Article Bollywood Gossips %e0%b2%b9%e0%b3%87%e0%b2%ae%e0%b2%ae%e0%b2%be%e0%b2%b2%e0%b2%bf%e0%b2%a8%e0%b2%bf %e0%b2%ae%e0%b2%a8%e0%b2%97%e0%b3%86 %e0%b2%ae%e0%b2%a4%e0%b3%8d%e0%b2%a4%e0%b3%8a%e0%b2%82%e0%b2%a6%e0%b3%81 %e0%b2%b9%e0%b3%8a%e0%b2%b8 %e0%b2%85%e0%b2%a4%e0%b2%bf%e0%b2%a5%e0%b2%bf 113071100004_1.htm

Daily Horoscope

Select Your Language

Notifications

webdunia
webdunia
webdunia
webdunia

ಹೇಮಮಾಲಿನಿ ಮನಗೆ ಮತ್ತೊಂದು ಹೊಸ ಅತಿಥಿ

ಹೇಮಾಮಾಲಿನಿ
IFM
IFM
ಬಾಲಿವುಡ್ ತಾರೆ ಹೇಮಾಮಾಲಿನಿ ಪುತ್ರಿ ಅಹನಾ ಅವರ ಮದುವೆ ದೆಹಲಿ ಮೂಲದ ಉದ್ಯಮಿ ವೈಭವ್ ಅವರೊಂದಿಗೆ ನಡೆಯಲಿದೆ. ನಿಶ್ಚಿತಾರ್ಥ ಈಗಾಗಲೇ ಮುಗಿದಿದ್ದು ಹೇಮಾಮಾಲಿನಿ ಅವರಿಗೆ ಭಾರಿ ಖುಷಿ ನೀಡಿದೆಯಂತೆ.

ಅಹನಾ ಮದುವೆಯಾಗಿ ಬೇರೊಬ್ಬರ ಮನೆಗೆ ಸೊಸೆಯಾಗಿ ಹೋಗುತ್ತಿದ್ದಾಳೆ ಎಂಬುದಕ್ಕೆ ಬೇಸರವಿಲ್ಲ. ಬದಲಾಗಿ ನಮ್ಮ ಮನೆಗೆ ಹೊಸ ಅಳಿಯ ಅಲ್ಲ ಮಗನ ಆಗಮನವಾಗುತ್ತಿರುವುದಕ್ಕೆ ಖುಷಿ ಇದೆ. ನಾನು ಅವಳನ್ನು ಖಂಡಿತಾ ಮಿಸ್ ಮಾಡಿಕೊಳ್ಳುವುದಿಲ್ಲ. ಹಿರಿಯ ಮಗಳು ಈಶಾ ಭರತ್‌ನನ್ನು ಕರೆತಂದಂತೆ ಈಕೆ ವೈಭವ್‌ನನ್ನು ಕರೆತರುತ್ತಿದ್ದಾಳೆ. ಈಗ ನಾನು ಎರಡು ಗಂಡುಮಕ್ಕಳನ್ನು ಪಡೆದಂತಾಯಿತು ಎಂದು ಸಂದರ್ಶನವೊಂದರಲ್ಲಿ ಹೇಮಾಮಾಲಿನಿ ಹೇಳಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗಿ ಹೋಗುತ್ತಿರುವುದಕ್ಕೆ ಬೇಸರವಿಲ್ಲ. ಮಕ್ಕಳೆಲ್ಲಾ ಸರಿಯಾದ ವಯಸ್ಸಿಗೆ ಬದುಕಿನಲ್ಲಿ ಸೆಟ್ಲ್ ಆಗುತ್ತಿರುವುದರ ಬಗ್ಗೆ ಸಂತಸವಿದೆ. ತಾಯಿಯಾದವಳಿಗೆ ಮಕ್ಕಳ ಸಂತೋಷಕ್ಕಿಂತ ಹಿರಿದಾದ ಸುಖವೇನಿದೆ ಹೇಳಿ ಎಂದಿದ್ದಾರೆ.

ಅಹನಾ ನೃತ್ಯ ಕಲಾವಿದೆಯಾಗಿದ್ದು ಮದುವೆಯಾದ ಬಳಿಕವೂ ಅದನ್ನು ಮುಂದುವರೆಸುತ್ತಾಳೆ. ಈಶಾ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಂತೆ ಅಹನಾ ನೃತ್ಯದಲ್ಲಿ ಹೆಸರು ಮಾಡಿದ್ದಾಳೆ. ಆಕೆಗೆ ಸಿನೆಮಾ ಮಾಡುವ ಬಯಕೆಯೂ ಇದೆ. ಇಬ್ಬರೂ ಮಕ್ಕಳು ಕಲೆಯೊಂದಿಗೆ ಗುರುತಿಸಿಕೊಂಡಿರುವುದನ್ನು ನೋಡಲು ಸಂತಸವಾಗುತ್ತದೆ ಎಂದಿದ್ದಾರೆ ಹೇಮಾಮಾಲಿನಿ.

Share this Story:

Follow Webdunia kannada