ಹಂಸಿಕಾ ಮೋಟ್ವಾನಿ ಮದುವೆ ಕಾರಣಕ್ಕೆ ಇತ್ತೀಚೆಗೆ ಸುದ್ದಿಯಲ್ಲಿದ್ದುದ್ದು ನಿಮಗೆಲ್ಲಾ ಗೊತ್ತೇ ಇದೆ. ಅದಾದ ಬಳಿಕ ಅರನಮ್ನೈ ಎಂಬ ಹೆಸರಿನ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರಂತೆ. ಇದೊಂದು ಕಾಮಿಡಿ ಕಮ್ ಹಾರರ್ ಚಿತ್ರ.
ಕಾಂಚನಾ ಚಿತ್ರದ ರೀತಿಯಲ್ಲೇ ಭಯದೊಂದಿಗೆ ನಗಿಸುವುದು ಚಿತ್ರದ ಕಥಾವಸ್ತು. ಈಗಾಗಲೇ ಚಿತ್ರೀಕರಣ ಆರಂಭವಾಗಿದೆಯಂತೆ. ಈವರೆಗೆ ನಾನು ನಟಿಸಿದ ಎಲ್ಲಾ ಚಿತ್ರಗಳಿಂದ ಇದು ಭಿನ್ನವಾದುದು ಎಂದು ಹಂಸಿಕಾ ಹೇಳಿಕೊಂಡಿದ್ದಾರೆ.
ಸಿನೆಮಾದ ಕೆಲ ಸ್ಟಿಲ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಆ ಚಿತ್ರಗಳ ಪ್ರಕಾರ ಹಂಸಿಕಾ ಇಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಲಂಗ ದಾವಣಿ ದೊಟ್ಟ ಅವರ ಚಿತ್ರಕ್ಕೆ ಸಾಕಷ್ಟು ಲೈಕ್‌ಗಳೂ ಬಂದಿವೆ. ನನ್ನ ಅಭಿಮಾನಿಗಳು ನನ್ನ ಹೊಸ ವೇಷವನ್ನು ನೋಡಿ ಸಂತಸಪಡಲಿ ಎಂಬ ಕಾರಣಕ್ಕೆ ಸ್ಟಿಲ್‌ಗಳನ್ನು ರಿಲೀಸ್ ಮಾಡಿದ್ದೇನೆ ಎಂದೂ ಅವರು ಹೇಳಿದ್ದಾರೆ.
ನಟ ಸಿಂಬು ಅವರೊಂದಿಗೆ ಹಂಸಿಕಾ ಹೆಸರು ಸುಮಾರಷ್ಟು ದಿನಗಳಿಂದ ಗಾಸಿಪ್ ಕಾಲಂಗಳಲ್ಲಿ ಹರಿದಾಡುತ್ತಿದೆ. ಮುಂದಿನ ವರ್ಷ ಅವರಿಬ್ಬರೂ ವಿವಾಹ ಬಂಧನಕ್ಕೆ ಒಳಪಡುವುದು ಬಹುತೇಕ ಪಕ್ಕಾ ಆಗಿದೆ. ಈ ಹಿಂದೆ ಹಂಸಿಕಾ ಹೆಸರು ಸಿದ್ದಾರ್ಥ ಜೊತೆ ಕೇಳಿಬಂದಿತ್ತು. ಸಿಂಬು ಕೂಡಾ ಕೊಂಚ ದಿನ ನಯನತಾರಾ ಜೊತೆ ಓಡಾಡಿದ್ದರು. ಈಗ ಸಿದ್ಧಾರ್ಥಾ ಸಮಂತಾ ಬೆನ್ನು ಬಿದ್ದಿದ್ದಾನೆ ಎಂಬ ಸುದ್ದಿಯನ್ನು ನೀವು ಇದೇ ಕಾಲಂನಲ್ಲಿ ಓದಿರುತ್ತೀರಿ. ನಯನತಾರಾಗೆ ಪ್ರಭುದೇವ್ ಸಿಕ್ಕ ಬಳಿಕ ಅನಿವಾರ್ಯವಾಗಿ ಸಿಂಬು ದೂರವಾಗಿದ್ದರು.