Article Bollywood Gossips %e0%b2%b9%e0%b3%83%e0%b2%a4%e0%b2%bf%e0%b2%95%e0%b3%8d %e0%b2%ae%e0%b3%8b%e0%b2%b0%e0%b2%bf %e0%b2%a8%e0%b2%a1%e0%b3%81%e0%b2%b5%e0%b3%86 %e0%b2%ac%e0%b3%87%e0%b2%b3%e0%b3%86 %e0%b2%ac%e0%b3%87%e0%b2%af%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%86%e0%b2%af%e0%b2%82%e0%b2%a4%e0%b3%86 109031700097_1.htm

Daily Horoscope

Select Your Language

Notifications

webdunia
webdunia
webdunia
webdunia

ಹೃತಿಕ್- ಮೋರಿ ನಡುವೆ ಬೇಳೆ ಬೇಯುತ್ತಿದೆಯಂತೆ!

ಹೃತಿಕ್
IFM
`ಹೃತಿಕ್ ರೋಷನ್‌ನಷ್ಟು ಹೆಂಡತಿಗೆ ನಿಷ್ಟನಾಗಿರುವ ಗಂಡ ಬಾಲಿವುಡ್‌ನಲ್ಲಿ ಯಾರೂ ಇಲ್ಲ' ಎಂಬ ಮಾತು ಜಗಜ್ಜಾಹೀರು. ಈ ಪ್ರಸಿದ್ಧಿಗೆ ತಕ್ಕಂತೆ ಹೃತಿಕ್ ಕೂಡಾ ಇಷ್ಟರವರೆಗೆ 'ತಾನಾಯಿತು, ತನ್ನ ಸಿನಿಮಾವಾಯಿತು, ತನ್ನ ಯಶಸ್ಸಾಯಿತು' ಅಂತ ಕುಟುಂಬದೊಂದಿಗೆ ದಿಲ್‌ಖುಷ್ ಆಗಿದ್ದ. ಆದರೆ ಇದೀಗ ಎಲ್ಲಿಂದ ವಕ್ಕರಿಸಿತೋ ಗಾಸಿಪ್ಪಿನ ಭೂತ ಅಂತ ಗೊತಿಲ್ಲ.

ಯಾವ ನಟಿಯರ ಜತೆಗೂ ಗಾಸಿಪ್ಪಿಗೆ ಆಹಾರವಾಗದೆ ಸುಖೀ ದಾಂಪತ್ಯ ನಟಿಸುವ ಈ ಹೃತಿಕ್ ರೋಷನ್ ಎಂಬ ಪರಮ ಸುಂದರಾಂಗನಿಗೆ ಶನಿ ಕಾಟವೋ, ಶುಕ್ರ ದೆಸೆಯೋ ಗೊತ್ತಿಲ್ಲ. ಒಂದೆಡೆ ಜೋಧಾ ಅಕ್ಬರ್‌ನ ಅದ್ಭುತ ರೋಮಾಂಚನ ನೀಡುವ ನಟನೆಗೆ ಫಿಲಂಫೇರ್ ಪ್ರಶಸ್ತಿ. ಇನ್ನೊಂದೆಡೆ ಮೋರಿಯ ಗಾಸಿಪ್ಪಿನ ವಾಸನೆ.

'ಯಾವ ಮೋರಿ, ಏನಪ್ಪಾ ವಾಸನೆ, ಹೃತಿಕ್ ಮನೆಯ ಪಕ್ಕದ ಮೋರಿಯೇ?' ಅಂತೆಲ್ಲಾ ಸಂಶಯ ಬೇಡ. 'ಕೈಟ್' ಚಿತ್ರದ ಚಿತ್ರೀಕರಣದ ಸಂದರ್ಭ ಮೆಕ್ಸಿಕನ್ ಸೆಕ್ಸೀ ನಟಿ ಬರ್ಬರಾ ಮೋರಿ ಜತೆಗೆ ಹೃತಿಕ್ ರೋಷನ್ ನಟಿಸುತ್ತಿರುವ ಸಂದರ್ಭ ಗಾಸಿಪ್ ಹುಟ್ಟಿಕೊಂಡಿದೆ. ಬಾಲಿವುಡ್ ತುಂಬೆಲ್ಲ ಈಗ ಹೃತಿಕ್ ಹಾಗೂ ಮೋರಿ ನಡುವೆ ಏನೋ ಬೇಳೆ ಬೇಯುತ್ತಿದೆ ಅಂತೆಲ್ಲ ಗುಸುಗುಸು ಶುರುವಾಗಿದೆಯಂತೆ.

webdunia
IFM
'ಕೈಟ್' ಚಿತ್ರದ ಎರಡು ವಾರಗಳ ಎಡೆಬಿಡದ ಶೂಟಿಂಗ್‌ನಿಂದ ಸುಸ್ತಾಗಿರುವ ಹೃತಿಕ್ ಈಗ ಚೇಂಜ್‌ಗಾಗಿ ತನ್ನ ಮುದ್ದಿನ ಮಡದಿ ಸುಸಾನ್ ಖಾನ್ ಹಾಗೂ ಮಕ್ಕಳ ಜತೆಗೆ ಲಂಡಲ್ ಸುತ್ತಿ ಬರುವಾಗ ಇತ್ತ ಮೋರಿ ಜತೆಗಿನ ಹೃತಿಕ್ ಸಂಬಂಧ ಎಂಬ ವಾಸನೆ ಹರಡಿಯಾಗಿತ್ತು. ಫಿಲ್ಮ್ ಫೇರ್ ಪ್ರಶಸ್ತಿಯಲ್ಲಿ ಉತ್ತಮ ನಟ ಪ್ರಶಸ್ತಿ ಗಿಟ್ಟಿಸಲು ಬಾರದಿದ್ದ ಸಂದರ್ಭವೇ ಇಂತಹ ಗುಸು ಗುಸು ಶುರುವಾಗಿದ್ದು ಹೃತಿಕ್ ಗಮನಕ್ಕೂ ಬಂದಿತ್ತಂತೆ. ಆದರೆ ಹೃತಿಕ್ ತಾನು ಪ್ರಶಸ್ತಿ ಸ್ವೀಕರಿಸಲು ಬಾರದಿದ್ದುದಕ್ಕೆ ಕಾರಣ ಮೊದಲೇ ನೀಡಿಯಾಗಿತ್ತು. ಅಮ್ಮನಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅಮ್ಮನೊಂದಿಗೆ ಉಳಿಯಬೇಕಾಯಿತು ಎಂದು ಹೃತಿಕ್ ಮೊದಲೇ ಹೇಳಿದ್ದರು. ಆದರೆ ಗಾಸಿಪ್ಪಿಗರು ಕೇಳಬೇಕಲ್ಲಾ?

ಅಂದಹಾಗೆ, ಹೃತಿಕ್‌ಗೂ ಈ ಗಾಸಿಪ್ ಹೇಗೆ ಹುಟ್ಟಿತ ಎಂಬ ಬಗ್ಗೆ ಗೊತ್ತಿದೆ. ಕೈಟ್ ಚಿತ್ರದಲ್ಲಿ ಮೋರಿ ಜತೆಗಿನ ಕೆಲವು ರೊಮ್ಯಾಂಟಿಕ್ ದೃಶ್ಯಗಳು ಇವೆಯಂತೆ. ಅದಕ್ಕಿಂತ ಹೆಚ್ಚಾಗಿ ಹೃತಿಕ್ ಮೋರಿ ಜತೆಗೆ ಸೆಟ್‌ನಿಂದ ಹೊರಗಡೆಯೂ ಗೆಳೆತನದಿಂದ ಭೇಟಿಯಾಗಿದ್ದಾರಂತೆ.

ಇದೆಲ್ಲ ಪಕ್ಕಕ್ಕಿರಲಿ. ಈ ಗಾಸಿಪ್ಪಿಂದ ಈಗ ಹೃತಿಕ್‌ಗೂ ಆತನ ಹೆಂಡತಿಗೂ ಏನೂ ಆಗಿಲ್ಲ ಬಿಡಿ. ಯಾಕೆಂದರೆ, ಹೃತಿಕ್‌ಗಿಂತಲೂ ಮೋರಿ ಜತೆಗೆ ಫ್ರೆಂಡ್ ಆಗಿರೋದು ಹೃತಿಕ್ ಪತ್ನಿ ಸುಸಾನ್ ಅಂತೆ. ಸುಸಾನ್ ಹಾಗೂ ಮೋರಿ ಇಬ್ಬರೂ ಜತೆಗೇ ಶಾಪಿಂಗ್, ಪಾರ್ಟಿ ಅಂತೆಲ್ಲ ಸುತ್ತಾಡಿದ್ದಾರಂತೆ. ಹೀಗಾಗಿ ಗಾಸಿಪ್ಪಿಗರಿಗೇನೂ ಕೆಲಸವಿಲ್ಲ. ಆದರೆ, 'ಈ ಬಗ್ಗೆ ನನಗಂತೂ ಚಿಂತೆಯೇ ಇಲ್ಲ. ನಾನು, ನನ್ನ ಮುದ್ದಿನ ಪತ್ನಿ ಇಬ್ಬರೂ ಕೂಲ್ ಕೂಲ್' ಅನ್ನುತ್ತಾ ಹುಬ್ಬೇರಿಸುತ್ತಾನೆ ಈ ರೋಷನ್ ಕುವರ.
webdunia
IFM

Share this Story:

Follow Webdunia kannada