ಸ್ಟಾರ್ ಕೈದಿ ಸಂಜಯ್ ದತ್ ಅವರ ರಜೆ ಮತ್ತೆ ವಿಸ್ತಾರ!
, ಬುಧವಾರ, 19 ಫೆಬ್ರವರಿ 2014 (09:48 IST)
ಕಳೆದ ಎರಡು ತಿಂಗಳಿಂದ ಅನಾರೋಗ್ಯದ ಕಾರಣದಿಂದ ಮಾನ್ಯತಾ ಸ್ಥಿತಿ ಹದಗೆಟ್ಟಿದೆ. ಈಕೆ ಯಾರು ಎಂಬುದು ಎಲ್ಲರಿಗು ಗೊತ್ತು, ಮಾನ್ಯತಾ ನಟ ಸಂಜಯ್ ದತ್ ಅವರ ಪತ್ನಿ.
ಈಕೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಬಾಂಬೆಯ ಬ್ಲಾಸ್ಟ್ ಆದ ಆಪಾದಿತರಾಗಿದ್ದ ಸಂಜಯ್ ದತ್ ಅಪರಾಧಿ ಎಂದು ಸಾಬೀತಾಗಿ ಈಗ ಅವರಿಗೆ ಶಿಕ್ಷೆ ವಿಧಿಸಲ್ಪಟ್ಟಿದೆ.
ಯರವಾಡ ಜೈಲಿನಲ್ಲಿ ಇರುವ ಅವರು ತಮ್ಮ ಪತ್ನಿಯ ಅನಾರೋಗ್ಯದ ನಿಮಿತ್ತ ಅನೇಕ ಬಾರಿ ರಜೆಯನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಪೂಣೆಯ ಡಿವಿಷನಲ್ ಕಮೀಷನರ್ ಪ್ರಭಾಕರ್ ದೇಶ್ ಮುಖ್ ಅವರು ಈ ರಜೆಯನ್ನು ವಿಸ್ತರಿಸಲು ಸಂಜಯ್ ದತ್ ತಮ್ಮ ಪತ್ನಿಯ ಅನಾರೋಗ್ಯದ ನಿಮಿತ್ತ ನೀಡಿದ ಮೆಡಿಕಲ್ ಸರ್ಟಿಫಿಕೆಟ್ ಗಣನೆಗೆ ತೆಗೆದುಕೊಳ್ಳಲಾಯಿತು. ಮಾನ್ಯತಾ ದತ್ ಅವರು ಈಗ ವೈದ್ಯಕೀಯ ಪರಿವೀಕ್ಷಣೆಯಲ್ಲಿ ಇದ್ದಾರೆ. ಆದ್ದರಿಂದ ಆ ಸಂಗತಿಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಯಿತು ಎಂದು ಹೇಳಿದ್ದಾರೆ. ಒಟ್ಟಾರೆ ಸಂಜಯ್ ದತ್ ಸ್ಟಾರ್ ಲೆವೆಲ್ ಕೈದಿ ಅಂತ ಹೇಳುವುದಕ್ಕೆ ಅಡ್ಡಿ ಇಲ್ಲ !