Publish Date: Tue, 07 Aug 2007 (11:13 IST)
Updated Date: Tue, 07 Aug 2007 (11:12 IST)
ಗಾಂಧಿಮೈ ಫಾದರ್ ಎಂಬ ಐತಿಹಾಸಿಕ ಚಿತ್ರ ನಿರ್ಮಿಸಿ ಇದೀಗ ತೆರೆಗಿಳಿಸುವ ಸಿದ್ಧತೆಯಲ್ಲಿರುವ ಬಾಲಿವುಡ್‌ನ ಸಾಧಕ ನಟ ಅನಿಲ್‌ಕಪೂರ್ ಅವರ ಮೂಸೆಯಿಂದ ಹೊಸ ಹಾಸ್ಯಚಿತ್ರ ಶಾರ್ಟ್‌ಕಟ್ ತಯಾರಾಗಲಿದೆ.
ಶಾರ್ಟ್‌ಕಟ್ ಸಂಪೂರ್ಣ ಹಾಸ್ಯಪ್ರಧಾನ ಚಿತ್ರ ಎಂಬುದಾಗಿ ಅನಿಲ್ ಘೋಷಿಸಿದ್ದಾರೆ. ಇದರಲ್ಲಿ ಅಕ್ಷಯ್ ಖನ್ನಾ, ವಿವಾಹ್ ಖ್ಯಾತಿಯ ಅಮೃತಾ ರಾವ್ ಪ್ರಮುಖ ಪಾತ್ರದಲ್ಲಿರುತ್ತಾರೆ.
ಚಿತ್ರಕಥೆಯನ್ನು ನೀರಜ್ ವೋರಾ ಸಿದ್ಧಪಡಿಸಿದ್ದಾರೆ. ಪ್ರಿಯದರ್ಶನ್ ಇವರ ಚಿತ್ರಗಳಿಗೆಲ್ಲಾ ಕಥೆ ಸಂಯೋಜಿಸಿದ್ದ ವೋರಾ ಅವರ ಫಿರ್ ಹೇರಾಫೇರಿ ನಕ್ಕುನಗಿಸಿರುವುದು ಈಗ ಇತಿಹಾಸ.
ಗಾಂಧಿ ಮೈ ಫಾದರ್ ಚಿತ್ರದಲ್ಲಿ ನಟಿಸಿಲ್ಲವೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅನಿಲ್ ಕಪೂರ್ ನಾನಾ ಪಾತ್ರಗಳಿಗೆ ತಕ್ಕವನಲ್ಲ ಎಂಬ ವಿನಯವಂತಿಕೆ ತೋರಿದರು.