Article Bollywood Gossips %e0%b2%b9%e0%b3%87 %e0%b2%ac%e0%b3%87%e0%b2%ac%e0%b2%bf %e0%b2%9a%e0%b2%bf%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf %e0%b2%85%e0%b2%a4%e0%b2%bf%e0%b2%a5%e0%b2%bf%e0%b2%af%e0%b2%be%e0%b2%97%e0%b2%bf %e0%b2%95%e0%b2%bf%e0%b2%ae%e0%b3%8d 107072500028_1.htm

Daily Horoscope

Select Your Language

Notifications

webdunia
webdunia
webdunia
webdunia

ಹೇ ಬೇಬಿ ಚಿತ್ರದಲ್ಲಿ ಅತಿಥಿಯಾಗಿ ಕಿಮ್

ಹೇ ಬೇಬಿ
ಬಾಲಿವುಡ್ ನಿರ್ದೇಶಕ ಸಾಜಿದ್ ಖಾನ್ ನಿರ್ಮಿಸುತ್ತಿರುವ ಬಹುತಾರಾಗಣದ, ಅಪಾರವೆಚ್ಚದ ಹೇ,,ಬೇಬಿ ಚಿತ್ರದಲ್ಲಿ ಬಾಲಿವುಡ್ ನಟಿ ಕಿಮ್ ಶರ್ಮಾ ಅತಿಥಿನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಹಿರಿಯ ಮತ್ತು ಕಿರಿಯ ಬಾಲಿವುಡ್ ನಟರಾದ ಅಕ್ಷಯಕುಮಾರ್,ಫರ್ದಿನ್ ಖಾನ್, ರೀತೇಶ್‌ ದೇಶಮುಖ್, ವಿದ್ಯಾಬಾಲನ್ ಅವರುಗಳು ನಟಿಸಲಿದ್ದು ಕಿಮ್‌ಶರ್ಮಾ ಚಿತ್ರದಲ್ಲಿ ಅತಿಥಿ ನಟಿಯಾಗಿ ನಟಿಸುವುದು ಸಾಜಿದ್ ಖಚಿತಪಡಿಸಿದ್ದಾರೆ.

ಹೇ..ಬೇಬಿ ಮ್ಯೂಸಿಯಂ ಅಲ್ಬಂ ಅನ್ನು ಹೊರತರಲು ಉದ್ದೇಶಿಸಲಾಗಿದ್ದು,ಅದರಲ್ಲಿ ಬಾಲಿವುಡ್ ಹಾಟ್ ತಾರೆಯರಾದ ಸೆಲಿನಾ ಜೇಟ್ಲಿ, ಕೊಯಿನಾ ಮಿತ್ರಾ,ಮಲೈಕಾ ಅರೋರಾ ಖಾನ್, ಅಮೃತಾ ಅರೋರಾ, ದಿಯಾ ಮಿರ್ಜಾ ಅವರುಗಳು ನಟಿಸುತ್ತಿದ್ದಾರೆ.

ಬಾಲಿವುಡ್ ಬಾದಶಾಹ್ ಶಾಹರೂಖ್‌ಖಾನ್ ಹಾಗೂ ಹಿರಿಯ ನಟ ಅನುಪಮ್‌ ಖೇರ್ ಅವರು ಅತಿಥಿಯಾಗಿ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೊಹಬ್ಬತೇ ಖ್ಯಾತಿಯ ನಟಿ ಕಿಮ್ ಶರ್ಮಾ ಅವರು ಚಿತ್ರದ ಕ್ಲೈಮ್ಯಾಕ್ಸ್ ಭಾಗವಾಗಿದ್ದಾರೆ ಎನ್ನುವುದನ್ನು ಅಗಸ್ಟ್ ತಿಂಗಳಲ್ಲಿ ಚಿತ್ರ ಪೂರ್ಣಗೊಳ್ಳುವವರೆಗೆ ಬಹಿರಂಗಪಡಿಸಲಾಗುವದಿಲ್ಲವೆಂದು ನಿರ್ದೇಶಕ ಸಾಜೀದ್ ಖಾನ್ ತಿಳಿಸಿದ್ದಾರೆ.

Share this Story:

Follow Webdunia kannada