Publish Date: Thu, 07 Aug 2008 (19:50 IST)
Updated Date: Thu, 07 Aug 2008 (19:50 IST)
ವಿಪುಲ್ ಶಾ, ಅನೀಸ್ ಬಾಜ್ಮಿ, ಅಕ್ಷಯ್ ಕುಮಾರ್, ಕತ್ರಿನಾ ಕೈಫ್, ಇದು ಸಿಂಗ್ ಈಸ್ ಕಿಂಗ್‌ಗೆ ಸಂಬಂಧಿಸಿರುವ ನಾಲ್ಕು ಹೆಸರುಗಳು, ಇವರುಗಳಿಗೆ ಯಶಸ್ಸು ಎನ್ನುವುದು ಅಭ್ಯಾಸವಾಗಿಬಿಟ್ಟಿದೆ.
ಸಿಂಗ್ ಈಸ್ ಕಿಂಗ್ ಭಾರತ ಮತ್ತು ಪಾಕಿಸ್ತಾನದಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಪಾಕಿಸ್ತಾನದ ಸೆನ್ಸಾರ್ ಮಂಡಳಿ ಸಿಂಗ್ ಈಸ್ ಕಿಂಗ್‌ಗೆ ಹಸಿರು ನಿಶಾನೆ ತೋರಿಸಿದೆ. ಅಕ್ಷಯ್-ಕತ್ರಿನಾ ತಾರಗಣದಲ್ಲಿರುವ ಈ ಚಿತ್ರ ಈಗಾಗಲೇ ಸಾಕಷ್ಟು ಸಂಚಲನ ಉಂಟುಮಾಡಿದೆ ಮತ್ತು ಪಾಕಿಸ್ತಾನದಲ್ಲೂ ಸಿಂಗ್ ಈಸ್ ಕಿಂಗ್ ಅಬ್ಬರದ ಆರಂಭ ಕಾಣುವ ನೀರಿಕ್ಷೆಗಳಿವೆ.
ಅಂತೂ 'ಕಿಂಗ್ ಆದ ಸಿಂಗ್' ತನ್ನ ಸಾಮ್ರಾಜ್ಯವನ್ನು ಪಾಕಿಸ್ತಾನದವರೆಗೂ ವಿಸ್ತರಿಸುವುದು ಖಚಿತ...