Publish Date: Sun, 29 Jul 2007 (14:01 IST)
Updated Date: Sun, 29 Jul 2007 (14:01 IST)
ಕೊಂಕಣಾ ಸೇನ್ ಶರ್ಮಾ, ವಿಭಿನ್ನ ಪಾತ್ರಗಳನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಬಲ್ಲ ಸಮರ್ಥ ಸಿನಿಮಾ ಕಲಾವಿದೆ. ಸನ್ ಗ್ಲಾಸ್ ಚಿತ್ರದಲ್ಲಿ ಅಭಿನಯಿಸುತ್ತಿರುವ ಕೊಂಕಣಾ. ಈ ಬಾರಿ ನಮ್ಮೇದುರು ಬರುತ್ತಿರುವುದು, ಹಾಸ್ಯ ಪಾತ್ರದಲ್ಲಿ.
ಅದೇನೊ ಅಂತಾರಲ್ಲ ಎಲ್ಲ ಬಿಟ್ಟ ಭಂಗಿ ನೆಟ್ಟ ಅನ್ನೊ ಹಂಗೆ.. ಕಾಮಿಡಿ ಪಾತ್ರ ಯಾಕೆ ಅಂತ ಕೇಳಿದರೆ ಸುಮ್ಮನೆ ಕಾಮಿಡಿಯಲ್ಲೂ ಒಂದು ಕೈ ನೋಡುವಾ ಅಂತ ಹೇಳ್ತಾ ಕಣ್ ಮಿಟಕಸ್ತಾಳೆ ಬಂಗಾಳಿ ಚೆಲುವೆ.
ಸನ್ ಗ್ಲಾಸ್ ಚಿತ್ರ ನನಗೆ ಬಹಳ ಇಂಪಾರ್ಟೆಂಟ್ ಏಕೆಂದರೆ ಇವರೆಗೆ ನಾನು ಕಾಮಿಡಿ ಪಾತ್ರಗಳಲ್ಲಿ ಅಭಿನಯಿಸೇ ಇಲ್ಲ. ಆದ್ದರಿಂದ ಇದು ಒಂದು ರೀತಿ ಸವಾಲು.
ಇಲ್ಲಿವರೆಗೆ ಗಂಭಿರ ಪಾತ್ರಗಳಿಗೆ ಮಹತ್ವ ನೀಡುತ್ತಿದ್ದ ಮತ್ತು ಬಹುತೇಕ ಅಂತಹ ಚಿತ್ರಗಳಿಂದ ಒಂದು ವರ್ಗದ ಪ್ರೆಕ್ಷಕರನ್ನು ಗಟ್ಟಿಯಾಗಿ ಹಿಡಿದುಕೊಂಡ ಕೊಂಕಣಾ ಸೇನ್ ಇದೀಗ ಕಮರ್ಶಿಯಲ್ ಚಿತ್ರಗಳತ್ತ ಒಲವು ತೋರುತ್ತಿದ್ದು, ಪ್ರದೀಪ್ ಸರ್ಕಾರ್ ನಿರ್ಧೇಶನದ ಲಗಾ ಚುನರಿ ಮೆಂ ಡಾಗ್ ಮತ್ತು ಅನೀಲ್ ಮೆಹ್ತಾ ನಿರ್ಧೇಶನದ ಆಜಾ ನಾಚ್ಲೆ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಅಂದ ಮೇಲೆ ಕೊಂಕಣಾ ಕೂಡ ಕ್ಲಾಸ್ ಬಿಟ್ಟು ಮಾಸ್‌ಗೆ ವಲಸೆ ಬಂದಂತಾಯಿತು.
ಪೇಜ್ ಥ್ರಿ, 15 ಪಾರ್ಕ್ ಅವೆನ್ಯೂ, ಒಂಕಾರ್ ಚಿತ್ರದಲ್ಲಿನ ಸಶಕ್ತ ಅಭಿನಯ ಚಿತ್ರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.