Publish Date: Mon, 03 Sep 2007 (17:37 IST)
Updated Date: Mon, 03 Sep 2007 (17:37 IST)
ಮುಂಬೈ-ಚುನಾರಿ ಮೇನ್ ದಾಗ್ ಚಿತ್ರದ ಬಳಿಕ ರಾಣಿ ವಿವಾಹವಾಗಿ ಸಿನೆಮಾಗೆ ಗುಡ್ಬೈ ಹೇಳುತ್ತಾಳೆಂಬ ವದಂತಿಗಳಿಗೆ ರಾಣಿಯ ಸಮೀವರ್ತಿ ಮೂಲವೊಂದು ನಿರಾಕರಿಸಿದೆ.
"ವಾಸ್ತವ ವಿಷಯವೇನೆಂದರೆ ರಾಣಿ ಹೊಸ ಚಿತ್ರಗಳಿಗೆ ಸಹಿ ಹಾಕಿದ್ದು,ಚಿತ್ರೀಕರಣದಲ್ಲಿ ಸಂಪೂರ್ಣ ಮುಳುಗಿದ್ದಾಳೆ. ಆಕೆಗೆ ವಿವಾಹವಾಗಲು ಸಮಯವೆಲ್ಲಿದೆ. ಟ್ಯಾಬ್ಲಾಯ್ಡ್ಗಳಲ್ಲಿ ಕಾಣಿಸಿಕೊಳ್ಳುವ ಸುಳ್ಳಿನ ಕಂತೆಗಳನ್ನು ನಿರಾಕರಿಸುವುದಕ್ಕೂ ಆಕೆಗೆ ಪುರುಸೊತ್ತಿಲ್ಲ" ಎಂದಿದೆ.
ರಾಣಿ ಇನ್ನೂ ಕೆಲವು ಚಿತ್ರಗಳಿಗೆ ಸಹಿ ಹಾಕಲಿದ್ದಾಳೆ. ಲಾಗಾ ಚುನಾರಿಯಲ್ಲಿ ತನ್ನ ವೃತ್ತಿ ಜೀವನದ ಕಠಿಣ ಸವಾಲಾದ ಬ್ರಾಹ್ಮಣ ಕನ್ಯೆಯ ಪಾತ್ರ ನಿರ್ವಹಿಸಿದ್ದಾಳೆ. ಅದರಲ್ಲಿ ತನ್ನ ಕುಟುಂಬದ ಪೋಷಣೆಗೆ ನೈತಿಕತೆ ಜತೆ ರಾಜಿಯಾಗುತ್ತಾಳೆ.
ಸಂಜಯ ಬನ್ಸಾಲಿಯ ಸವಾರಿಯ ಚಿತ್ರದಲ್ಲಿ ರಾಣಿ ಹಳೆಯ ಕಾಲದ ಫ್ಯಾಶನ್ನಿನ, ಹೃದಯವೈಶಾಲ್ಯದ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದಾಳೆ.ರಾಣಿ ಸಂಪೂರ್ಣವಾಗಿ ಚಿತ್ರೀಕರಣದಲ್ಲಿ ಮುಳುಗಿದ್ದು, ಮದುವೆ ಬಗ್ಗೆ ಯೋಚಿಸಲೂ ಸಮಯವಿಲ್ಲ.
ತನ್ನ ಎರಡು ಮನೆಗಳನ್ನು ವಾಸಕ್ಕೆ ರೆಡಿ ಮಾಡುತ್ತಿದ್ದು ಸದ್ಯದಲ್ಲೇ ನೂತನ ಮನೆಗಳಿಗೆ ಪ್ರವೇಶ ಮಾಡಲಿದ್ದಾಳೆ. ಒಂದು ಮನೆ "ಲೌನೆಸ್ಟ್" ಎಂಬ ಊಹಾಪೋಹಕ್ಕೆ ರಾಣಿ ತೆರೆಎಳೆದಿದ್ದಾಳೆ. ಅದು ನಿರ್ಮಾಪಕರನ್ನು ಮತ್ತು ಪತ್ರಕರ್ತರನ್ನು ಭೇಟಿಯಾಗುವ ತಾಣ ಎಂದು ರಾಣಿ ಹೇಳಿದಳು.