Article Bollywood Gossips %e0%b2%b9%e0%b2%be%e0%b2%9f%e0%b3%8d %e0%b2%b0%e0%b2%be%e0%b2%96%e0%b2%bf%e0%b2%af %e0%b2%95%e0%b3%82%e0%b2%b2%e0%b3%8d%e2%80%8c %e0%b2%aa%e0%b3%8d%e0%b2%b0%e0%b2%9a%e0%b2%be%e0%b2%b0 107071800006_1.htm

Daily Horoscope

Select Your Language

Notifications

webdunia
webdunia
webdunia
webdunia

ಹಾಟ್ ರಾಖಿಯ ಕೂಲ್‌ ಪ್ರಚಾರ

ಹಾಟ್
ಬಾಲಿವುಡ್‌ನ ಹಾಟ್‌ಸ್ಟಾರ್ ರಾಖಿಸಾವಂತ್ ಈಗ ಕೂಲ್ ಆಗಿದ್ದಾರೆ. ವಿಷಯ ಬೇರೇನೂ ಅಲ್ಲ, ಅವರ ಸ್ಟೈಲ್‌ ಬದಲಾಗಿಲ್ಲ. ಅಂದರೆ ಅವರೀಗ ಐಟಿಸಿಯ ಮಿನ್ಟೊ ಪ್ರೆಶ್ ಕಂಪನಿಯ ಕೂಲ್ ಗ್ರೀನ್ ಬ್ರಾಂಡ್‌ಗೆ ಪ್ರಚಾರ ರಾಯಭಾರಿಯಾಗುತ್ತಿದ್ದಾರೆ.

ಮಿನ್ಟೋ ಫ್ರೆಶ್ ವಯಸ್ಕರ ತಿನಸು ಸಾಮಗ್ರಿಗಳು, ಚಾಕೊಲೆಟ್ ಇತ್ಯಾದಿಗಳು, ಆಹಾರ ಸಾಮಗ್ರಿ ವಿಭಾಗಗಳಲ್ಲಿ ತನ್ನ ಬ್ರಾಂಡ್‌ ಉತ್ಪನ್ನಗಳನ್ನು ಗುರುತಿಸಿಕೊಂಡಿದೆ. ಕಂಪನಿಯು ತನ್ನ ಉತ್ಪನ್ನಗಳಿಗಾಗಿ ಬಿಂದಾಸ್ ರಾಖಿಯವರು ಹಾಟ್ ಸೌಂದರ್ಯವನ್ನು ಬಳಸಿ ಕೂಲ್ ಉತ್ಪನ್ನಗಳ ಪ್ರಚಾರ ನಡೆಸುವ ತಂತ್ರ ಬಳಸಲಿದೆ.

ಐಟಿಸಿ ಲಿ. ಕಂಪನಿಯ ವಿಭಾಗೀಯ ಮುಖ್ಯಸ್ಥ ರವಿ ನವಾರೆ ಅವರು ಹೇಳುವಂತೆ, ಕಂಪನಿಯ ಹೊಸ ಬ್ರಾಂಡ್ ಮಿನ್ಟೋ ಫ್ರೆಶ್‌ ಹಾಗೂ ಇತರ ಸಾಮಾಗ್ರಿಗಳಿಗೆ ಬಹುಮಾಧ್ಯಮ ಪ್ರಚಾರಕ್ಕಾಗಿ ರಾಖಿ ಸಾವಂತ್ ಅವರ ರಾಯಭಾರಿತ್ವದಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡುವ ತಂತ್ರವಿದೆ ಎಂದಿದ್ದಾರೆ.

ಮಿನ್ಟೋ ಫ್ರೆಶ್ ಉತ್ಪನ್ನವು ಶ್ವಾಸ ದುರ್ಗಂಧ ನಿವಾರಿಸುವ ಚಾಕೊಲೆಟ್ ವಿನ್ಯಾಸದ ಉತ್ಪನ್ನವಾಗಿ ಮಾರುಕಟ್ಟೆಗೆ ಕೂಲ್ ಗ್ರೀನ ಹೊಸ ವಿನ್ಯಾಸದಲ್ಲಿ ಬರಲಿದೆ. ಮಿನ್ಟೋ ಸೇವಿಸಿದರೆ ವ್ಯಕ್ತಿಗೆ ಮನಮೆಚ್ಚಿದ ಹುಡುಗಿಯ ಮನಗೆಲ್ಲಲು ಸಾಧ್ಯ ಎಂಬ ಘೋಷಣೆಗೆ ರಾಖಿ ಮುಖ ನೀಡಲಿದ್ದಾರೆ.

Share this Story:

Follow Webdunia kannada