ಹೆಣ್ಣುಮಕ್ಕಳನ್ನು ಹಿಂಸೆ ಮಾಡದಿರಿ...ಅವರಿಗೆ ಬದುಕಲು ಅವಕಾಶ ನೀಡಿ-ಅಮೀರ್ ಖಾನ್
, ಮಂಗಳವಾರ, 11 ಫೆಬ್ರವರಿ 2014 (09:41 IST)
ಅಮೀರ್ ಖಾನ್ ಕೇವಲ ರೀಲ್ ಹೀರೋ ಮಾತ್ರವಲ್ಲ ರಿಯಲ್ ಹೀರೋ ಸಹ ಆಗಿದ್ದಾರೆ, ಆದಷ್ಟು ತಮ್ಮನ್ನು ಸಮಾಜಹಿತ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವತ್ತ ಆದ್ಯತೆ ನೀಡುತ್ತಾರೆ ಈ ನಟ. ಕಿರುತೆರೆಯಲ್ಲಿ ಪ್ರಸಾರವಾದ ಸತ್ಯಮೇವ ಜಯತೆ ರಿಯಾಲಿಟಿ ಷೋ ಸಮಾಜದ ಅನೇಕ ಬಗೆಯ ಸಮಸ್ಯೆಗಳನ್ನು ಎತ್ತಿ ತೋರಿತು. ಸಮಾಜದಲ್ಲಿ ನಡೆಯುತ್ತಿರುವ ಅನೇಕ ರೀತಿಯ ಅಕ್ರಮಗಳ ಬಗ್ಗೆ ತಿಳಿಸಿತ್ತು. ಮುಖ್ಯವಾಗಿ ಇದು ಸಾಕಷ್ಟು ಸಂಚಲನ ಉಂಟು ಮಾಡಿತ್ತು. ಅಮೀರ್ ಖಾನ್ ಸಮಾಜಕ್ಕೆ , ಪ್ರಕೃತಿಗೆ ಅಹಿತ ಅನ್ನಿಸುವ ಜಾಹೀರಾತುಗಳಲ್ಲಿ ಇನ್ನು ಮುಂದೆ ನಟಿಸ ಬಾರದು ಎನ್ನುವ ನಿರ್ಣಯಕ್ಕೆ ಬಂದಿದ್ದಾರೆ. ಈಗ ಒನ್ ಬಿಲಿಯನ್ ರೈಸಿಂಗ್ ಮೊವ್ಮೆಂಟ್ ಕಾರ್ಯಕ್ರಮಕ್ಕೆ ಆದ್ಯತೆ ನೀಡಲು ಮುಂದಾಗಿದ್ದಾರೆ. ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅನ್ಯಾಯ , ಹಿಂಸೆಯಂತಹ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಕಳೆದ ವರ್ಷ ನಡೆದಂತೆ ಈ ವರ್ಷ ಫೆಬ್ರವರಿ ಹದಿನಾಲ್ಕರಂದು ಈ ಕಾರ್ಯಕ್ರಮ ನಡೆಯುತ್ತದೆ.ಕಳೆದ ವರ್ಷ ಈ ಕಾರ್ಯಕ್ರಮದಲ್ಲಿ 193 ದೇಶಗಳಿಗೆ ಸೇರಿದವರು ಭಾಗವಹಿಸಿದ್ದರು. ತಮಗೆ ಇಷ್ಟ ಬಂದಂತೆ ಹಾಡುತ್ತ, ಡ್ಯಾನ್ಸ್ ಮಾಡುತ್ತಾ ಖುಷಿಯಾಗಿ ಭಾವಹಿಸುವುದೇ ಈ ಕಾರ್ಯಕ್ರಮದ ಮುಖ್ಯ ಸಂಗತಿ ಆಗಿದೆ. ಈ ಬಾರಿ ಅಮೀರ್ ಖಾನ್ ಸ್ತ್ರೀಯರನ್ನು ಗೌರವಿಸಿ, ಹಿಂಸೆಯನ್ನು ಬಿಟ್ಟು ಬಿಡಿ ಎನ್ನುವ ಹಿತವಚನ ನೀಡುವಂತಹ ವೀಡಿಯೋವನ್ನು ಅಂದು ಅರ್ಪಿಸುತ್ತಿದ್ದಾರೆ ಅಮೀರ್. ಆ ಮೂವ್ ಮೆಂಟ್ ನಲ್ಲಿ ಸ್ತ್ರೀ ಪುರುಷರೆನ್ನದೇ ಎಲ್ಲರು ಭಾಗವಹಿಸಿ ಎನ್ನುವ ಕರೆ ನೀಡಿದ್ದಾರೆ ಅಮೀರ್.