Article Bollywood Gossips %e0%b2%b9%e0%b3%87%e0%b2%b0%e0%b2%be%e0%b2%aa%e0%b3%87%e0%b2%b0%e0%b2%bf %e0%b2%a4%e0%b2%82%e0%b2%a1%e0%b2%a6%e0%b2%bf%e0%b2%82%e0%b2%a6 %e0%b2%ae%e0%b2%97%e0%b2%a6%e0%b3%8a%e0%b2%82%e0%b2%a6%e0%b3%81 108040300043_1.htm

Select Your Language

Notifications

webdunia
webdunia
webdunia
webdunia

ಹೇರಾಪೇರಿ ತಂಡದಿಂದ ಮಗದೊಂದು

ಹೇರಾ ಫೇರಿ
IFM
ಚಿತ್ರಮಿತ್ರರನ್ನು ಥಟ್ಟನೆ ಸೆಳೆದ ಚಿತ್ರ ಹೇರಾಪೇರಿ. ಹೊಟ್ಟೆ ಹುಣ್ಣಾಗುವಂತೆ, ಬಿದ್ದೂ ಬಿದ್ದೂ ನಗಿಸುವ ಈ ಹೇರಾಪೇರಿ ಸಕತ್ ಸಿನಿಮಾ. ಇದೀಗ ಇದೇ ತಾರಾತಂಡದ ಇನ್ನೊಂದು ಸಿನಿಮಾ ಸೆಟ್ಟೇರಲಿದೆ. ಹಾಗಾಗಿ ಡಿಸೆಂಬರ್‌ ವೇಳೆಗೆ ಸಿದ್ಧವಾಗುವ ಈ ಸಿನಿಮಾ ವೀಕ್ಷಿಸಿ ನಗಲು ಈಗಲೇ ಸಿದ್ಧವಾಗಲಡ್ಡಿಯಿಲ್ಲ.

ಗೆಲ್ಲುವ ಕುದುರೆಗಳ ತಂಡವೊಂದನ್ನು ಕಟ್ಟಿಕೊಂಡು ಸಿನಿಮಾ ಮಾಡುತ್ತೇವಂದರೆ ಯಾವ ನಿರ್ಮಾಪಕರು ಇಲ್ಲಾ ಅಂತಾರೆ. ಯಾರೇ ಆದರೂ ಸಹಿಮಾಡಿಯಾರು. ಅದೂ ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಹಾಗೂ ಪರೇಶ್ ರಾವಲ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಅವರುಗಳ ಸಮ್ಮಿಲನ ಅಂದರೆ ಐದೂ ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಅಂತಲೇ ಲೆಕ್ಕ.

ಅಕ್ಷಯ್ ಮತ್ತು ಪ್ರಿಯದರ್ಶನ್ ಅವರುಗಳ ಜತೆಗೆ ಕೆಲವು ಸಮಯದ ಹಿಂದೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಸುನಿಲ್ ಶೆಟ್ಟಿ ಹಾಗೂ ಪರೇಶ್ ರಾವಲ್ ಅವರುಗಳೂ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ನಿರ್ಮಾಪಕ ರತನ್ ಜೈನ್ ಹೇಳಿದ್ದಾರೆ.

ಇದೊಂದು ಹಾಸ್ಯಮಯ ಚಿತ್ರ ಹೌದು. ಆದರೆ ಹೇರಾಪೇರಿಯಂತೂ ಅಲ್ಲವೇ ಅಲ್ಲ. ಎಲ್ಲೂ ಅದರಂತೆ ಇರುವುದೇ ಇಲ್ಲವಂತೆ.

ಚಿತ್ರಕ್ಕೆ ಇನ್ನೂ ನಾಮಕರಣವಾಗಿಲ್ಲ. ಸೆಪ್ಟೆಂಬರ್‌ನಿಂದ ಡಿಸೆಂಬರ್ ತನಕ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂಬುದು ನಿರ್ಮಾಪಕರ ಹೇಳಿಕೆ.

Share this Story:

Follow Webdunia kannada