Article Bollywood Gossips %e0%b2%b9%e0%b2%be%e0%b2%b2%e0%b2%bf%e0%b2%b5%e0%b3%81%e0%b2%a1%e0%b3%8d%e2%80%8c%e0%b2%97%e0%b3%86 %e0%b2%9c%e0%b2%bf%e0%b2%97%e0%b2%bf%e0%b2%a6 %e0%b2%b0%e0%b2%a4%e0%b2%bf %e0%b2%85%e0%b2%97%e0%b3%8d%e0%b2%a8%e0%b2%bf%e0%b2%b9%e0%b3%8b%e0%b2%a4%e0%b3%8d%e0%b2%b0%e0%b2%bf 107062600015_1.htm

Daily Horoscope

Select Your Language

Notifications

webdunia
webdunia
webdunia
webdunia

ಹಾಲಿವುಡ್‌ಗೆ ಜಿಗಿದ ರತಿ ಅಗ್ನಿಹೋತ್ರಿ

ಹಾಲಿವುಡ್‌ಗೆ
IFM
ಬಾಲಿವುಡ್ ತಾರೆ, ಕಿರುತೆರೆ ಕಲಾವಿದೆ ರತಿ ಅಗ್ನಿಹೋತ್ರಿ ಹಾಲಿವುಡ್‌ಗೆ ಜಿಗಿದಿದ್ದಾರೆ. ಇಂಗ್ಲಿಷ್ ಚಿತ್ರ 'ಲವ್‌ ಹ್ಯಾಸ್ ನೊ ಲ್ಯಾಂಗ್ವೇಜ್'ನಲ್ಲಿ ಈಕೆಗೆ ಪ್ರಮುಖ ಪಾತ್ರವಿದೆ.

ಆಂಗ್ಲಸಿನಿಮಾವನ್ನು ನ್ಯೂಝಿಲ್ಯಾಂಡ್ ನಿರ್ದೇಶಕ ಕಾಹ್ನ್ ಖಾನ್ ನಿರ್ದೇಶಿಸುತ್ತಿದ್ದಾರೆ. ಸೆಲೀನಾ ಜೈಟ್ಲಿ,ಕಿರಣ್‌ ಕುಮಾರ್ ಹಾಗೂ ನ್ಯೂಝಿಲೆಂಡ್‌ನ ಪ್ರಮುಖ ಕಲಾವಿದರು ಇದರಲ್ಲಿರುತ್ತಾರೆ.

ಸಿನಿಮಾದ ಹೆಸರೇ ಸೂಚಿಸುವಂತೆ ಇದೊಂದು ಪ್ರೇಮಕಥೆ. ರತಿ ಅಗ್ನಿಹೋತ್ರಿ ಸೆಲೀನಾಳ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿವಿಧ ಸಾಂಸ್ಕ್ಚತಿಕ ಹಿನ್ನೆಲೆ ಇರುವ ಕಲಾವಿದರೊಂದಿಗೆ ದುಡಿಯಲು ಅವಕಾಶ ಲಭಿಸಿದೆ ಎಂದು ರತಿ ಖುಷಿಯಲ್ಲಿದ್ದಾರೆ.

ಪ್ರಸ್ತುತ ಚಿತ್ರ ಭರದಿಂದ ಶೂಟಿಂಗ್ ಕಾರ್ಯದಲ್ಲಿದೆ. ಜುಲೈ ವೇಳೆಗೆ ಪ್ರದರ್ಶನಕ್ಕೆ ಸಿದ್ಧವಾಗಲಿದೆ.ರತಿ ಅವರು ಸದ್ಯ ಕುಛ್ ಲವ್ ಕುಛ್ ಡ್ರಾಮಾ ಚಿತ್ರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರೊಂದಿಗೆ ನ್ಯೂಝಿಲೆಂಡ್‌ಗೆ ಜಗಿಯಲಿದ್ದಾರೆ.

ಬಾಲಿವುಡ್‌ನ ಪ್ರತಿಭಾವಂತ ಹಿರಿಯ ಕಲಾವಿದೆ ರತಿ ಅಗ್ನಿಹೋತ್ರಿ ಈ ಮೊದಲು ಸುಷ್ಮಿತಾ ಸೆನ್ ಅವರೊಂದಿಗೆ ಕರ್ಮಾ,ಕನ್ಫೆಷನ್ ಹಾಗೂ ಹೋಳಿ ಚಿತ್ರಗಳಲ್ಲಿ ಮಿಂಚಿದ್ದರು.

Share this Story:

Follow Webdunia kannada