Select Your Language

Notifications

webdunia
webdunia
webdunia
webdunia

ಸೆಕ್ಸಿ ತಮನ್ನಾ ಇನ್ನು ಮುಂದೆ ಅತ್ತಿಗೆ ಪಾತ್ರಕ್ಕೆ ಸಿಮೀತಾನಾ ?

ತಮನ್ನಾ
, ಸೋಮವಾರ, 31 ಮಾರ್ಚ್ 2014 (19:37 IST)
ತೆಲುಗು ತಮಿಳು ಚಿತ್ರಗಳಲ್ಲಿ ಒಂದೊಮ್ಮೆ ಮಿಂಚಿದ್ದ ನಟಿ ತಮನ್ನಾ ಗೆ ಈಗ ಯಾವುದೇ ಅವಕಾಶಗಳು ಕೈಯಲ್ಲಿ ಇಲ್ಲ. ಸುಮ್ಮನೆ ಕೂರುವುಕ್ಕಿಂತ ಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳುವುದು ಸೂಕ್ತ ಅಂತ ಅನ್ನಿಸಿದೆ ಆಕೆಗೆ. ಇದರ ಪರಿಣಾಮ ತಮನ್ನಾ ತಮ್ಮ ಗಮನವನ್ನು ಈಗ ಹೊಸ ಪಾತ್ರಗಳತ್ತ ನೆಟ್ಟಿದ್ದಾರೆ. ತಮನ್ನಾ ಈ ಸ್ಥಿತಿಗೆ ಕಾರಣ ವೇನು ಎಂದು ಹುಡುಕಲು ಹೊರಟರೆ ಎದುರಾಗುವುದು ಎರಡು ಹೆಸರು. ಅದು ಹನ್ಸಿಕಾ ಮತ್ತು ಸಮಂತ. ಈ ಇಬ್ಬರು ನಟಿಯರು ಮುದ್ದಾದ ತಮನ್ನಾ ಸ್ಥಾನದಲ್ಲಿ ಇದ್ದಾರೆ . ಅಂದರೆ ಹನ್ಸಿಕಾ ಈಗ ತಮಿಳಿನಲ್ಲಿ ಅವಕಾಶಗಳನ್ನು ದೋಚುತ್ತಿದ್ದರೆ, ಸಮಂತ ತೆಲುಗಿನಲ್ಲಿ ಹೆಚ್ಚು ಹೆಚ್ಚು!ಇದೆಲ್ಲವನ್ನು ಗಮನಿಸಿದ ತಮನ್ನಾ ಇನ್ನುಮುಂದೆ ಸುಮ್ಮನೆ ಕೂರುವುದಕ್ಕಿಂತ ಬಂದ ಪಾತ್ರಗಳನ್ನು ಮಾಡುವುದು ಸೂಕ್ತ ಎಂದು ತಿಳಿದು ಈಗ ಸಿಕ್ಕಷ್ಟೆ ಸೀರುಂಡೆ ಎಂದು ನಟಿಸಲು ಸಿದ್ಧರಾಗಿದ್ದಾರೆ.

ಇತ್ತೀಚೆಗೆ ತಮಿಳಿನ ಓರ್ವ ನಿರ್ದೇಶಕ ಏನಮ್ಮ ತಮನ್ನಾ ನನ್ನ ಚಿತ್ರದಲ್ಲಿ ಅತ್ತಿಗೆ ಪಾತ್ರ ಖಾಲಿ ಇದೆ ಮಾಡ್ತೀಯ ಎಂದು ಕೇಳಿದರಂತೆ. ಆಗ ಹಿಂದೂ ಮುಂದೂ ನೋಡದೆ ಆಕೆ ಓಕೆ ಅಂದರಂತೆ. ಇಲ್ಲಿ ತನಕ ಕಾಲೇಜ್ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದ ತಮನ್ನಾ ಈಗ ಅತ್ತಿಗೆ ಪಾತ್ರದಲ್ಲಿ ? ಆದರೆ ಈ ಪಾತ್ರದ ಮೂಲಕ ತನ್ನ ಪ್ರತಿಭೆ ತೋರಿ ಸಿನಿರಂಗಕ್ಕೆ ಬುದ್ಧಿ ಕಲಿಸ್ತೀನಿ ಅನ್ನುವ ಶಪಥ ಆಕೆಯಿಂದ.ಒಂದೊಮ್ಮೆ ನಾನು ಸದಾ ಬ್ಯುಸಿ , ನನಗೆ ಟ್ವಿಟ್ವರ್ ಪಟ್ಟರ್ ನಲ್ಲಿ ಅಪ್ ಡೇಟ್ ಮಾಡೋಕೆ ಪುರುಸೊತ್ತಿಲ್ಲ ಎಂದು ಹೇಳುತ್ತಿದ್ದ ತಮನ್ನಾ ಈಗ ಪ್ರತಿಯೊಂದು ಟ್ವೀಟ್ ಮಾಡ್ತಾ ಇದ್ದಾಳೆ ಅಂದ್ರೆ ಆಕೆ ಅದೆಷ್ಟು ಕೆಲಸ ಇಲ್ಲದೇ ಇರ ಬಹುದು ಗೆಸ್ ನೀವೇ ಮಾಡಿ !

Share this Story:

Follow Webdunia kannada