ಹೃತಿಕ್- ಮೂರು ಸಿನಿಮಾ 35ಕೋಟಿ
Publish Date: Tue, 12 Jun 2007 (17:25 IST)
Updated Date: Tue, 12 Jun 2007 (17:24 IST)
ಬಾಲಿವುಡ್‌ನ ಯುವತಾರೆ ಹೃತಿಕ್ ರೋಷನ್ ಅಡ್‌ಲ್ಯಾಬ್ಸ್‌ನ ಮೂರು ಸಿನಿಮಾಗಳಲ್ಲಿ ನಟಿಸುವ 35ಕೋಟಿ ರೂ. ವ್ಯಾವಹಾರಿಕ ಒಪ್ಪಂದಕ್ಕೆ ಕೊನೆಗೂ ಸಹಿ ಹಾಕಿದ್ದಾರೆ.ಕೆಲ ತಿಂಗಳ ಕಾಲದ ಊಹಾಪೋಹಗಳ ಬಳಿಕ ಪ್ರಕರಣ ಸುಖಾಂತ್ಯಗೊಂಡಿದೆ. ಅಡ್‌ಲ್ಯಾಬ್ಸ್‌ನ ಮನಮೋಹನ್ ಶೆಟ್ಟಿ ಈ ವಿಷಯವನ್ನು ದೃಢೀಕರಿಸಿದ್ದು, ಹೃತಿಕ್ ರೋಷನ್ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಮೂರು ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.ಪ್ರಸ್ತುತ ಒಪ್ಪಂದದಂತೆ ಸಿನಿಮಾಗಳು ತಯಾರಾಗಲಿದ್ದು, ಸೂಪರ್‌ಹಿಟ್ ಸಿನಿಮಾ ಕ್ರಿಷ್‌ನ ಎರಡನೇ ಭಾಗವನ್ನೂ ಹೊರತರುವ ಯೋಜನೆ ಇದರಲ್ಲಿ ಸೇರಿಲ್ಲ, ಅದು ರಾಕೇಶ್ ರೋಶನ್ ಅವರ ಪ್ರತ್ಯೇಕ ಪ್ರಯತ್ನ ಎಂದರು.ಚಿತ್ರಕಥೆಗಳನ್ನು ಆರಿಸುಕೊಳ್ಳುವ ಸ್ವಾತಂತ್ರ್ಯ, ಸಹನಟರು, ನಾಯಕಿಯರನ್ನೂ ಆಯ್ದುಕೊಳ್ಳುವ ಅವಕಾಶ ಹೃತಿಕ್‌ಗೆ ನೀಡಲಾಗಿದೆ. ತನ್ಮಧ್ಯೆ ಕೆಲವೊಂದು ವದಂತಿಗಳಂತೆ ಪ್ರಸ್ತುತ ಒಪ್ಪಂದ ದೀರ್ಘಕಾಲದಿಂದ ಅತಂತ್ರಾವಸ್ಥೆಯಲ್ಲಿತ್ತು.