Article Bollywood Gossips %e0%b2%b9%e0%b3%88 %e0%b2%b2%e0%b3%86%e0%b2%b5%e0%b3%86%e0%b2%b2%e0%b3%8d %e0%b2%a8%e0%b2%bf%e0%b2%b0%e0%b3%8d%e0%b2%a6%e0%b3%87%e0%b2%b6%e0%b2%95 %e0%b2%9c%e0%b2%97%e0%b2%a8%e0%b3%8d%e0%b2%a8%e0%b2%be%e0%b2%a5%e0%b3%81 %e0%b2%97%e0%b2%be%e0%b2%b0 113110100009_1.htm

Daily Horoscope

Select Your Language

Notifications

webdunia
webdunia
webdunia
webdunia

ಹೈ ಲೆವೆಲ್ ನಿರ್ದೇಶಕ ಜಗನ್ನಾಥು ಗಾರ...

ಪೂರಿ ಜಗನ್ನಾಥ್
PR
PR
ಪೂರಿ ಜಗನ್ನಾಥ್ ಹೈ ಲೆವೆಲ್ ನಿರ್ದೇಶಕ. ಆದರೆ ಆಗಿನ ಕಾಲದಲ್ಲಿ , ಈಗಲ್ಲ. ಆತನ ನಿರ್ದೇಶನದ ಚಿತ್ರ ಅಂದ್ರೆ ಎಲ್ಲ ಹೈ ಪ್ರೊಫೈಲ್ ನಟರೆ ಆಗಿರ ಬೇಕು. ಮಾಡಿದ ಚಿತ್ರಗಳು ಕಂಡಿದ್ದು ಸಕತ್ ಯಶಸ್ಸು, ಮುಟ್ಟಿದ್ದೆಲ್ಲಾ ಫುಲ್ ಗೋಲ್ಡು! ಆದರೆ ಎಷ್ಟು ದಿನಗಳ ಕಾಲ ಈ ರೀತಿ ನಡೆಯೋಕೆ ಸಾಧ್ಯ, ನಡೆದೂ ನಡೆದೂ ಆತನಿಗೆ ಈಗ ಕೂರುವ ಪರಿಸ್ಥಿತಿ .

ಹೌದು ಹೌದು ಈಗ ಆತ ಸೋಲಿನ ಸರದಾರ. ಬಿಗ್ ಸಿನಿಮಾ , ಬಿಗ್ ಬ್ಯಾನರ್ ಹೀಗೆ ಎಲ್ಲವೂ ಬಿಗ್ ಪ್ರಾಜೆಕ್ಟ್ ಗಳತ್ತಲೇ ಗಮನ ಕೊಟ್ಟಿದ್ದ ಜಗನ್ನಾಥು ಗಾರಿಕಿ ಈಗ ಬ್ಯಾಡ್ ಲಕ್ ಹ್ಯಾ೦ಡ್ ಶೇಕ್ ಮಾಡಿದೆ ! ಆತ ಮಾಡಿದ್ದೆ ಕಾನೂನು, ಹೇಳಿದ್ದೆ ನ್ಯಾಯ ಅನ್ನುವ ಅಂಶವನ್ನು ಪ್ರೇಕ್ಷಕರು ತಿರಸ್ಕರಿಸಿದ್ದಾರೆ. ಎಲ್ಲಿಯೂ ಜಾಗ ಕಾಣದೆ ಪೂರಿ ಈಗ ಸ್ಮಾಲ್ ನಟರ ಜೊತೆ ವ್ಯವಹಾರ ಆರಂಭ ಮಾಡಿದ್ದಾರೆ. ಈಗ ಪೂರಿ ತಮ್ಮ ಹೊಸ ಪ್ರಾಜೆಕ್ಟ್ ನಟ ನಿತೀನ್ ಜೊತೆ ಮಾಡುತ್ತಿದ್ದಾರೆ . ಅದಾದ ಬಳಿಕ ತಮ್ಮದೇ ಬಿಗ್ ಬ್ಯಾನರ್ ನಲ್ಲಿ ಅವ್ರ ಸಹೋದರ ಸಾಯಿ ರಾಮ್ ಗಾಗಿ ಒಂದು ಸಿನಿಮಾ ಮಾಡುತ್ತಿದ್ದಾರೆ. ಆಗೆಲ್ಲ ಅಷ್ಟೊಂದು ಹಾರಾಡಿದ ಪೂರಿಗೆ ಇಂತಹ ಸ್ಥಿತಿ ಬರಬಾರದಿತ್ತು ಅಂತ ಟಾಲಿವುಡ್ ನಲ್ಲಿ ಈಗ ಗುಸುಗುಸು ಪಿಸಿಪಿಸಿ !

Share this Story:

Follow Webdunia kannada