Article Bollywood Gossips %e0%b2%b8%e0%b3%8d%e0%b2%b5%e0%b2%bf%e0%b2%9c%e0%b2%b0%e0%b3%8d%e0%b2%b2%e0%b3%8d%e0%b2%af%e0%b2%be%e0%b2%82%e0%b2%a1%e0%b3%8d %e0%b2%ae%e0%b2%be%e0%b2%a4%e0%b3%8d%e0%b2%b0%e0%b2%b5%e0%b2%b2%e0%b3%8d%e0%b2%b2 108112000043_1.htm

Daily Horoscope

Select Your Language

Notifications

webdunia
webdunia
webdunia
webdunia

ಸ್ವಿಜರ್ಲ್ಯಾಂಡ್ ಮಾತ್ರವಲ್ಲ.....

ಹಮ್ ತುಮ್
ಯಶ್ ರಾಜ್ ಫಿಲ್ಮ್‌ರವರ 'ಸಿಲ್‌ಸಿಲಾ' ಮತ್ತು 'ಹಮ್ ತುಮ್' ಚಿತ್ರಗಳು ಹಾಲೆಂಡ್‌ನ ಫಿಲ್ಮ್ ಮ್ಯೂಸಿಯಂನಲ್ಲಿ ನಡೆಯಲಿರುವ ವಿಶೇಷ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಲಿವೆ. ಹಾಲೆಂಡ್‌ನಲ್ಲಿ ಚಿತ್ರವನ್ನು ಚಿತ್ರೀಕರಿಸಿದ ಸಂಭ್ರಮಾಚರಣೆಯ ಅಂಗವಾಗಿ 28ರಿಂದ 30ನೇ ನವೆಂಬರ್‌ವರೆಗೆ ಈ ಚಿತ್ರೋತ್ಸವ ನಡೆಯಲಿದೆ. ಯಶ್ ರಾಜ್ ಫಿಲ್ಮ್‌ರವರ ಬ್ಲಾಕ್ ಬಸ್ಟರ್ ಮಾಸ್ಟರ್‌ಪೀಸ್‌ಗಳು ಚಿರಸ್ಮರಣೀಯವಾಗಿ ಜನಮನದಲ್ಲಿ ನಿಂತಿವೆ, ಕಲೆಯೆಡೆಗೆ ಡಚ್ಚರ ಪ್ರೀತಿ ಅಮರವಾಗುಳಿಯಲಿದೆ.
PTI

ಯಶ್ ರಾಜ್ ಫಿಲ್ಮ್‌ರವರ ಚಿತ್ತಾಕರ್ಷಕ ಲೋಕೇಶನ್‌ಗಳು ಚಿತ್ರ ವೀಕ್ಷಕರಿಗೆ ಅಚ್ಚರಿ ಹುಟ್ಟಿಸುವುದನ್ನು ಮುಂದುವರಿಸಲಿದೆ. ಸ್ವಿಜರ್ಲೆಂಡ್ ಮತ್ತು ಯಶ್ ರಾಜ್ ಫಿಲ್ಮ್‌ರವರ ಹೊಂದಾಣಿಕೆ ಬಹುಸಮಯದ್ದು ಮತ್ತು ಎಲ್ಲರಿಗೂ ತಿಳಿದಿರವಂತಹುದು ಆದರೆ ಈಗ ಬಾಲಿವುಡ್‌ನ ಪ್ರಸಿದ್ಧ ನಿರ್ಮಾಣ ಸಂಸ್ಥೆಗಳು ಭಾರತೀಯ ಪ್ರೇಕ್ಷಕರಿಗೆ ಅಷ್ಟೊಂದು ಪರಿಚಿತವಲ್ಲದ ಯುರೋಪಿಯನ್ ಲೋಕೇಶನ್‌ಗಳಿಗೂ ವೀಸಾವನ್ನು ದಕ್ಕಿಸಿಕೊಂಡಿದ್ದಾರೆ. ಇನ್ನು ಮುಂದೆ ಇನ್ನಷ್ಟು ರಮಣೀಯ ತಾಣಗಳು ಪ್ರೇಕ್ಷಕರ ಕಣ್ಣಿಗೆ ರಸದೌತಣ ನೀಡಲಿವೆ, ಇಂತಹ ಅದ್ಭುತ ಲೋಕೇಶನ್‌ಗಳಲ್ಲಿ ಒಂದು ಹಾಲೆಂಡ್ ಇದು ಯಶ್ ರಾಜ್ ಫಿಲ್ಮ್‌ನ ಸನ್ನಿವೇಶಗಳಿಗೆ ಸ್ಮರಣೀಯ ಹಿನ್ನಲೆ ಚಿತ್ರಣ ಒದಗಿಸಿದೆ. ಉದಾಹರಣೆಗಾಗಿ ಹೇಳುವುದಾದರೆ, ಟ್ಯುಲಿಪ್ಸ್ ಹೂವಿನ ರಾಶಿಯಲ್ಲಿ ರೇಖಾ ಮತ್ತು ಅಮಿತಾಬ್ ಬಚ್ಚನ್‌ರ ಮನವೋಹಕ ಫೋಟೊವನ್ನು ಇಂದಿನವರಗೂ ಚಿತ್ರಪ್ರೇಮಿಗಳು ಮರೆತಿಲ್ಲ. ಡಚ್ಚರು ಸಹ ಇದನ್ನು ಮರೆತಿರಲಾರರು.

Share this Story:

Follow Webdunia kannada