚಿತ್ರ ಮರ್ಡರ್ ಭಾಗ ಎರಡು ಮೂರು ಮಾಡಿದ್ದರಲ್ಲ ಅದೇ ರೀತಿ ನಾವೂ ಮಾಡುತ್ತಿದ್ದೇವೆ. ಇದೊಂದು ರೊಮ್ಯಾಂಟಿಕ್ ಕಥೆ ಹೊಂದಿದ್ದು ಮನರಂಜನೆ ನೀಡಲಿದೆ. ದೀವಾನಾ ಎಂಬ ಹೆಸರಿನ ಜೊತೆ ಬೇರೇನಾದರೂ ಸೇರಿಸಬೇಕೇ ಎಂಬ ಯೋಜನೆಗಳನ್ನು ಹಾಕುತ್ತಿದ್ದೇವೆ ಎಂದಿದ್ದಾರೆ ನಿರ್ದೇಶಕರು.ಗುಡ್ಡು ಧನೋಯ್ ಚಿತ್ರ ನಿರ್ಮಿಸುತ್ತಿದ್ದಾರೆ. ಎರಡು ದಶಕಗಳ ಹಿಂದೆ ಶಾರೂಖ್ಗೆ ಫೇಮ್ ನೀಡಿದ ಚಿತ್ರವಿದು. ರಿಷಿ ಕಪೂರ್ ಅವರ ಅಭಿನಯಕ್ಕೂ ಭಾರೀ ಪ್ರಶಂಸೆ ಸಿಕ್ಕಿತ್ತು. ಇದರೊಂದಿಗೆ ಹಳೇ ಚಿತ್ರದ ಎರಡನೇ ಆವೃತ್ತಿ ತಯಾರಿಸುವ ಪಟ್ಟಿಗೆ ಹೊಸ ಚಿತ್ರ ಸೇರ್ಪಡೆಯಾದಂತಾಗಿದೆ.