Article Bollywood Gossips %e0%b2%b8%e0%b3%82%e0%b2%95%e0%b3%8d%e0%b2%a4 %e0%b2%b5%e0%b2%b0%e0%b2%a8%e0%b2%bf%e0%b2%97%e0%b2%be%e0%b2%97%e0%b2%bf %e0%b2%b6%e0%b2%bf%e0%b2%b2%e0%b3%8d%e0%b2%aa%e0%b2%be %e0%b2%b9%e0%b3%81%e0%b2%a1%e0%b3%81%e0%b2%95%e0%b2%be%e0%b2%9f 107072500030_1.htm

Daily Horoscope

Select Your Language

Notifications

webdunia
webdunia
webdunia
webdunia

ಸೂಕ್ತ ವರನಿಗಾಗಿ ಶಿಲ್ಪಾ ಹುಡುಕಾಟ

ಸೂಕ್ತ
ಅನಿವಾಸಿ ಭಾರತೀಯ ವ್ಯಾಪಾರಿಯಾಗಿರುವ ರಾಜ್ ಕುಂದ್ರಾ ಅವರೊಂದಿಗೆ ಬಿಗ್ ಬ್ರದರ್ ಖ್ಯಾತಿಯ ಶಿಲ್ಪಾಶೆಟ್ಟಿ ಅವರೊಂದಿಗೆ ವಿವಾಹವಾಗಲಿದ್ದಾರೆಂಬ ವದಂತಿಯನ್ನು ಶಿಲ್ಪಾಶೆಟ್ಟಿಯ ವಕ್ತಾರ ದಾಳೆ ಭಗ್ವಾಗಾರ್ ತಳ್ಳಿ ಹಾಕಿದ್ದಾರೆ.

ಇತ್ತೀಚೆಗೆ ಬಿಡುಗಡೆ ಮಾಡಲಾದ S2 ಸುಗಂಧ ದ್ರವ್ಯದ ಪರವಾನಿಗೆದಾರರಾಗಿದ್ದಾರೆ ರಾಜ್. ಅಲ್ಲದೇ ಅವರು ಶಿಲ್ಪಾಳ ಒಳ್ಳೆಯ ಸ್ನೇಹಿತ ಮಾತ್ರ. ಇಷ್ಟನ್ನು ಹೊರತುಪಡಿಸಿದರೆ ಬೇರೆ ಯಾವ ಸಂಬಂಧವಿಲ್ಲ ಎಂದು ಶಿಲ್ಪಾಳ ವಕ್ತಾರ ಸ್ಪಷ್ಟಪಡಿಸಿದ್ದಾರೆ.

ಶಿಲ್ಪಾ ತನ್ನ ಸಂಬಂಧವನ್ನು ಮುಚ್ಚಿಡುವಂಥ ಸ್ವಭಾವದ ಮಹಿಳೆಯಲ್ಲ. ಯಾರೊಂದಿಗಾದರೂ ಅವಳು ಸಂಬಂಧ ಸ್ನೇಹ ಬೆಳೆಸಿಕೊಂಡಿದ್ದರೆ ಅದನ್ನು ಅವಳೇ ಬಹಿರಂಗಪಡಿಸುತ್ತಾಳೆ. ಆದರೆ, ಇಲ್ಲಿವರೆಗೂ ಅವಳಿಗೆ ತನ್ನ "ರಾಜಕುಮಾರ" ಸಿಕ್ಕಿಲ್ಲ. ಹೀಗಾಗಿ ಯಾವುದೇ ವಿವಾಹದ ಪ್ರಸ್ತಾಪಗಳಿಲ್ಲ ಎಂದು ಡಾಳೆ ಹೇಳಿದ್ದಾರೆ.

ಇಂಥ ಗಾಳಿಸುದ್ದಿ ಹರಡಿಸುವುದರಿಂದ ಭಾರತೀಯ ಮಾದ್ಯಮಗಳು ಪ್ರತಿಕೂಲ ಪರಿಣಾಮ ಎದಿರಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ನಮ್ಮ ದೇಶದ ಸಂಸ್ಕೃತಿ, ಪರಂಪರೆಯನ್ನು ಬ್ರಿಟನ್‌ನಲ್ಲಿ ಶಿಲ್ಪಾ ಪ್ರಚುರಪಡಿಸುತ್ತಿದ್ದಾಳೆ. ಅಲ್ಲದೇ ವಿದೇಶದಲ್ಲಿರುವ ಭಾರತೀಯರು ಅವಳನ್ನು ಭಾರತದ ರಾಯಬಾರಿಯಾಗಿ ಭಾವಿಸುತ್ತಿದ್ದಾರೆ. ಆದ್ದರಿಂದ ಇಂಥ ನಿರಾಧಾರ ಮತ್ತು ವಿವಾದತ್ಮಕವಾಗಿ ಅವಳ ಇಮೆಜ್ ಹಾಳು ಮಾಡುವಂಥ ಗಾಳಿಸುದ್ದಿಯನ್ನು ಹರಡಿಸಬಾರದು. ಇದರಿಂದ ಹೊರ ಜಗತ್ತಿಗೆ ನಮ್ಮ ಮಾದ್ಯಮಗಳ ಅಶಕ್ತತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಶಿಲ್ಪಾ ಶೆಟ್ಟಿಗೆ ಇತ್ತೀಚಿಗಷ್ಟೆ ಬ್ರಿಟನ್‌ನ ಲೀಡ್ಸೆ ಮೆಟ್ರೊಪಾಲಿಟಿನ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಡ್ ಪ್ರಶಸ್ತಿ ನೀಡಿ ಗೌರವಿಸದ್ದನ್ನು ಇಲ್ಲಿ ಸ್ಮರಿಸಬಹುದು. ಏತನ್ಮಧ್ಯೆ ಶಿಲ್ಪಾಶೆಟ್ಟಿಯ ಸಹಿ ಇರುವ ಎಸ್2 ಸುಗಂಧ ದ್ರವ್ಯ ಸುಮಾರು 500 ಕಂಪೆನಿಗಳೊಂದಿಗೆ ಸ್ಪರ್ಧೆ ನಡೆಸಿ ಬ್ರಿಟನ್ ಮಾರುಕಟ್ಟೆಯಲ್ಲಿ 3 ಸ್ಥಾನಕ್ಕೇರಿದೆ

Share this Story:

Follow Webdunia kannada