ಸೈಫ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ
Publish Date: Sat, 22 Dec 2012 (14:06 IST)
Updated Date: Sat, 22 Dec 2012 (14:06 IST)
ಕೊಲಬಾ ಪರಿಸರದ ಲಕ್ಸುರಿ ಹೊಟೇಲ್‌ವೊಂದರಲ್ಲಿ ದಕ್ಷಿಣ ಆಫ್ರಿಕಾ ಮೂಲದ ಉದ್ಯಮಿ ಇಕುಲ್ ಮಿರ್ ಶರ್ಮಾ ಮತ್ತು ಅವರ ಮಾವನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಾಲಿವುಡ್ ನಟ ಸೈಫ್ ಆಲಿ ಖಾನ್ ವಿರುದ್ಧ 10 ತಿಂಗಳ ಬಳಿಕ ಮುಂಬಯಿ ಪೊಲೀಸರು, ಶರ್ಮಾರವರು ನೀಡಿದ್ದ ದೂರಿನಂತೆ ಸೈಫ್ ಆಲಿ ಖಾನ್ ಮತ್ತು ಅವರ ಇಬ್ಬರು ಸಹಚರರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದಾರೆ.ಗುರುವಾರದಂದು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್‌ವೊಂದರಲ್ಲಿ ಸೈಫ್ ವಿರುದ್ಧ ಕೊಲಬಾ ಪೊಲೀಸ್ ಠಾಣೆ ಪೊಲೀಸರು ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.