ಹೃತಿಕ್ ಈಗ ರಿಸ್ಕ್ ಗಳ ರಾಜ ..
, ಶುಕ್ರವಾರ, 21 ಫೆಬ್ರವರಿ 2014 (10:13 IST)
ಸಿನಿಮಾಗಳಲ್ಲಿ ತಮ್ಮ ಪ್ರೀತಿಯ ನಟ ಖಳನಾಯಕರ ಜೊತೆ ಹೊಡೆದಾಟ ಬಡಿದಾಟ ಮಾಡುವಾಗ ಅದನ್ನು ವೀಕ್ಷಿಸುವ ಅವರ ಅಭಿಮಾನಿಗಳು ಖುಷಿಯಿಂದ ಕುಣಿದಾಡುತ್ತಾರೆ. ಅದಕ್ಕಾಗಿ ಹೀರೋಗಳು ಅನೇಕ ಬಗೆಯ ರಿಸ್ಕ್ ತೆಗೆದು ಕೊಳ್ಳುವುದು ಸಾಮಾನ್ಯ. ಈ ಪಟ್ಟಿಗೆ ನಟ ಹೃತಿಕ್ ರೋಶನ್ ಸಹ ಸೇರಿದ್ದಾರೆ. ಅವರು ಇತ್ತೀಚಿಗೆ ಬ್ರೈನ್ ಸರ್ಜರಿ ಮಾಡಿಸಿಕೊಂಡಿದ್ದರು . ಇದಕ್ಕೆ ಪೂರಕವಾಗಿ ಅವರು ಹೆಚ್ಚಿನ ವಿಶ್ರಾಂತಿ ಪಡೆಯ ಬೇಕಿದೆ. ಆದರೆ ಹೃತಿಕ್ ವೈದ್ಯರ ಯಾವ ಮಾತಿಗೂ ಗಣನೆ ನೀಡಿಲ್ಲ, ಅವರ ಹೊಸ ಚಿತ್ರ ಬ್ಯಾಂಗ್ ಬ್ಯಾಂಗ್ ನಲ್ಲಿ ಮಾಡಿರುವ ಸಾಹಸ ತುಂಬಾ ಭಿನ್ನವಾಗಿದೆ ಎಂದಿದ್ದಾರೆ.
ಅಷ್ಟೇ ಅಲ್ಲದೆ ಅತ್ಯಂತ ಕಷ್ಟಕರವಾದ ಫೈಟ್ ಗಳನ್ನೂ ಸಹ ಅವರು ಮಾಡಿದ್ದಾರಂತೆ.ಅವರ ಬದಲಾಗಿ ಡ್ಯೂಪ್ ನಟಿಸಲಿ ಎನ್ನುವ ಯೂನಿಟ್ ಮಾತಿಗೆ ಒಪ್ಪಿಗೆ ನೀಡಿಲ್ಲ ಅವರು. ಸ್ಪೈಡರ್ ಮ್ಯಾನ್ 2 ಕ್ಕೆ ಸಾಹಸ ಮಾಡಿರುವ ಆಂಡಿ ಆರ್ಮ ಸ್ಟ್ರಾಂಗ್ ಅವರ ನೇತೃತ್ವದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ಆಗುತ್ತಿದೆಯಂತೆ. ಒಟ್ಟಾರೆ ಹೃತಿಕ್ ರಿಸ್ಕ್ ಕಂಡು ಇಡಿ ತಂದ ಆಶ್ಚರ್ಯ ಚಕಿತವಾಗಿದೆ ಎನ್ನುವುದೇ ಸದ್ಯದ ಬಾಲಿವುಡ್ ಸುದ್ದಿ!