ಹೀರೋ ಚಿತ್ರದಲ್ಲಿ ಗೋವಿಂದ್ ನಟಿಸುವುದು ಡೌಟ್
Publish Date: Tue, 20 Aug 2013 (10:53 IST)
Updated Date: Tue, 20 Aug 2013 (10:52 IST)
ಎಂಬತ್ತರ ದಶಕದಲ್ಲಿ ಬಿಡುಗಡೆಯಾಗಿದ್ದ ಹೀರೋ ಚಿತ್ರ ಬಾಕ್ಸಾಫೀಸಿನಲ್ಲಿ ಸಖತ್ ಹಿಟ್ ಆಗಿ ಸಾಕಷ್ಟು ದುಡ್ಡು ಗಳಿಸಿದ್ದು ಗೊತ್ತೇ ಇದೆ. ಅಂದು ಅದನ್ನು ಸುಭಾಷ್ ಘಾಯ್ ನಿರ್ದೇಶಿಸಿದ್ದರು. ಅದರ ಹಕ್ಕುಗಳನ್ನು ಸಲ್ಮಾನ್ ಖಾನ್ ಕೊಂಡಿದ್ದು ಸೂರಜ್ ಪಾಂಚೋಲಿ ಹಾಗೂ ಆದಿತ್ಯ ಅದರ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಸುದ್ದಿಯೂ ಹೊರಬಿದ್ದಿದೆ. ನಾಯಕಿಯ ಅಣ್ಣನ ಪಾತ್ರವನ್ನು ನಟ ಗೋವಿಂದ್ ಮಾಡುತ್ತಾರೆ ಎಂಬ ಮಾಹಿತಿ ಹೊರಬಿದ್ದಿತ್ತು.ಹಲವು ವರ್ಷಗಳ ಬಳಿಕ ಗೋವಿಂದ್ ಮತ್ತೆ ಬಣ್ಣ ಹಚ್ಚುತ್ತಾರೆ ಎಂದು ಹೇಳಲಾಗಿತ್ತು. ಈಗ ಸಿಕ್ಕಿರುವ ಮೂಲಗಳ ಪ್ರಕಾರ ಗೋವಿಂದ ಈ ಪಾತ್ರವನ್ನು ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಎರಡು ಕಾರಣಗಳಿವೆ. ಚಿತ್ರದ ನಾಯಕಿಯಾಗಿ ನನ್ನ ಮಗಳನ್ನು ಆಯ್ಕೆ ಮಾಡಿ ಎಂದು ಸಲ್ಲು ಅವರನ್ನು ಗೋವಿಂದ್ ಕೇಳಿಕೊಂಡಿದ್ದರಂತೆ. ಆದರೆ ನಾಯಕಿಯಾಗಿ ಸುನಿಲ್ಶೆಟ್ಟಿ ಮಗಳು ಆತಿಥ್ಯ ಆಯ್ಕೆಯಾಗಿದ್ದಾರೆ. ಇದಾದ ಬಳಿಕ ಪಾತ್ರವೊಂದನ್ನು ನಿರ್ವಹಿಸುವಂತೆ ಸಲ್ಲು ಕೇಳಿದ್ದಾರೆ. ಆಗ ಗೋವಿಂದ್ ನಾನು ನಾಯಕಿಯ ಅಪ್ಪನಷ್ಟು ವಯಸ್ಸಾಗಿರುವವ, ಆಕೆಯ ಅಣ್ಣನ ಪಾತ್ರ ಮಾಡು ಎಂದರೆ ಹೇಗೆ ಮಾಡಲಿ ಎಂದು ಪ್ರಶ್ನಿಸಿದ್ದಾರೆ. ಕಥೆ ಕೇಳಿದ ಬಳಿಕ ನಟನೆಯ ಬಗ್ಗೆ ನಿರ್ಧರಿಸುವುದಾಗಿ ಅವರು ತಿಳಿಸಿದ್ದಾರೆ. ಹೀಗಾಗಿ ಅವರು ಚಿತ್ರದಲ್ಲಿ ನಟಿಸುವುದು ಇನ್ನೂ ಸಂಶಯವಾಗಿಯೇ ಉಳಿದಿದೆ.