ಹಿಂದಿನಲ್ಲು ಶುರು ಆಯಿತು ಮೆಂಟಲ್ ಸಿನೆಮಾಗಳು
Publish Date: Fri, 21 Jun 2013 (11:59 IST)
Updated Date: Fri, 21 Jun 2013 (11:58 IST)
ಕನ್ನಡ ಮಾತ್ರವಲ್ಲ ಹಿಂದಿ ಸಿನೆಮಾ ರಂಗಕ್ಕೂ ಮೆಂಟಲ್ ಎಂಬ ಪದ ಬಹು ಆಪ್ತವಾದಂತಿದೆ. ಕನ್ನಡದಲ್ಲಿ ಮೆಂಟಲ್ಮಂಜ ಚಿತ್ರ ಬಂದ ಬಳಿಕ ಇದೀಗ ಹಿಂದಿಯಲ್ಲಿ ಮೆಂಟಲ್ ಹೆಸರಿನ ಹೊಸ ಚಿತ್ರವೊಂದರಲ್ಲಿ ಸಲ್ಮಾನ್ ನಟಿಸುತ್ತಿದ್ದಾರೆ. ಕನ್ನಡ ಚಿತ್ರರಂಗ ಅಷ್ಟಾಗಿ ಕೇಳಿರದ ಹೊಸ ಪ್ರತಿಭೆ ಡೈಸಿ ಶಾ ಚಿತ್ರದ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಕನ್ನಡ ಚಿತ್ರರಂಗದ ಘಟಾನುಘಟಿಗಳ ಹುಬ್ಬೇರಿಸುವಂತೆ ಮಾಡಿದ್ದಾಳೆ.ಡೈಸಿ ಮೂಲತಃ ಓರ್ವ ಡ್ಯಾನ್ಸರ್. ಗಣೇಶ್ ಆಚಾರ್ಯ ಟೀಮ್ನಲ್ಲಿ ನೃತ್ಯಪಟುವಾಗಿರುವ ಈಕೆ ಕನ್ನಡದಲ್ಲಿ ಪ್ರಜ್ವಲ್ ದೇವರಾಜ್ ಜೊತೆ ಭದ್ರ ಚಿತ್ರದಲ್ಲಿ ನಟಿಸಿದ್ದಾರೆ. ಬಳಿಕ ಜಗ್ಗೇಶ್ ಅವರ ಬಾಡಿಗಾರ್ಡ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.
ಗಜೇಂದ್ರ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಜತೆಯಾಗಿ ನಟಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಬರುವ ಮುನ್ನ ಬ್ಲಡೀ ಇಷ್ಕ್ ಚಿತ್ರದ ಡೇಂಜರ್ ಹೆ ಲೈಲಾ...ಹಾಡಿನಲ್ಲೂ ಕಾಣಿಸಿಕೊಂಡಿದ್ದರು. ಬಚ್ಚನ್ ಚಿತ್ರದ ಹಾಡೊಂದರಲ್ಲೂ ಈಕೆ ಕಾಣಿಸಿಕೊಂಡಿರುವುದು ವಿಶೇಷ.ಇದೀಗ ಸಲ್ಮಾನ್ ಖಾನ್ ಜೊತೆಗಿನ ಮೆಂಟಲ್ ಚಿತ್ರದಲ್ಲಿ ನಟಿಸುವುದಕ್ಕೆ ಸಹಿ ಹಾಕಿದ್ದಾರೆ. ತಮಿಳಿನಲ್ಲೂ ಡೈಸಿ ಶಾ 'ಮೌನಂ ಮಾನಾ ನೇರಂ' ಚಿತ್ರದಲ್ಲಿ ನಟಿಸಲಿದ್ದಾರೆ