Publish Date: Mon, 07 Jan 2008 (13:41 IST)
Updated Date: Mon, 07 Jan 2008 (15:33 IST)
ಇಂದು ಬಾಲಿವುಡ್‌ನ ಬಿಪಾಶಾ ಬಸು ಮತ್ತು ಕೋಯಿನಾ ಮಿತ್ರಾ ಜನ್ಮದಿನವಾಗಿದ್ದು, ತಮ್ಮ ಈ ಸಂತಸಭರಿತ ದಿನವನ್ನು ಆಚರಿಸಲು ಇವರಿಬ್ಬರೂ ತಮ್ಮದೇ ಆದ ಯೋಜನೆಯನ್ನು ಹೊಂದಿದ್ದಾರೆ.
ತನ್ನ ಗೆಳೆಯ ಜಾನ್ ಜೊತೆ ಗೋವಾದಲ್ಲಿ ಹುಟ್ಟುಹಬ್ಬ ಆಚರಿಸುವ ಉತ್ಸುಕದಲ್ಲಿರುವ ಬಿಪಾಶಾ, ಬೀಚ್‌ಗೆ ತೆರಳಿ ನನ್ನ ದಿನವನ್ನು ಆನಂದದಿಂದ ಕಳೆಯಲಿದ್ದೇನೆ ಎಂದಿದ್ದಾರೆ.
ಆದರೆ ಬಿಪಾಶಾರ ಹುಟ್ಟುಹಬ್ಬ ಆಚರಣೆಯು ಇಲ್ಲಿಗೇ ಕೊನೆಗೊಳ್ಳುವುದಿಲ್ಲ. ಜನವರಿ 8ರಂದು ಗೋವಾದಿಂದ ಹಿಂತಿರುಗಿ ತನ್ನ ಕುಟುಂಬದ ಸದಸ್ಯರು ಮತ್ತು ಸ್ನೇಹಿತರೊಡನೆ ಮತ್ತೊಮ್ಮೆ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ.
ಪ್ರತಿವರ್ಷದಂತೆ ಈ ಬಾರಿಯು ನನಗೆ ಇಷ್ಟವಾದ ಗಜಾರ್ ಕಾ ಹಲ್ವಾವನ್ನು ನನ್ನ ತಾಯಿ ನನಗಾಗಿ ತಯಾರಿಸಲಿದ್ದಾರೆ ಎನ್ನುತ್ತಾರೆ ಬಿಪಾಶಾ.
ಸದ್ಯಕ್ಕೆ ಮುಂಬಯಿಯಲ್ಲಿರುವ ಕೋಯಿನಾ ಮಿತ್ರಾ ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸುವ ಆಕಾಂಕ್ಷೆಯನ್ನು ಹೊಂದಿದ್ದಾರೆ, ನನ್ನ ಸ್ನೇಹಿತೆ ತನುಶ್ರೀ ದತ್ ವಿಶೇಷವಾದ ಯೋಜನೆಯನ್ನು ರೂಪಿಸಿದ್ದಾರೆಂದು ನನಗೆ ಗೊತ್ತು ಆದರೆ ಅದೇನೆಂದು ಮಾತ್ರ ಗೊತ್ತಿಲ್ಲ ಎಂದು ಮಿತ್ರಾ ಹೇಳುತ್ತಾರೆ.