ಸಿಟ್ಟಾಗಿದ್ದಾರೆ ಮಿ. ಪರ್ಫೆಕ್ಟ್ ಯಾಕೆ ಅಂತ ಗೊತ್ತಾ ನಿಮಗೆ?
, ಮಂಗಳವಾರ, 11 ಮಾರ್ಚ್ 2014 (12:30 IST)
ಸೋಶಿಯಲ್ ನೆಟ್ ವರ್ಕ್ ಫೇಸ್ ಬುಕ್ ನಲ್ಲಿ ತನ್ನ ಬಗ್ಗೆ ನಿರಾಧರವಾದ ಹೇಳಿಕೆ ನೀಡಿ ತನ್ನ ಪ್ರತಿಷ್ಠೆಗೆ ಭಂಗ ತಂದಿದ್ದಾರೆ ಎಂದು ಸಿಟ್ಟಾಗಿ ಪೊಲೀಸರಿಗೆ ದೂರು ನೀಡಿದ್ದಾರೆ ಮಿ. ಪರ್ಫೆಕ್ಟ್ ಅಮೀರ್ ಖಾನ್. ಮುಂಬೈ ಪೊಲೀಸ್ ಕಮೀಷನರ್ ರಾಕೇಶ್ ಮಿತ್ರ, ಜಾಯಿಂಟ್ ಕಮೀಷನರ್ ಸದಾನಂದ್ ದಾಟೆ ಅವರನ್ನು ಭೇಟಿ ಮಾಡಿದ ಅಮೀರ್ ಕ್ರೈಮ್ ಸೈಬರ್ ಸೆಲ್ ನಲ್ಲಿ ಈ ಕೇಸನ್ನು ನಮೂದಿಸಿದ್ದಾರೆ. ಕಳೆದ ಬಾರಿ ಸತ್ಯಮೇವ ಜಯತೆ ರಿಯಾಲಿಟಿ ಶೋನಲ್ಲಿ ಹೆಣ್ಣುಮಗುವಿನ ಭ್ರಾಣ ಹತ್ಯೆ, ಗೃಹ ಹಿಮ್ಸೆಯಂತಹ ಸಂಗತಿಗಳ ಬಗ್ಗೆ ಮಾಡಿದ ಕಾರ್ಯಕ್ರಮಗಳಿಗೆ ಉತ್ತಮ ಫಲಿತಾಂಶ ದೊರಕಿತ್ತು. ಈಗ ಅದರ ಎರಡನೇ ಅವತರಣಿಕೆ ಆರಂಭ ಆಗಿದೆ. ಈ ಬಾರಿ ಮೊದಲ ಎಪಿಸೋಡ್ ನಲ್ಲೆ ಅತ್ಯಾಚಾರಗಳು ಅಲ್ಲದೆ ಎರಡು ಎಪಿಸೋಡ್ ಗಳಲ್ಲಿ ಆಟ ಪೊಲೀಸ್ ಕಾನ್ಸ್ಟೇಬಲ್ ಕುರಿತು ಕಾರ್ಯಕ್ರಮ ಸಿದ್ಧ ಮಾಡಿದ್ದರು. ಅಂತಿಮವಾಗಿ ಹ್ಯುಮಾನಿಟಿ ಟ್ರಸ್ಟ್ ಗೆ ಹಣವನ್ನು ದೇಣಿಗೆ ನೀಡಿ ಎಂದು ಹೇಳಿದರು. ಆ ರೀತಿ ಕಲೆಕ್ಟ್ ಆದ ಹಣ ಒಂದು ವರ್ಗಕ್ಕೆ ಮಾತ್ರ ಬಳಕೆ ಆಗುತ್ತೆ ಅಷ್ಟೇ ಎನ್ನುವ ಕುಹಕದ ಸ್ಟೇಟ್ಮೆಂಟ್ ಫೆಸ್ ಬುಕ್ ನಲ್ಲಿ ಹೊರ ಬಿದ್ದಿತ್ತು. .
ಆದರೆ ಅಲ್ಲಿ ಹೇಳಿದ ಟ್ರಸ್ಟ್ ಗೂ ಮತ್ತು ತಾನು ನಡೆಸುತ್ತಿರುವ ಅಥವಾ ಹೇಳಿರುವ ಟ್ರಸ್ಟ್ ಗೂ ಯಾವುದೇ ರೀತಿಯ ಸಂಭಂದ ಇಲ್ಲ ಎಂದು ಅಮೀರ್ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಸ್ಪಷ್ಟ ಪಡಿಸಿದ್ದಾರೆ. ತನ್ನ ಮೇಲೆ ಮಾಡಿರುವ ಆರೋಪಗಳು ಶುದ್ಧ ಸುಳ್ಳು ಎಂದಿದ್ದಾರೆ ಅಮೀರ್. ತಮ್ಮ ಟ್ರಸ್ಟ್ ಬಡವ, ಅನಾಥರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುತ್ತದೆ ಎಂದು ಸ್ಪಷ್ಟ ಪಡಿಸಿದ್ದಾರೆ.