Article Bollywood Gossips %e0%b2%b8%e0%b3%8b%e0%b2%b9%e0%b2%be %e0%b2%86%e0%b2%b2%e0%b2%bf %e0%b2%a4%e0%b2%be%e0%b2%af%e0%b2%bf%e0%b2%97%e0%b3%86 %e0%b2%ae%e0%b2%97%e0%b2%b3%e0%b3%81 %e0%b2%b2%e0%b2%be%e0%b2%af%e0%b2%b0%e0%b3%8d %e0%b2%86%e0%b2%97%e0%b2%ac%e0%b3%87%e0%b2%95%e0%b2%82%e0%b2%a4%e0%b3%86 113100300009_1.htm

Daily Horoscope

Select Your Language

Notifications

webdunia
webdunia
webdunia
webdunia

ಸೋಹಾ ಆಲಿ ತಾಯಿಗೆ ಮಗಳು ಲಾಯರ್ ಆಗಬೇಕಂತೆ

ಸೋಹಾ ಆಲಿ
PR
ಶರ್ಮಿಳಾ ಠಾಗೂರ್ ಮಗಳು ಸೋಹಾ ಆಲಿ ಖಾನ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ ಗೊತ್ತಿಲ್ಲದ ಸಂಗತಿಯೆಂದರೆ ತಾಯಿಗೆ ಮಗಳು ಕಪ್ಪು ಕೋಟು ಧರಿಸಿ ಕೈಯಲ್ಲಿ ಫೈಲ್ ಹಿಡಿದು ಓಡಾಡುವ ಲಾಯರ್ ಆಗಬೇಕು ಎಂಬ ಕನಸಿತ್ತಂತೆ. ಇಷ್ಟಕ್ಕೂ ಸೋಹಾ ಓದಿದ್ದು ಲಂಡನ್ ಶಾಲೆಯಲ್ಲಿ. ಅಲ್ಲಿ ಅವರು ಎಕನಾಮಿಕ್ಸ್ ಮತ್ತು ಪಾಲಿಟಿಕಲ್ ಸೈನ್ಸ್ನಲ್ಲಿ ಪದವಿ ಪಡೆದಿದ್ದಾರೆ. ಭಾರತಕ್ಕೆ ಮರಳಿದ ಬಳಿಕ ಲಾಯರ್ ಆಗುತ್ತೇನೆ ಎಂದು ಸ್ವತಃ ಸೋಹಾ ಅವರೇ ಹೇಳಿದ್ದರಂತೆ. ಆದರೆ ಇಲ್ಲಿಗೆ ಬಂದ ಬಳಿಕ ಅವರ ಮನಸ್ಸು ಬದಲಾಯಿತು. ಸೋಹಾ ಅಭಿನಯದ ಮೊದಲ ಚಿತ್ರ ಏ ದಿಲ್ ಮಾಂಗೆ ಮೋರ್ 2004ರಲ್ಲಿ ತೆರೆಕಂಡರೂ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ.

ಇದಾದ ಬಳಿಕ ಅವರು ನಾಯಕಿಯಾಗಿ ನಟಿಸಿದ ಅನೇಕ ಚಿತ್ರಗಳು ಹೆಸರು ಮಾಡಲೇ ಇಲ್ಲ. ಅದೇ ಸಮಯಕ್ಕೆ ಓಂ ಪ್ರಕಾಶ್ ರಾವ್ ಮೆಹ್ರಾ ನಿರ್ದೇಶನದ ರಂಗ್ ದೇ ಬಸಂತಿ ಚಿತ್ರದ ಮನೋಜ್ಞ ಅಭಿನಯ ಆಕೆಯ ಬದುಕಿಗೊಂದು ತಿರುವು ನೀಡಿತು. ನಂತರದ ಸಾಹೇಬ್ ಬೀವಿ ಔರ್ ಗ್ಯಾಂಗ್ಸ್ಟರ್ ರಿಟರ್ನ್ಸ ಚಿತ್ರವೂ ಮೆಚ್ಚುಗೆ ಪಡೆಯಿತು. ಇಷ್ಟಾದರೂ ಆಕೆಯ ತಾಯಿಗೆ ತೃಪ್ತಿ ಇಲ್ಲವಂತೆ. ಈಗಲೂ ಕರೆಮಾಡಿ ಇನ್ನೂ ಕಾಲ ಮಿಂಚಿಲ್ಲ, ಹಾರ್ವರ್ಡ ವಿವಿಗೆ ಹೋಗಿ ಲಾಯರ್ ಡಿಗ್ರಿ ಪಡೆದುಕೋ ಎಂದು ಸಲಹೆ ನೀಡುತ್ತಿರುತ್ತಾರಂತೆ. ನಾನು ಇಲ್ಲೇ ಖುಷಿಯಾಗಿದ್ದೇನೆ, ಸಿನೆಮಾನೇ ನನ್ನ ಪ್ರಾಣ ಎಂದರೂ ಅವರು ಕೇಳುವುದಿಲ್ಲವಂತೆ. ಸೋಹಾಗೆ ಬೇಗನೆ ಮದುವೆ ಮಾಡಿ ಮುಗಿಸಬೇಕೆಂಬ ಕನಸೂ ಅವರಿಗಿದೆಯಂತೆ. ಲಾಯರ್ಗಿರಿ ಹಾಗೂ ಮದುವೆ, ಇವೆರಡರ ಪೈಕಿ ಯಾವ ಆಸೆ ಮೊದಲು ಕೈಗೂಡುವುದೋ ಕಾದು ನೋಡಬೇಕಷ್ಟೇ.

Share this Story:

Follow Webdunia kannada