Article Bollywood Gossips %e0%b2%b8%e0%b3%8d%e0%b2%b2%e0%b2%ae%e0%b3%8d %e0%b2%b8%e0%b3%81%e0%b2%82%e0%b2%a6%e0%b2%b0%e0%b2%bf%e0%b2%af %e0%b2%b8%e0%b2%a3%e0%b3%8d%e0%b2%a3%e0%b2%a4%e0%b2%a8 %e0%b2%ac%e0%b2%b9%e0%b2%bf%e0%b2%b0%e0%b2%82%e0%b2%97%e0%b2%b5%e0%b2%be%e0%b2%a6%e0%b2%be%e0%b2%97 109020300076_1.htm

Daily Horoscope

Select Your Language

Notifications

webdunia
webdunia
webdunia
webdunia

ಸ್ಲಮ್ ಸುಂದರಿಯ ಸಣ್ಣತನ ಬಹಿರಂಗವಾದಾಗ..!

ಸ್ಲಮ್ಡಾಗ್ ಮಿಲಿಯನೇರ್
ಇದು ಸ್ಲಮ್ ಸುಂದರಿ ಫ್ರೀದಾ ಪಿಂಟೋ 'ಸಣ್ಣ'ತನ ವೃತ್ತಾಂತ. ಆಕೆ ಭಾರತದ ಟೀವಿ ಚಾನೆಲ್‌ವೊಂದರಲ್ಲಿ ನಿರೂಪಕಿಯಾಗಲು ಹರ ಸಾಹಸ ನಡೆಸಿದ್ದಳಂತೆ. ಆದರೆ ಅವಳನ್ನು ಆಯ್ಕೆ ನಡೆಸಲಿಲ್ಲ ಟೀವಿ ಮಂದಿ. ಕೊಟ್ಟ ಕಾರಣ: ಎದೆ ತೀರಾ ಸಣ್ಣಗಿದೆ, ತೀರಾ ಪೀಚಾಗಿ ಕಾಣಿಸುತ್ತಿದ್ದೀಯಾ !

'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರ ವಿಶ್ವದಾದ್ಯಂತ ಜನಪ್ರಿಯತೆ ಪಡೆಯುತ್ತಿದ್ದಂತೆ ಪಿಂಟೋ ಮುಖದತ್ತ ಕ್ಯಾಮರಾಗಳು ಕಣ್ಣು ಹಾಕತೊಡಗಿದ್ದವು. ಮೊದಲೇ ಮಾಡೆಲಿಂಗ್ ಮಾಡಿಕೊಂಡಿದ್ದ ಹುಡುಗಿ. ಹಾಗಾಗಿ ವಿದೇಶಗಳಲ್ಲಿ ತಿರುಗಾಡಿದಾಗ ಬಟ್ಟೆಯ ಮೇಲಿನ ವ್ಯಾಮೋಹವನ್ನೂ ಮುಲಾಜಿಲ್ಲದೆ ತ್ಯಜಿಸಿದ್ದಾಳೆ. ಪರಿಣಾಮ ಹಾಟ್ ಹಾಟ್ ದೇಹಗಳ ಹುಡುಕಾಟದಲ್ಲಿದ್ದ ಅಮೆರಿಕಾದ 'ಕಾಂಪ್ಲೆಕ್ಸ್' ಎಂಬ ನಿಯತಕಾಲಿಕೆಯ ಬಗಲಿಗೆ ಬಿದ್ದಿದ್ದಾಳೆ. ಅದರ ಬಣ್ಣಬಣ್ಣದ ಪುಟಗಳಲ್ಲಿ ಫ್ರೀದಾ ಪಿಂಟೋ ಕೇವಲ ಪ್ಯಾಂಟಿ ಮತ್ತು ಒಂದು ಬಟನ್ ಹಾಕಿದ ಅಂಗಿ ಹಾಕಿಕೊಂಡು ಬೆಡ್‌ನಲ್ಲಿ ಉರುಳುರುಳಿ ಪೋಸ್ ಕೊಟ್ಟಿದ್ದಾಳೆ !

ಆಗ ಆಕೆಯನ್ನು ಭಾರತದಲ್ಲಿ ನಡೆಸಿಕೊಂಡ ಬಗ್ಗೆ ನೆನಪಾಗಿದೆ. ತನ್ನ ಇದೇ ದೇಹಕ್ಕೆ ಅಂದು ಭಾರತದಲ್ಲಿ ಚಿಕ್ಕಾಸು ಬೆಲೆಯಿರಲಿಲ್ಲ - ತಿರಸ್ಕರಿಸಿದ್ದಾರೆ. ಇಲ್ಲಿ ಎಷ್ಟೊಂದು ಬೆಲೆ ಕಟ್ಟುತ್ತಿದ್ದಾರೆ ಎಂದುಕೊಂಡು ತನ್ನ ಪೂರ್ವಾಪರಗಳನ್ನು ಮ್ಯಾಗಜೀನ್‌ಗೆ ವಿವರಿಸುತ್ತಾ ಹೋಗಿದ್ದಾಳೆ.

ಟೀವಿ ನಿರೂಪಕಿಯಾಗಲು ಹಾತೊರೆಯುತ್ತಿದ್ದ ಆಕೆಯನ್ನು ಬೇಡ ಅಂದರಂತೆ. ನೀನು ನೋಡಲು ಸಣಕಲಾಗಿದ್ದೀಯಾ.. ನಿನ್ನ 'ಅವುಗಳು' ತೀರಾ ಸಣ್ಣದಾಗಿವೆ ಎಂದರಂತೆ. ನಮ್ಮದು ಲೋಲುಪ ಸಮಾಜ. ಮೈಕೈ ತುಂಬಿಕೊಂಡಿರುವ ಮಹಿಳೆಯರನ್ನೇ ಎಲ್ಲರೂ ಇಷ್ಟಪಡುತ್ತಾರೆ. ಅವರ ಪ್ರಕಾರ ನಾನು ಎದೆಯನ್ನು ದೊಡ್ಡದು ಮಾಡಿಕೊಳ್ಳಬೇಕಿತ್ತು. ಆದರೆ ನನಗೆ ಇದ್ದುದರಲ್ಲೇ ಸಮಾಧಾನವಿದೆಯೆಂದು ಹೇಳಿಕೊಂಡಿದ್ದಾಳೆ.

ನಿಮಗೆ ಹಾಲಿವುಡ್‌ಗಿಂತ ಕೊಳಕಾದುದು ಬಾಲಿವುಡ್‌ನಲ್ಲೇನಿದೆ? ಎಂದು ಪತ್ರಿಕೆಯವರು ಪ್ರಶ್ನೆ ಕೇಳಿದ್ದಕ್ಕೆ, "ಮ‌ೂರ್ನಾಲ್ಕು ವರ್ಷಗಳ ಹಿಂದೆ ಸಿನಿಮಾವೊಂದಕ್ಕಾಗಿ ನಾನು ವ್ಯಕ್ತಿಯೊಬ್ಬರನ್ನು ಭೇಟಿಯಾಗಿದ್ದೆ. ನಾವಿಬ್ಬರೂ ಉತ್ತಮ ಗೆಳೆಯರು ಎನ್ನುತ್ತಾ ಅವರು ಕಣ್ಣು ಹೊಡೆದರು. ಆ ಮಾತುಗಳು ಎಲ್ಲಿಂದ ಬಂದವೆಂದು ನನಗೆ ಗೊತ್ತಾಯಿತು. ಅಲ್ಲಿ ಸರಿಯಿಲ್ಲ ಎಂದು ನನಗಾಗ ಅರ್ಥವಾಯಿತು" ಎಂದಿದ್ದಾಳೆ.

ಬೆತ್ತಲೆ ದೃಶ್ಯ ಅಥವಾ ಸೆಕ್ಸ್ ದೃಶ್ಯಗಳ ಬಗ್ಗೆ ಏನನ್ನುತ್ತೀರಿ ಎಂದಾಗ, "ಭಾರತದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಅದಕ್ಕೆಲ್ಲ ಅಲ್ಲಿ ಒಂದು ರೀತಿಯ ನಿಷೇಧವಿದೆ. ಸೆನ್ಸಾರ್ ಮಂಡಳಿಗಳೂ ಅಂತಹ ಸನ್ನಿವೇಶಗಳಿಗೆ ಕತ್ತರಿ ಹಾಕುತ್ತವೆ. ಹಾಗಾಗಿ ಅಂತಹ ದೃಶ್ಯಗಳನ್ನು ಚಿತ್ರೀಕರಿಸುವ ಪ್ರಶ್ನೆಯೇ ಬರುವುದಿಲ್ಲ" ಎಂದು ಜಾಣತನದಿಂದ ಉತ್ತರಿಸಿದ್ದಾಳೆ.
PR

Share this Story:

Follow Webdunia kannada