Publish Date: Sat, 22 Dec 2007 (12:10 IST)
Updated Date: Sat, 22 Dec 2007 (12:09 IST)
ಚಿತ್ರನಿರ್ಮಾಪಕ ಅನಿಲ್ ಕಪೂರ್ ಮತ್ತು ರೋಹಿತ್ ಶೆಟ್ಟಿ ಅವರೊಂದಿಗೆ ಪ್ಲಂ ಚಿತ್ರಗಳಿಗೆ ಸಹಿ ಹಾಕಿರುವ ಆರ್ಶದ್ ವಾರ್ಸಿ, ರಾಕೇಶ್ ರೋಶನ್ ಅವರ ಚಿತ್ರದಲ್ಲಿ ಹುಚ್ಚನ ಪಾತ್ರದಲ್ಲಿ ನಟಿಸಲಿದ್ದಾರೆ.
ಮೊದಲ ಬಾರಿಗೆ ಹುಚ್ಚನ ಪಾತ್ರದಲ್ಲಿ ನಟಿಸಲಿದ್ದೇನೆ. ಈವರೆಗೆ ನಾನು ಇಂತಹ ಪಾತ್ರ ಮಾಡಿರಲಿಲ್ಲ. ನಾನು ಮಾತ್ರ ಅಲ್ಲ ಯಾರೂ ಕೂಡಾ ಇಂತಹ ಪಾತ್ರದಲ್ಲಿ ಈ ಮೊದಲು ನಟಿಸಿರಲಿಕ್ಕಿಲ್ಲ ಎಂದು ಅರ್ಶದ್ ಸುದ್ದಿಗಾರರಿಗೆ ಹೇಳಿದ್ದಾರೆ.
ಕಳೆದ ಏಳು ವರ್ಷಗಳಲ್ಲಿ ರಾಕೇಶ್ ಅವರು ನಿರ್ಮಿಸಿದ ಚಿತ್ರಗಳಲ್ಲಿ ಈ ಚಿತ್ರವು ಹೃತಿಕ್ ಅವರು ಅಭಿನಯಿಸದ ಮೊದಲ ಚಿತ್ರವಾಗಿದೆ. ಈ ಚಿತ್ರವನ್ನು ರಾಕೇಶ್ ರೋಶನ್ ಅವರ ಸಹಾಯಕ ರಾಜ ಸೇನ್ ನಿರ್ದೇಶಿಸುತ್ತಿದ್ದಾರೆ.
ಯಶ್ ರಾಜ್ ಫಿಲ್ಸ್ಮ್ ರೀತಿಯಲ್ಲಿ ಬಹುಚಿತ್ರನಿರ್ಮಾಣದತ್ತ ತನ್ನ ನಿರ್ಮಾಣ ಕೇಂದ್ರವನ್ನು ವೃದ್ಧಿಸುವ ನಿಟ್ಟಿನಲ್ಲಿ ರೋಶನ್ ಆತ್ಮವಿಶ್ವಾಸದಿಂದ ಈ ಚಿತ್ರದ ಮೂಲಕ ಮುನ್ನಡೆಯುತ್ತಿದ್ದಾರೆ.