Article Bollywood Gossips %e0%b2%b9%e0%b3%87%e0%b2%ae%e0%b2%be %e0%b2%a8%e0%b2%bf%e0%b2%b0%e0%b3%8d%e0%b2%a6%e0%b3%86%e0%b2%b6%e0%b2%a8 %e0%b2%b2%e0%b2%be%e0%b2%b2%e0%b3%82 %e0%b2%a8%e0%b2%9f%e0%b2%a8%e0%b3%86 107081100016_1.htm

Select Your Language

Notifications

webdunia
webdunia
webdunia
webdunia

ಹೇಮಾ ನಿರ್ದೆಶನ, ಲಾಲೂ ನಟನೆ

ಹೇಮಾ
ಹಿಂದೊಮ್ಮೆ ಬಿಹಾರದ ರಸ್ತೆಗಳನ್ನು ಹೇಮಾ ಮಾಲಿನಿಯ ಕೆನ್ನೆಯಷ್ಟು ನುಣುಪಾಗಿ ಮಾಡುವುದಾಗಿ ಭರವಸೆ ನೀಡಿದ್ದ ಆರ್‌ಜೆಡಿ ಮುಖ್ಯಸ್ಥ, ಕೇಂದ್ರ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್, ಈಗ ಹೇಮಾ ಮಾಲಿನಿ ನಿರ್ಮಾಣದ ಚಿತ್ರವೊಂದರಲ್ಲಿ ಅಭಿನಯಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಡೆದ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ಬಿಜೆಪಿ ಸಂಸದೆಯೊಂದಿಗೆ ಮಾತನಾಡುತ್ತಿದ್ದುದರ ಕುರಿತು ಪತ್ರಕರ್ತರು ಲಾಲೂರನ್ನು ಕೇಳಿದಾಗ ಅವರು ಈ ವಿಚಾರ ಹೇಳಿದರು.

"ಅದು ಅವರು ನಿರ್ಮಿಸುತ್ತಿರುವ ಹೊಸ ಚಿತ್ರದ ಬಗ್ಗೆಯಷ್ಟೆ. ಅವರ ಚಿತ್ರದಲ್ಲಿ ನನಗೊಂದು ಪಾತ್ರ ಬೇಕೆಂದು ಕೇಳಿದೆ," ಎಂದು ಪ್ರಸಾದ್ ಜೋರಾಗಿ ನಕ್ಕರು. ಪತ್ರಕರ್ತರಿಗೆ ಅವರ ನಗುವಿನ ಮರ್ಮ ತಿಳಿಯಲಾಗದೆ, ಅವರು ಹೇಳುತ್ತಿರುವುದು ನಿಜವೊ, ಸುಳ್ಳೊ ಎಂಬ ಸಂಶಯವುಂಟಾಯಿತು.

ಆಗ, ಯಾರೊ ಒಬ್ಬರು ಲಾಲೂರನ್ನು ಚಿತ್ರದ ಹೆಸರು ಕೇಳಿದಾಗ, "ಫಿಲ್ಮ್ ಕಾ ನಾಮ್ ಗೋಪನಿಯಾ ಹೈ"(ಚಿತ್ರದ ಹೆಸರು ರಹಸ್ಯ) ಎಂದು ಹೇಳಿದರು ಲಾಲೂ.

ಸಂಸತ್ ಭವನದ ಹೊರ ಆವರಣದಲ್ಲಿ ಲಾಲೂ ಚಿತ್ರ ತಾರೆಯೊಂದಿಗೆ ಗಂಭೀರವಾದ ಸಂಭಾಷಣೆಯಲ್ಲಿ ತೊಡಗಿದ್ದರಿಂದ, ಮತದಾನವನ್ನು ಚಿತ್ರಿಸುತ್ತಿದ್ದ ಛಾಯಾಚಿತ್ರಕಾರರು, ಲಾಲೂ-ಹೇಮಾ ಮಾಲಿನಿಯವರ ಅಪರೂಪದ ಸಂಭಾಷಣೆಯನ್ನು ಚಿತ್ರೀಕರಿಸಲು ಆರಂಭಿಸಿದರು.

Share this Story:

Follow Webdunia kannada