Article Bollywood Gossips %e0%b2%b8%e0%b3%8b%e0%b2%a8%e0%b2%ae%e0%b3%8d%e2%80%8c%e0%b2%97%e0%b3%86 %e0%b2%85%e0%b2%aa%e0%b3%8d%e0%b2%aa%e0%b2%a8%e0%b2%bf%e0%b2%82%e0%b2%a6 %e0%b2%92%e0%b2%82%e0%b2%a6%e0%b3%81 %e0%b2%a4%e0%b2%bf%e0%b2%82%e0%b2%97%e0%b2%b3 %e0%b2%97%e0%b3%83%e0%b2%b9%e0%b2%ac%e0%b2%82%e0%b2%a7%e0%b2%a8 109042300091_1.htm

Daily Horoscope

Select Your Language

Notifications

webdunia
webdunia
webdunia
webdunia

ಸೋನಮ್‌ಗೆ ಅಪ್ಪನಿಂದ ಒಂದು ತಿಂಗಳ ಗೃಹಬಂಧನ!

ಸೋನಮ್ ಕಪೂರ್
IFM
ಸಾವರಿಯಾದಲ್ಲಿ ಮುಗ್ಧ ಚೆಂದನೆಯ ಬೊಂಬೆಯಂತೆ ಕಂಡ ಅನಿಲ್ ಕಪೂರ್ ಕೂಸು ಸೋನಮ್ ಕಪೂರ್ ಮೇಲೆ ಅಪ್ಪ ಮುನಿಸಿಕೊಂಡಿದ್ದಾರಂತೆ. ಅಷ್ಟೇ ಅಲ್ಲ, ಮಗಳ ಬಗ್ಗೆ ಕೋಪಗೊಂಡು ಒಂದು ತಿಂಗಳ ಕಾಲ ಮನೆಯಿಂದ ಎಲ್ಲೂ ಹೊರಗೆ ಹೋಗಬೇಡ ಎಂದು ತಾಕೀತು ಮಾಡಿದ್ದಾರಂತೆ.

ಹೇಳಿ ಕೇಳಿ ಸಾವರಿಯಾ, ಡೆಲ್ಲಿ6ಗಳಲ್ಲಿ ಕಾಣಿಸಿಕೊಂಡ ನಂತರ ಇದೀಗ ಸೋನಮ್ ಹಾಟ್ ಹುಡುಗಿ. ಅಷ್ಟೇ ಚೆಂದಕ್ಕೆ, ಬೆಳ್ಳಗೆ , ತೆಳ್ಳಗೆ ಬಳುಕುವ ಬಳ್ಳಿಯಾಗಿಯೂ ಇದ್ದಾಳೆ ಸೋನಮ್. ಸಾಲದ್ದಕ್ಕೆ ಸಿನಿಮಾ ರಂಗಕ್ಕೆ ಅಪ್ಪನಂತೆ ಧುಮುಕಿದ್ದಾಳೆ ಕೂಡಾ. ಅಪ್ಪನಿಗೆ ತನ್ನ ಮಗಳು ಯಾವ ತೊಂದರೆಗೂ ಒಳಗಾಗದಿದ್ದರೆ ಸಾಕು ಅಂತ ಅನಿಸದಿದ್ದೀತೇ ಹೇಳಿ? ಅಷ್ಟೇ ಆಗಿದ್ದು ಇಲ್ಲಿಯೂ ಕೂಡಾ. ಬಾಲಿವುಡ್ ಸ್ಟಾರ್, ಸ್ಲಂ ಡಾಗ್ ಮಿಲಿಯನೇರ್ ಮೂಲಕ ಆಸ್ಕರ್‌ನಲ್ಲೂ ರೆಡ್ ಕಾರ್ಪೆಟ್ ಮೇಲೆ ನಡೆದಾಡಿದ ಅನಿಲ್ ಕಪೂರ್‌ಗೆ ಈಗ ಒಳಗೊಳಗೇ ಇಂಥದ್ದೇ ಒಂದು ಭಯ ಶುರುವಾಗಿದೆ ಅಷ್ಟೆ.

ಮೊನ್ನೆ ಮೊನ್ನೆ ಸೋನಮ್ ಮನೆಗೆ ರಾತ್ರಿ ತಡವಾಗಿ ಬಂದಿದ್ದಾಳೆ. ತನ್ನ ಫ್ರೆಂಡುಗಳ ಜತೆಗೆ ರಾತ್ರಿಯಿಡೀ ತಿರುಗಾಡಿ ಬೆಳ್ಳಂಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಬಂದು ಮನೆ ಬಾಗಿಲು ತಟ್ಟಿದರೆ ಅಪ್ಪನ ಹೃದಯ ಚುರ್ರೆನ್ನದೆ ಇದ್ದೀತೇ? ಅದಕ್ಕೇ ಅನಿಲ್ ಕಪೂರ್ ಸೋನಮ್‌ಗೆ ಚೆನ್ನಾಗಿ ಲೆಕ್ಚರ್ ಕೊಟ್ಟಿದ್ದಾನೆ. ಬಾಲಿವುಡ್ ತೆರೆಯ ಮೇಲಷ್ಟೆ ಚೆನ್ನ. ಅಲ್ಲಿ ಸಾಕಷ್ಟು ಅಪಾಯಗಳಿವೆ. ದೊಡ್ಡ ಖೆಡ್ಡಾಗಳೇ ಇವೆ. ಜಾಗ್ರತೆಯಾಗಿ ನಡೆದರೆ ಮಾತ್ರ ಮೇಲೆ ಬರಬಹುದು ಎಂದು ಬುದ್ಧಿವಾದ ಹೇಳುವ ಜತೆಗೆ, ಕೋಪದಿಂದ ಇನ್ನು ಹೀಗೆಲ್ಲಾ ತಿರುಗಾಡಬಾರದು. ಒಂದು ತಿಂಗಳ ಕಾಲ ಎಲ್ಲಿಗೂ ಹೋಗಬೇಡ. ಮನೆಯಲ್ಲೇ ಇರು ಎಂದೂ ಮಗಳಿಗೆ ತಾಕೀತು ಮಾಡಿದ್ದಾನಂತೆ.

webdunia
IFM
ಅನಿಲ್ ತನ್ನ ಮಕ್ಕಳಾದ ಸೋನಮ್ ಹಾಗೂ ರಿಯಾ ಬಗ್ಗೆ ತುಂಬ ಕಾಳಜಿ. ಜತೆಗೆ ಮಕ್ಕಳು ಶಿಸ್ತು ಪಾಲಿಸದಿದ್ದರೆ ದಂಡಂ ದಶಗುಣಂ ಅಂತ ಸ್ಟ್ರಿಕ್ಟಾಗೇ ಎಚ್ಚರಿಕೆ ಕೊಟ್ಟಿದ್ದಾನೆ. ತನ್ನ ಮಕ್ಕಳು ಎಲ್ಲಿ ಹಾದಿ ತಪ್ಪುತ್ತಾರೋ ಎಂಬ ಭಯದಿಂದ ಈಗಷ್ಟೇ ಬಾಲಿವುಡ್‌ಗೆ ಎಂಟ್ರಿ ಪಡೆದಿರುವ ಸೋನಮ್‌ ಹೋದಲ್ಲೆಲ್ಲಾ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳನ್ನೂ ಕಳುಹಿಸುತ್ತಾನಂತೆ.

ಏನೇ ಇರಲಿ, ಅಪ್ಪ ಹಾಕಿದ ಗೆರೆಯನ್ನು ಮಗಳು ಸೋನಮ್ ದಾಟಿಲ್ಲ. ಅಪ್ಪನ ಶಿಕ್ಷೆಗೆ ಮಾತಿಲ್ಲದೆ ತಲೆಬಾಗಿ ಈಗ ಮನೆಯಲ್ಲೇ ಕೂತಿದ್ದಾಳಂತೆ. ಈ ಬಗ್ಗೆ ಸೋನಮ್‌ಳನ್ನೇ ಕೇಳಿದರೆ, ನಾನು ಯಾವತ್ತೂ ಸಮಯಕ್ಕೆ ಸರಿಯಾಗಿ ಮನೆಗೆ ಹೋಗುತ್ತೇನೆ. ಯಾವತ್ತೂ ಹಾಗಾಗುವುದಿಲ್ಲ ಎಂದಷ್ಟೇ ಹೇಳಿದ್ದಾಳೆ. ಅನಿಲ್‌ಗೆ ಕೇಳೋಣವೆಂದರೆ, ಸದ್ಯಕ್ಕೆ ವಿದೇಶಕ್ಕೆ ಹಾರಿದ್ದಾರೆ ಅನಿಲ್.

ಆದರೆ, ತನ್ನ ಮಕ್ಕಳ ಪ್ರತಿಭೆಯ ಬಗ್ಗೆ ಅನಿಲ್‌ಗೆ ಹೆಮ್ಮೆಯಿದೆ. ಸಾವರಿಯಾ ನಂತರ ಸೋನಮ್‌ಗೆ ಬರುವ ಆಫರ್‌ಗಳಿಂದ ಅನಿಲ್‌ಗೆ ತೃಪ್ತಿಯಿಲ್ಲ. ಅದಕ್ಕಾಗಿ, ಮಕ್ಕಳು ತುಂಬಾ ಕ್ರಿಯೇಟಿವ್ ಎಂಬುದನ್ನು ಅರಿತಿರುವ ಅನಿಲ್ ಈಗ ಮಕ್ಕಳಿಗಾಗಿ ತಾನ ಚಿತ್ರ ನಿರ್ಮಿಸುತ್ತಿದ್ದಾನೆ. ಈ ಚಿತ್ರ ನಿರ್ಮಾಣ ಕಾರ್ಯವನ್ನು ಅನಿಲ್ ಎರಡನೇ ಮಗಳು ರಿಯಾ ವಹಿಸಿಕೊಂಡಿದ್ದಾಳೆ. ಚಿತ್ರದ ಹೆಸರು ಆಯೇಶಾ. ನಾಯಕಿ ಸೋನಮ್. ಈಗಾಗಲೇ ಅಪ್ಪ- ಮಕ್ಕಳು ಈ ಚಿತ್ರಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಮಾಡುತ್ತಿದ್ದಾರಂತೆ.

ಅಂತೂ ಸೋನಮ್ ಹಾದಿಯಲ್ಲೇ ತಂಗಿ ರಿಯಾ ಕಪೂರ್ ಕೂಡಾ ಬರುತ್ತಿದ್ದಾಳಂ. ಅಪ್ಪನ ಸಹಕಾರವೂ ಇದೆ. ಜತೆಗೆ ಶಿಸ್ತಿನ ಪಾಠವೂ ಇದೆ. ರಿಯಾ ಕೂಡಾ ಅಕ್ಕನಂತೆ ತೆಳ್ಳಗೆ, ಬೆಳ್ಳಗೆ, ಉದ್ದಕ್ಕೆ ಬೆಳ್ಳಕ್ಕಿಯಂತೆ ಇದ್ದಾಲಂತೆ. ಪಾಪ ಅನಿಲ್ ಕಪೂರ್ ಇನ್ನೂ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸಬೇಕಾದೀತು!
webdunia
IFM

Share this Story:

Follow Webdunia kannada