Article Bollywood Gossips %e0%b2%b9%e0%b2%a6%e0%b2%bf%e0%b2%a8%e0%b2%be%e0%b2%b0%e0%b3%81 %e0%b2%b5%e0%b2%b0%e0%b3%8d%e0%b2%b7%e0%b2%97%e0%b2%b3 %e0%b2%ac%e0%b2%b3%e0%b2%bf%e0%b2%95 %e0%b2%ac%e0%b2%be%e0%b2%b0%e0%b3%8d%e0%b2%a1%e0%b2%b0%e0%b3%8d 2 %e0%b2%a4%e0%b3%86%e0%b2%b0%e0%b3%86%e0%b2%97%e0%b3%86 113072000023_1.htm

Daily Horoscope

Select Your Language

Notifications

webdunia
webdunia
webdunia
webdunia

ಹದಿನಾರು ವರ್ಷಗಳ ಬಳಿಕ ಬಾರ್ಡರ್ -2 ತೆರೆಗೆ

ಮರ್ಡರ್
PR
PR
ಮರ್ಡರ್ ಚಿತ್ರದ ಬಳಿಕ ದೀವಾನಾ ಚಿತ್ರದ ಎರಡನೇ ಆವೃತ್ತಿ ಹೊರಬರುವ ಬಗ್ಗೆ ಸುದ್ದಿಯಾಗಿತ್ತು. ಇದೀಗ ಹದಿನಾರು ವರ್ಷಗಳ ಹಿಂದೆ ಸಖತ್ ಹಿಟ್ ಆಗಿದ್ದ ಬಾರ್ಡರ್ ಚಿತ್ರದ ಎರಡನೇ ಆವೃತ್ತಿ ಹೊರತರಲು ಆಲೋಚನೆ ನಡೆದಿದೆಯಂತೆ.

ದೀರ್ಘ ಅಂತರದ ಬಳಿಕ ನಿರ್ದೇಶಕ ಜೆಪಿ ದತ್ತಾ ಸೂಪರ್ ಹಿಟ್ ಚಿತ್ರ ಬಾರ್ಡರ್-2 ಅನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಸಿದ್ದಾರೆ. ವಿಶೇಷವೆಂದರೆ ಅಂದು ಚಿತ್ರದ ಮುಖ್ಯಪಾತ್ರದಲ್ಲಿ ನಟಿಸಿದ್ದ ಸನ್ನಿ ಡಿಯೋಲ್ ಇಂದು ಕೂಡಾ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ಒಪ್ಪಿಕೊಂಡಿದ್ದಾರಂತೆ.

ಎರಡನೇ ಆವೃತ್ತಿಯಲ್ಲೂ ಸನ್ನಿ ಡಿಯೋಲ್ ನಟಿಸಲು ಒಪ್ಪಿಕೊಂಡಿದ್ದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತರ ನಟರ ಆಯ್ಕೆ ಪ್ರಕ್ರಿಯೆ ಇನ್ನೂ ನಡೆಯಬೇಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. 1971ರ ಯುದ್ಧದ ನೈಜ ಘಟನೆಗಳನ್ನು ಆಧರಿಸಿದ ಚಿತ್ರ 1997ರಲ್ಲಿ ಬಿಡುಗಡೆಗೊಂಡಿತ್ತು. ಸನ್ನಿ ಡಿಯೋಲ್ ಚಿತ್ರದಲ್ಲಿ ಕಮಾಂಡಿಗ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದರು. ಬಾರ್ಡರ್ 2 ಚಿತ್ರದಲ್ಲೂ ಅದೇ ಪಾತ್ರ ನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚಿತ್ರ ಅಕ್ಟೋಬರ್ ತಿಂಗಳಾಂತ್ಯಕ್ಕೆ ಚಿತ್ರೀಕರಣಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆಯಂತೆ.

Share this Story:

Follow Webdunia kannada