ಮಲ್ಲಿಕಾ ಶೆರಾವತ್ ಖಳ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಪ್ರಶಾಂತ್ ಛಡ್ಡಾರ ಆಪ್ ಕಾ ಸುರೂರ್-ದಿ ಮೂವಿ-ದಿ ರಿಯಲ್ ಸ್ಟೋರಿಯಲ್ಲಿ ವ್ಯಾಂಪ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ.
ಚಿತ್ರದಲ್ಲಿ ಹುಚ್ಚು ಅಭಿಮಾನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಮಲ್ಲಿಕಾ, ತನ್ನ ಆದರ್ಶವಾಗಿರುವ ಹಿಮೇಶ್ ರೇಶಮ್ಮಿಯ ಮತ್ತೊಬ್ಬರನ್ನು ಪ್ರೀತಿಸುವುದನ್ನು ಸಹಿಸಿಕೊಳ್ಳಲಾಗದೆ, ಅವರ ಜೀವನದಲ್ಲಿ ಮತ್ತೆ ಮತ್ತೆ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ.
ತಮ್ಮ ಈ ಚಿತ್ರ ಸುಖಾಂತವನ್ನು ಹೊಂದಿರುವುದೊ ಅಥವಾ ದುಃಖಾಂತವನ್ನು ಹೊಂದಿರುವುದೊ ಎನ್ನುವುದನ್ನು ಇನ್ನೂ ನಿರ್ಧರಿಸದ ಚಿತ್ರದ ನಾಯಕ ಹಿಮೇಶ್, ಚಿತ್ರದ ಅಂತ್ಯದ ಬಗ್ಗೆ ಎರಡು ಮನಸ್ಸನ್ನು ಹೊಂದಿದ್ದಾರೆ.
ಈ ಚಿತ್ರವು ಜೂನ್ 29ರಂದು ತೆರೆ ಕಾಣಲಿದೆ ಎಂದು ಮೂಲಗಳು ತಿಳಿಸಿವೆ.