Article Bollywood Gossips %e0%b2%b9%e0%b2%bf%e0%b2%9f%e0%b3%8d %e0%b2%86%e0%b2%a6 %e0%b2%9c%e0%b2%ac%e0%b3%8d %e0%b2%b5%e0%b2%bf %e0%b2%ae%e0%b3%86%e0%b2%9f%e0%b3%8d 107110500028_1.htm

Select Your Language

Notifications

webdunia
webdunia
webdunia
webdunia

ಹಿಟ್ ಆದ ಜಬ್ ವಿ ಮೆಟ್

ಹಿಟ್
IFM
ಜಬ್ ವಿ ಮೆಟ್ ಚಿತ್ರ ಬಿಡುಗಡೆಯಾಗಿ 10 ದಿನಗಳು ಕಳೆದವು. ಚಿತ್ರನಿರ್ಮಾಪಕ ಇಮ್ತಿಯಾಜ್ ಅಲಿ ಧ್ವನಿಯಲ್ಲಿ ಯಶಸ್ವಿ ಚಿತ್ರವೊಂದನ್ನು ನೀಡಿದ ಆತ್ಮವಿಶ್ವಾಸ ತುಂಬಿತುಳುಕುತ್ತಿದೆ. ಎಲ್ಲ ವರ್ಗಗಳಿಂದ ಮೆಚ್ಚುಗೆಯ ನುಡಿಗಳು ಬರುತ್ತಿರುವ ನಡುವೆ ಹಿಟ್ ಚಿತ್ರವೆಂದೇ ಘೋಷಣೆಯಾಗಿದೆ.

ಪ್ರತಿಕ್ರಿಯೆ ಉತ್ತಮವಾಗಿದೆ.ನಾನು ಉತ್ತಮ ಗಳಿಕೆ ನಿರೀಕ್ಷಿಸಿದ್ದೆ. ಆದರೆ ಬಾಕ್ಸ್‌ಆಫೀಸ್‌ನಲ್ಲಿ ಚಿತ್ರದ ಗಳಿಕೆಯು ನನ್ನ ನಿರೀಕ್ಷೆಗೆ ಮೀರಿದೆ ಎಂದು ಅವರು ಖಚಿತಪಡಿಸಿದ್ದಾರೆ. ಚಿತ್ರದ ಬಗ್ಗೆ ಕೆಲವು ಅಂಕಿಅಂಶಗಳನ್ನು ಬಿಚ್ಚಿಟ್ಟ ಅವರು, ಮುಂಬೈ ನಗರದಲ್ಲೇ ಮೊದಲ ವಾರ ಚಿತ್ರಪದರ್ಶನ 204ರಿಂದ ಎರಡನೇ ವಾರಕ್ಕೆ ಪ್ರತಿದಿನ 310 ಪ್ರದರ್ಶನಗಳಿಗೆ ಏರಿಕೆಯಾಗಿದೆ.

ಪಂಜಾಬ್‌ನಲ್ಲಿ 68 ಪ್ರದರ್ಶನಗಳಿಂದ 99 ಪ್ರದರ್ಶನಗಳಿಗೆ ಏರಿಕೆಯಾಗಿದೆ. ವಿದೇಶಗಳಲ್ಲಿ ಕೂಡ ಚಿತ್ರ ದೊಡ್ಡ ಯಶಸ್ಸು ಪಡೆದಿದೆ ಎಂದು ಅವರು ನುಡಿದರು.
ಆದರೆ ಮೂರನೇ ವಾರದ ಕತೆಯೇನು? ಓಂ ಶಾಂತಿ ಓಂ ಮತ್ತು ಸವಾರಿಯ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಜಬ್ ವಿ ಮೆಟ್ ಚಿತ್ರಮಂದಿರಗಳಿಂದ ಕಣ್ಮರೆಯಾಗಬಹುದೇ?


ಇದನ್ನು ನಗುವಿನಿಂದ ತಳ್ಳಿಹಾಕದೇ ಇಮ್ತಿಯಾಜ್ ಗಂಭೀರವದನರಾಗಿ ನಮಗೆ ಮೂರನೇ ವಾರದಲ್ಲಿ ಕೂಡ ಪ್ರದರ್ಶನ ನೀಡುವ ಭರವಸೆ ನೀಡಲಾಗಿದೆ, ಮಲ್ಟಿಪ್ಲೆಕ್ಸ್‌ಗಳು ಪ್ರಿಂಟ್‌ಗಳನ್ನು ಪೂರ್ಣವಾಗಿ ತೆಗೆಯುವುದಿಲ್ಲ.ಪ್ರತಿದಿನ ಕನಿಷ್ಠ 2-4 ಪ್ರದರ್ಶನಗಳನ್ನು ನೀಡುವುದಾಗಿ ಹೇಳಿವೆಯೆಂದು ಇಮ್ತಿಯಾಜ್ ಹೇಳಿದರು.

Share this Story:

Follow Webdunia kannada