Article Bollywood Gossips %e0%b2%b9%e0%b2%bf%e0%b2%82%e0%b2%a6%e0%b2%95%e0%b3%8d%e0%b2%95%e0%b3%8b%e0%b2%a1%e0%b2%bf%e0%b2%a6 %e0%b2%95%e0%b3%8c%e0%b2%b6%e0%b2%bf%e0%b2%95%e0%b3%8d %e0%b2%a8%e0%b3%86%e0%b2%a8%e0%b2%aa%e0%b3%81 107100400020_1.htm

Daily Horoscope

Select Your Language

Notifications

webdunia
webdunia
webdunia
webdunia

ಹಿಂದಕ್ಕೋಡಿದ ಕೌಶಿಕ್ ನೆನಪು

ಸತೀಶ್ ಕೌಶಿಕ್‌
ಸತೀಶ್ ಕೌಶಿಕ್‌ರ ತೇರೆಸಂಗ್ ಚಿತ್ರದ ತಾರಾಗಣಕ್ಕೆ ಆಯ್ಕೆ ಮಾಡುವ ಹಿಂದೆ ಒಂದು ಆಸಕ್ತಿದಾಯಕ ಕತೆಯಿದೆ. ಚಿತ್ರದ ಮುಖ್ಯಪಾತ್ರ ರಸ್ಲಾನ್ ಮಮ್ತಾಜ್‌ರ ಆಯ್ಕೆಗೆ ಸತೀಶ್ ಕೌಶಿಕ್ ಮೊದಲಿಗೆ ಒಪ್ಪಿಕೊಳ್ಳಲಿಲ್ಲವಂತೆ.

ನೀನು ಪಾತ್ರಕ್ಕೆ ಹೊಂದುವುದಿಲ್ಲ ಎಂದು ಸತೀಶ್ ಕೌಶಿಕ್ ಹೇಳಿದರಂತೆ. ರಸ್ಲಾನ್ ತಾನು ಪಾತ್ರಕ್ಕೆ ಸೂಟ್ ಆಗುವೆ ಮತ್ತು ಪಾತ್ರಕ್ಕೆ ಒಪ್ಪುವ ಯಾವ ನಟನೆಗೂ ಸಿದ್ಧ ಎಂದು ಹೇಳಿದರೂ ಕೌಶಿಕ್‌ಗೆ ಮನದಟ್ಟಾಗಲಿಲ್ಲವಂತೆ.

ರಸ್ಲಾನ್ ಈ ನಿರಾಕರಣೆಯನ್ನು ಒಳ್ಳೆಯ ಮನೋಭಾವದಿಂದ ಸ್ವೀಕರಿಸಿ, ನಿಮ್ಮ ನಿರ್ಧಾರ ಹಿಂತೆಗೆದು ತನ್ನನ್ನು ಮುಖ್ಯಪಾತ್ರದಲ್ಲಿ ಆಯ್ಕೆ ಮಾಡುವಿರೆಂದು ಆಶಿಸುವುದಾಗಿ ಕೌಶಿಕ್‌ಗೆ ಹೇಳಿದ. ಆಗ ಸತೀಶ್‌ ನೆನಪು ಹಿಂದಕ್ಕೋಡಿತು.

ಕೆಲವು ವರ್ಷಗಳ ಹಿಂದೆ ಚಿತ್ರದಲ್ಲಿ ಪಾತ್ರ ನೀಡುವಂತೆ ಖ್ಯಾತ ಚಿತ್ರನಿರ್ಮಾಪಕ ಶೇಖರ್ ಕಪೂರ್ ಅವರನ್ನು ಸತೀಶ್ ದುಂಬಾಲುಬಿದ್ದಾಗ ಅವರು ಆಸಕ್ತಿ ತೋರಿಸಲಿಲ್ಲವಂತೆ. ಆಗ ಸತೀಶ್ ಕೂಡ ರಸ್ಲಾನ್ ಹೇಳಿದ ರೀತಿಯಲ್ಲೇ "ನಿಮಗೆ ಬೇರೆ ದಾರಿ ಸಿಗದೇ ನನ್ನನ್ನೇ ವಾಪಸು ಕರೆಯುತ್ತೀರಿ" ಎಂದು ಹೇಳಿದ್ದರಂತೆ. ಅದೇ ರೀತಿ ಶೇಖರ್ ಕೂಡ ಮಣಿದು ವಾಪಸು ಕರೆಸಿದ್ದರು.

ಸತೀಶ್ ಕೌಶಿಕ್ ಪ್ರಕಾರ ಚಿತ್ರವು ಶಾಲಾ ಮಕ್ಕಳನ್ನು ಕುರಿತದ್ದಾಗಿದೆ. ತೇರೆ ಸಂಗ್‌ನಲ್ಲಿ ರಸ್ಲಾನ್ ಹಿರಿಯ ನಟಿ ಅಂಜನಾ ಮಮ್ತಾಜ್ ಪುತ್ರ. ಶೀನಾ ಶಹಬದಿಗೆ ಜೋಡಿಯಾಗಿ ನಟಿಸಿದ್ದಾನೆ. ತೇರೆ ಸಂಗ್‌ನಲ್ಲಿ ಶೀನಾ 15 ವರ್ಷದ ಬಾಲಕಿಯ ಪಾತ್ರದಲ್ಲಿ ನಟಿಸಿದ್ದಾಳೆ. ಅನುಪಂ ಖೇರ್ ವಿಶೇಷ ಪಾತ್ರವಿದೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

Share this Story:

Follow Webdunia kannada