Publish Date: Wed, 02 Jan 2008 (12:22 IST)
Updated Date: Wed, 02 Jan 2008 (12:21 IST)
ತನ್ನ 'ಖೋಯಾ ಖೋಯಾ ಚಾಂದ್' ಪ್ರೇಕ್ಷಕರ ಮನ ಗೆಲ್ಲದಿದ್ದರೂ, ಸುಧೀರ್ ಮಿಶ್ರಾ ಎದೆಗುಂದಿಲ್ಲ. ಇಂತಹ ಕುಸಿತಗಳು ನನ್ನನ್ನು ಸಿನಿಮಾ ಮಾಡಲು ಎಂದಿಗೂ ತಡೆಯುವುದಿಲ್ಲ ಎನ್ನುತ್ತಾರೆ ಮಿಶ್ರಾ.
ಬಾಕ್ಸ್ ಆಫೀಸ್ನಲ್ಲಿ ತನ್ನ ಚಿತ್ರ ಸೋಲಲು ಪ್ರೇಕ್ಷಕರ ಅಭಿರುಚಿ ಮತ್ತು ಬಾಲಿವುಡ್ ನಾಯಕರ ಸಂಸ್ಕೃತಿಯೆ ಕಾರಣವಾಗಿದ್ದು, ಅದರ ಬಗ್ಗೆ ನನಗೆ ಬೇಸರವಿದೆ ಎಂದು ಮಿಶ್ರಾ ಹೇಳುತ್ತಾರೆ.
ನಾಯಕರೊಂದಿಗೆ ಕೆಲಸ ಮಾಡುವ ಸಂದರ್ಭದಲ್ಲಿ ಅವರ ಅಭಿಪ್ರಾಯಗಳಿಗೆ ತಕ್ಕಂತೆ ಕೆಲಸ ಮಾಡಬೇಕು. ಕೆಲವು ನಟ ಮತ್ತು ನಾಯಕರು ಬಹಳ ಉತ್ತಮವಾಗಿದ್ದಾರೆ. ನಾನು ಏನು ಹೇಳಲು ಬಯಸುತ್ತೇನೆಂದರೆ ನಿರ್ದೇಶಕರು, ನಿರ್ಮಾಪಕರು ಸ್ಟಾರ್ ಆಗದೆ ಕೇವಲೇ ಒಬ್ಬರೇ ಸ್ಟಾರ್ ಇದ್ದಲ್ಲಿ ನಿಮಗೆ ಹೇಳಬೇಕೆಂದ ಕಥೆಯನ್ನು ಹೇಳಲು ಸಾಧ್ಯವಿಲ್ಲ. ಕೇವಲ ಪ್ರಸಿದ್ಧ ನಟರು ಅಭಿನಯಿಸುವ ಚಿತ್ರಗಳನ್ನು ಮಾತ್ರ ವೀಕ್ಷಿಸುವ ಪ್ರೇಕ್ಷಕರ ಅಭಿರುಚಿಯ ಬಗ್ಗೆ ನನಗೆ ತೀವ್ರ ಅಸಮಧಾನವಿದೆ ಎಂದು ಮಿಶ್ರಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಆದರೆ ನಾನು ಮಾಡಬೇಕೆಂದಿರುವ ಚಿತ್ರಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎನ್ನುವ ಮಿಶ್ರಾ, ಈಗ ಮಾಡಲು ಹೊರಟಿರುವ ಚಿತ್ರವು ಪ್ರೇಕ್ಷಕರನ್ನು ಮನವನ್ನು ಸೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮಿಶ್ರಾ ವಿಶ್ವಾಸ ವ್ಯಕ್ತಪಡಿಸಿದರು.