ಸ್ನೇಹಿತರ ಜೀವನ ಬಿಂಬಿಸುವ ಮುಂಬೈ ಸಾಲ್ಸಾ
Publish Date: Mon, 29 Oct 2007 (18:56 IST)
Updated Date: Mon, 29 Oct 2007 (18:55 IST)
ಮುಂಬೈ ಸಾಲ್ಸಾ ಚಿತ್ರ ಪ್ರತಿಯೊಬ್ಬರ ಮನರಂಜನೆಯ ಕಲ್ಪನೆಯಲ್ಲ. ಮುಂಬೈ ಮೆಟ್ರೋಪಾಲಿಟನ್ ನಗರದಲ್ಲಿ 8 ಮಂದಿ ಸ್ನೇಹಿತರ ಜೀವನವನ್ನು ವಾಸ್ತವ ರೀತಿಯಲ್ಲಿ ಈ ಚಿತ್ರ ಬಿಂಬಿಸುತ್ತದೆ. ತಮ್ಮ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ಯುವಕರ ಅಸಹಜ ಜೀವನದ ಕಥಾವಸ್ತುವನ್ನು ಮನೋಜ್ ತ್ಯಾಗಿ ವಿವರಿಸುತ್ತಾರೆ. ಮುಂಬೈ ಸಾಲ್ಸಾ ಒಂದು ಪಬ್ ಹೆಸರು. ಅಲ್ಲಿ ಮುಖ್ಯ ಪಾತ್ರಗಳು ಭೇಟಿ ಮಾಡುತ್ತಾರೆ ಮತ್ತು ಬಳಿಕ ಅವರ ಜೀವನದ ದಿಕ್ಕು ಬದಲಾಗುತ್ತದೆ. ಹೊಸಬರನ್ನು ಹಾಕಿಕೊಂಡು ಹೊಸ ಕಥಾವಸ್ತುವಿನೊಂದಿಗೆ ಚಿತ್ರ ತಯಾರಿಸಲು ಗುಂಡಿಗೆ ಇರಬೇಕು. ಮೊದಲನೆಯದಾಗಿ ಕಥಾವಸ್ತು ಅತ್ಯಂತ ಅಸಂಪ್ರದಾಯಿಕವಾಗಿದೆ, ಎರಡನೆಯದಾಗಿ ಪ್ರಥಮಾರ್ಧದಲ್ಲಿ ಚಿತ್ರದ ಕಥೆಯಲ್ಲಿ ಅಂತಹ ಸತ್ವವೇನೂ ಇಲ್ಲ. ದ್ವಿತೀಯಾರ್ಧದಲ್ಲಿ ನಿಜವಾಗಲೂ ಚಿತ್ರಕಥೆ ಆರಂಭವಾಗುತ್ತದೆ. ಕೆಲವು ಬಾವುಕ ಸನ್ನಿವೇಶಗಳು ಮನಕಲಕುತ್ತವೆ. ಆದರೆ ಚಿತ್ರ ಕಥೆಯನ್ನು ಎಳೆಯುವ ಬದಲಿಗೆ ನೇರವಾಗಿ ವಿಷಯಕ್ಕೆ ಬರಬಹುದಿತ್ತು ಎನ್ನುವುದು ಕೆಲವರ ಭಾವನೆ. ನಿರ್ದೇಶಕರಾಗಿ ಭಾವುಕ ಕ್ಷಣಗಳನ್ನು ಮನೋಜ್ ತ್ಯಾಗಿ ಚೆನ್ನಾಗಿ ನಿಭಾಯಿಸಿದ್ದಾರೆ. ಚಿತ್ರದ ಕೊರಿಯೊಗ್ರಫಿ ಅದ್ಭುತವಾಗಿದೆ. ಹೊಸ ಪ್ರತಿಭೆಗಳನ್ನು ಚಿತ್ರ ಬೆಳಕಿಗೆ ತಂದರೂ ವೀರ್ ದಾಸ್ ಮತ್ತು ಮಂಜಾರಿ ಫಾಡ್ನಿಸ್ ಭರವಸೆ ಮೂಡಿಸುತ್ತಾರೆ. ಒಟ್ಟಾರೆಯಾಗಿ ಮುಂಬೈ ಸಾಲ್ಸಾ ಮುಂಬೈನಲ್ಲಿ ವಾಸಿಸುವ ಯುವಕರನ್ನು ಗುರಿಯಾಗಿಸಿ ನಿರ್ಮಿಸಲಾಗಿದೆ.