Publish Date: Mon, 06 Aug 2007 (10:56 IST)
Updated Date: Mon, 06 Aug 2007 (10:56 IST)
ಬಾಲಿವುಡ್‌ನಲ್ಲಿ ಹೊಸ ಚಿತ್ರ ಹೆಲೊ ತೆರೆಕಾಣುವ ಮೊದಲೇ ಸುದ್ದಿ ಮಾಡಿದೆ. ಅತುಲ್ ಅಗ್ನಿಹೊತ್ರಿಯವರ ಈ ಚಿತ್ರದ ಹಾಡೊಂದರ ವೆಚ್ಚ 1.75 ಕೋಟಿ ಅಂತೆ!
ಮುಂಬೈಯ ಫಿಲ್ಮ್ ಸಿಟಿಯಲ್ಲಿ ಪಬ್ ದೃಶ್ಯದ ಸೆಟ್‌ನಲ್ಲಿ ಚಿತ್ರೀಕರಣ ಪ್ರಗತಿಯಲ್ಲಿದೆ. ಈ ದೃಶ್ಯೀಕರಣದ ಚಿತ್ರೀಕರಣಕ್ಕಾಗಿ ಅಷ್ಟೊಂದು ಮೊತ್ತ ಖರ್ಚಾಗಲಿದೆ.
ಹಾಡಿನ ಸಂಗೀತ ಸಂಯೋಜನೆಯನ್ನು ಸಾಜಿದ್-ವಾಜಿದ್ ನಿರ್ವಹಿಸಿದ್ದಾರೆ, ಬಾಸ್ಕೊ ಕೇಸರ್ ದೃಶ್ಯೀಕರಣ ನಿರ್ವಹಿಸುತ್ತಿದ್ದಾರೆ. ಹಾಡುಗಳಿಗೆ ದೆಲ್ಹರ್ ಮೆಹಂದಿ ಹಾಗೂ ಸುನಿಧಿ ಚೌಹಾಣ್ ಧ್ವನಿ ನೀಡಿದ್ದಾರೆ.
ಗಾಯಕ ದೆಲ್ಹರ್ ಮೆಹೆಂದಿ ಈ ಹಾಡಿನಿಂದ ಬಹುವಾಗಿ ಪ್ರಭಾವಿತರಾಗಿದ್ದಾರೆ. ಈ ಕಾರಣದಿಂದ ಅವರು ಉಚಿತವಾಗಿ ಹಾಡಿಗೆ ಧ್ವನಿ ನೀಡುತ್ತಿದ್ದರೆ, ಆದರೂ ಅವರಿಗೆ ಟಾಗ್ ಹ್ಯೂರ್ ವಾಚನ್ನು ಉಡುಗೊರೆಯಾಗಿ ನೀಡಲಾಗಿದೆ.
ಪ್ರಸ್ತುತ ಹೆಲೊ ಸಿನಿಮಾವು ಚೇತನ್ ಭಗತ್ ಅವರ ' ಒನ್ ನೈಟ್ @ ಕಾಲ್ ಸೆಂಟರ್' ಎಂಬ ಕೃತಿಯನ್ನಾಧರಿಸಿ ನಿರ್ಮಿಸಲಾಗುತ್ತಿದೆ.