ಹಾನ್ ಓಕೆ ಪ್ಲೀಸ್" ಹೇಳುವ ನಾನಾ
Publish Date: Thu, 27 Sep 2007 (18:22 IST)
Updated Date: Thu, 27 Sep 2007 (18:21 IST)
ನಾನಾ ಪಾಟೇಕರ್ ಮತ್ತು ಆಶ್ಚರ್ಯಗಳು ಒಟ್ಟೊಟ್ಟಿಗೆ ಇರುತ್ತವಂತೆ. ಈಗ ನಾನಾ ಪಾಟೇಕರ್ ರಾಜ್ ಕುಮಾರ್ ಸಂತೋಷಿ ನಿರ್ಮಾಣದ ಚಿತ್ರದಲ್ಲಿ ಟ್ರಕ್ ಚಾಲಕನಾಗಿ "ಹಾರ್ನ್ ಓಕೆ ಪ್ಲೀಸ್" ಎಂದು ಹೇಳಲು ಹೊರಟಿದ್ದಾರೆ.ಹಾಸ್ಯಕಥಾವಸ್ತು ಹೊಂದಿದ ಈ ಚಿತ್ರವನ್ನು ರಾಕೇಶ್ ಸಾರಂಗ್ ನಿರ್ದೇಶಿಸಲಿದ್ದಾರೆ. ನಾನಾ ಕಾಮೆಡಿಯಲ್ಲಿ ಮನೋಜ್ಞವಾಗಿ ನಟಿಸುತ್ತಾರೆ. ಟ್ರಕ್ ಚಾಲಕನ ಪಾತ್ರಕ್ಕೆ ಅವರೇ ಪ್ರಥಮ ಮತ್ತು ಕೊನೆಯ ಆಯ್ಕೆ ಎಂದು ಚಿತ್ರದ ಮೂಲವೊಂದು ತಿಳಿಸಿದೆ.ಹಲ್ಲಾ ಬೋಲ್ ನಿರ್ಮಾಣದ ಬಳಿಕದ ಕೆಲಸ ಮತ್ತು ರಾಮಾಯಣ ಕಥಾವಸ್ತುವಿನ ನಿರ್ಮಾಣಪೂರ್ವ ಕೆಲಸದಲ್ಲಿ ಬಿಜಿಯಾಗಿರುವ ರಾಜ್ ಸಂತೋಷಿ ಹೊರಗಿನ ನಿರ್ದೇಶಕರಿಗೆ ಅವಕಾಶ ನೀಡಲು ನಿರ್ಧರಿಸಿದರು.