Article Bollywood Gossips %e0%b2%b8%e0%b3%88%e0%b2%ab%e0%b3%8d %e0%b2%95%e0%b2%b0%e0%b3%80%e0%b2%a8%e0%b2%be %e0%b2%b9%e0%b2%be%e0%b2%b8%e0%b2%bf%e0%b2%97%e0%b3%86 %e0%b2%b9%e0%b2%82%e0%b2%9a%e0%b2%bf%e0%b2%95%e0%b3%8a%e0%b2%82%e0%b2%a1%e0%b2%b0%e0%b2%82%e0%b2%a4%e0%b3%86 109082400085_1.htm

Daily Horoscope

Select Your Language

Notifications

webdunia
webdunia
webdunia
webdunia

ಸೈಫ್- ಕರೀನಾ ಹಾಸಿಗೆ ಹಂಚಿಕೊಂಡರಂತೆ!

ಸೈಫ್ ಅಲಿ ಖಾನ್
IFM
ಬಾಲಿವುಡ್ಡಿನ ಹಾಟ್ ಜೋಡಿ ಎಂದೇ ಖ್ಯಾತನಾಮರಾದ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಹಾಸಿಗೆ ಹಂಚಿಕೊಂಡಿದ್ದಾರಂತೆ ಎಂಬ ಹಸಿ ಬಿಸಿ ಸುದ್ದಿಯೀಗ ಬಾಲಿವುಡ್ ಅಂಗಳದಿಂದ ಬಂದಿದೆ. ಹೌದು. ಈ ಸುದ್ದಿ ನಿಜ. ಕರೀನಾ ಹಾಗೂ ಸೈಫ್ ಜತೆಯಾಗಿ ನಟಿಸುತ್ತಿರುವ ರೆನ್ಸಿಲ್ ಡಿಸಿಲ್ವಾ ನಿರ್ದೇಶನದ ಕುರ್ಬಾನ್ ಚಿತ್ರದಲ್ಲಿ ಇವರಿಬ್ಬರ ಬಿಸಿಬಿಸಿ ಪ್ರಣಯದ ದೃಶ್ಯಗಳು ಇವೆಯಂತೆ. ಈ ದೃಶ್ಯಗಳು ಬಾಲಿವುಡ್‌ ಇತಿಹಾಸದಲ್ಲೇ ದಾಖಲೆಯನ್ನೂ ಮಾಡಿದೆ!

ದಾಖಲೆ ಏನಪ್ಪಾ ಅಂದರೆ, ಈವರೆಗೆ ತುಟಿಗೆ ತುಟಿ ಸೇರಿಸುವ ಚುಂಬನದ ದೃಶ್ಯಗಳು ಬಾಲಿವುಡ್‌ನಲ್ಲಿ ಸರ್ವೇಸಾಮಾನ್ಯವಾದರೂ, ಹಾಲಿವುಡ್ ಚಿತ್ರಗಳಲ್ಲಿರುವಷ್ಟು ಸುದೀರ್ಘವಾಗಿ ಬಾಲಿವುಡ್ ಚಿತ್ರಗಳಲ್ಲಿ ತೋರಿಸುತ್ತಿರಲಿಲ್ಲ. ಕಣ್ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ಚುಂಬನದ ದೃಶ್ಯ ಮುಗಿಯುತ್ತಿತ್ತು. ಆದರೆ ಬಾಲಿವುಡ್ ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ಈವರೆಗೆ ಬಾಲಿವುಡ್‌ನಲ್ಲಿ ಯಾರೂ ಮಾಡದಷ್ಟು ಹೊತ್ತು ತುಟಿಗೆ ತುಟಿ ಸೇರಿಸಿ ಚುಂಬಿಸುವ ಸುದೀರ್ಘ ಪ್ರಣಯದ ದೃಶ್ಯವನ್ನು ಕುರ್ಬಾನ್ ಚಿತ್ರ ಹೊಂದಿರುವ ಮೂಲಕ ದಾಖಲೆ ಸೃಷ್ಟಿಸಿದೆ.

webdunia
IFM
ಅಂದಹಾಗೆ ವಿಶೇಷವೆಂದರೆ, ಸೈಫ್ ಹಾಗೂ ಕರೀನಾಗೆ ಈ ದೃಶ್ಯದಲ್ಲಿ ನಟಿಸಲು ರಿಹರ್ಸಲ್ ಬೇಕಾಗಲೇ ಇಲ್ಲವಂತೆ. ಅಷ್ಟೇ ಅಲ್ಲ, ಒಂದು ಮುತ್ತು ಕೊಡಲು ತಿಣುಕಾಡಿ ಹತ್ತಿಪ್ಪತ್ತು ಟೇಕ್ ಪಡೆದುಕೊಂಡು ಕೊನೆಗೂ ಮುತ್ತು ಕೊಟ್ಟು ದೊಡ್ಡ ಸಾಧನೆ ಮಾಡಿದಂತೆ ನಿಟ್ಟುಸಿರು ಬಿಡುವ ಬಾಲಿವುಡ್ ನಾಯಕ ನಾಯಕಿಯರಿಗೆ ಕರೀನಾ ಹಾಗೂ ಸೈಫ್ ತಾವೆಷ್ಟು ಅದ್ಭುತ ನಟನಟಿಯರೆಂದೂ ತೋರಿಸಿಕೊಟ್ಟಿದ್ದಾರೆ. ಸೈಫ್- ಕರೀನಾರ ಬಿಸಿ ಬಿಸಿ ಹಾಸಿಗೆ ದೃಶ್ಯಗಳು ಒಂದೇ ಟೇಕ್‌ನಲ್ಲಿ ನಿರ್ದೇಶಕರಿಗೆ ಒಕೆಯಾಯಿತಂತೆ. ಅಷ್ಟೂ ಮನೋಜ್ಞವಾಗಿ ತಲ್ಲೀನತೆಯಿಂದ ಈ ಇಬ್ಬರು ಜೋಡಿಗಳು ಕ್ಯಾಮರಾ ಮುಂದೆ ಹಾಸಿಗೆ ಹಂಚಿಕೊಂಡರಂತೆ. ಅಷ್ಟೇ ಅಲ್ಲ, ಸುದೀರ್ಘ ಕಾಲ ತುಟಿಗೆ ತುಟಿ ಸೇರಿಸಿ ಚುಂಬಿಸುತ್ತಲೇ ಇದ್ದ ಈ ಜೋಡಿಯ ಚುಂಬನವೂ ಕೇವಲ ಒಂದೇ ಟೇಕ್‌ನಲ್ಲಿ ಒಕೆಯಾಯಿತಂತೆ.

ಲವ್ ಆಜ್ ಕಲ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ತನ್ನಿನಿಯ ಸೈಫ್‌ ತುಟಿಗೆ ತುಟಿಯೊತ್ತಿದ್ದನ್ನು ನೋಡಿಯೇ ಚಡಪಡಿಸಿದ್ದ ಕರೀನಾಗೆ ಕೊನೆಗೂ ಬಹುಕಾಲದಿಂದ ಕಾದ ಅವಕಾಶ ಸಿಕ್ಕಂತಾಗಿದೆ. ಹಾಗಾಗಿಯೋ ಏನೋ, ಸುದೀರ್ಘವಾಗಿ ಸೈಫ್ ತುಟಿಯನ್ನು ಚುಂಬಿಸಿ ಬಾಲಿವುಡ್ ಇತಿಹಾಸದಲ್ಲಿ ಹೊಸ ಭಾಷ್ಯವನ್ನೇ ಬರೆದಳು!!!

ಕುರ್ಬಾನ್ ಕಥೆ ಭಯೋತ್ಪಾದನೆಯ ಕಥಾಹಂದರವನ್ನು ಒಳಗೊಂಡಿದೆ. ಸೈಫ್ ಇದರಲ್ಲಿ ಭಯೋತ್ಪಾದಕನಾದರ, ಕರೀನಾ ಭಯೋತ್ಪಾದಕನ ಹೆಂಡತಿ. ಭಯೋತ್ಪಾದೆಯ ಕಥೆಯಲ್ಲಿ ಇವರಿಬ್ಬರ ಸುದೀರ್ಘ ಪ್ರಣಯದ ದೃಶ್ಯ ಯಾಕಪ್ಪಾ ಎಂದೆಲ್ಲಾ ತಲೆಬಿಸಿ ಮಾಡಬೇಡಿ. ನಿಜ ಜೀವನದ ಜೋಡಿಗಳು ಸಿನಿಮಾದಲ್ಲಿ ಹಾಸಿಗೆ ಹಂಚುವುದನ್ನು ನೋಡಲೆಂದೇ ಈ ಚಿತ್ರವನ್ನು ಹಲವರು ಕುತೂಹಲದಿಂದ ನೋಡಲು ಬರುತ್ತಾರೆ ಎಂಬುದು ರೆನ್ಸಿಲ್ ಡಿಸಿಲ್ವಾ ಲೆಕ್ಕಾಚಾರ. ಹಾಗಾಗಿ ಸಿನಿಮಾದಲ್ಲಿ ರೆನ್ಸಿಲ್ ತುಸು ಹೆಚ್ಚೇ ಕರೀನಾ- ಸೈಫ್ ಪ್ರಣಯವನ್ನು ಚಿತ್ರೀಕರಿಸಿದ್ದಾರಂತೆ.

Share this Story:

Follow Webdunia kannada