Publish Date: Wed, 11 Jul 2007 (12:04 IST)
Updated Date: Wed, 11 Jul 2007 (12:04 IST)
ದೇಶದ ಚಿತ್ರ ರಸಿಕರ ಕನಸಿನ ಕನ್ಯೆಯಾಗಿದ್ದ ಬಾಲಿವುಡ್ ಅಭಿನೇತ್ರಿ ಶ್ರೀದೇವಿ ಇದೀಗ ಸುದ್ದಿಯಲ್ಲಿದ್ದಾರೆ. ರಾಜ್ ಕುಮಾರ್ ಸಂತೋಷಿಯವರ ಹೊಸ ಚಿತ್ರ 'ಹಲ್ಲಾ ಬೋಲ್'ನಲ್ಲಿ ಶ್ರೀದೇವಿ ಹಾಗೂ ಪತಿ ಬೋನಿ ಕಪೂರ್ ಕೆಲನಿಮಿಷಗಳ ಕಾಲ ಕಾಣಿಸಿಕೊಳ್ಳಲಿದ್ದಾರೆ.
ಆದರೆ, ಸಂತೋಷದಿಂದ ಸಂತೋಷಿಯವರ ಚಿತ್ರದಲ್ಲಿ ಕ್ಷಣಗಳ ಕಾಲ ಕಾಣಿಸಿಕೊಳ್ಳಲೊಪ್ಪಿದ್ದ ಶರೀದೇವಿ- ಕಪೂರ್ ಜೋಡಿ, ಇದೀಗ ನಿರಾಶರಾಗಿದ್ದಾರೆ. ರಾಜ್‌ಕುಮಾರ್ ಸಂತೋಷಿಯವರು ತಮ್ಮ ಇತ್ತೀಚಿನ ಹೇಳಿಕೆಯಲ್ಲಿ ಇದು ಶ್ರೀದೇವಿಯ ವಾಪಸಾತಿ ಎಂದು ದಾಖಲಿಸಿದ್ದರು. ಆದರೆ ಗೆಳೆತನಕ್ಕಾಗಿ ಒಪ್ಪಿಕೊಂಡಿದ್ದ ಶ್ರೀದೇವಿ ಇದನ್ನು ಚಿತ್ರ ರಂಗಕ್ಕೆ ವಾಪಸಾತಿ ಎಂದು ಸ್ವೀಕರಿಸಿಲ್ಲ.
ಪ್ರಸ್ತುತ ಚಿತ್ರದಲ್ಲಿ ನಾಯಕನಾಗಿರುವ ಅಜಯ್ ದೇವಗನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವ ಪಾತ್ರದಲ್ಲಿ ಶ್ರೀದೇವಿ ದಂಪತಿ ಕಾಣಿಸಿಕೊಳ್ಳಲಿದ್ದರು. ಬೋನಿಕಪೂರ್ ಹಾಗೂ ಸಂತೋಷಿ ಅವರು ಈ ಮೊದಲೇ ಗೆಳೆಯರಾಗಿದ್ದುದು ಇಲ್ಲಿನ ವಿಶೇಷ.
ಆದರೆ ಸಂತೋಷಿ ತಮ್ಮ ಗೆಳೆತನವನ್ನು ಚಿತ್ರದ ಪ್ರಚಾರ ಮತ್ತು ಹಣಗಳಿಕೆಗಾಗಿ ತಿರುಚಿದ್ದಾರೆ ಎಂಬುದು ಶ್ರೀದೇವಿ ದಂಪತಿಯ ನೋವಿಗೆ ಕಾರಣ. ಅದೇನೇ ಇದ್ದರೂ ಇ ವಿವಾದ ಎರಡೂ ಕಡೆಯವರಿಗೆ ಹಾಗೂ ಚಿತ್ರಕ್ಕೆ ಇನ್ನಷ್ಟು ಪ್ರಚಾರ ನೀಡುವುದು ಎಂಬುದರಲ್ಲಿ ಸಂಶಯವಿಲ್ಲ. ಶ್ರೀದೇವಿ ಕಾಣಿಸಿಕೊಳ್ಳುವ ಚಿತ್ರವಾದ್ದರಿಂದ ಅಭಿಮಾನಿಗಳು ಖುಶ್ ಆಗಿದ್ದಾರೆ,