Article Bollywood Gossips %e0%b2%b8%e0%b2%be%e0%b2%b5%e0%b2%b0%e0%b2%bf%e0%b2%af%e0%b2%be %e0%b2%aa%e0%b3%8b%e0%b2%b0%e0%b2%a8%e0%b2%bf%e0%b2%97%e0%b3%86 %e0%b2%9c%e0%b3%8b%e0%b2%a1%e0%b2%bf %e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3%e0%b2%a6 %e0%b2%9a%e0%b3%86%e0%b2%b2%e0%b3%81%e0%b2%b5%e0%b3%86 108122000034_1.htm

Daily Horoscope

Select Your Language

Notifications

webdunia
webdunia
webdunia
webdunia

ಸಾವರಿಯಾ ಪೋರನಿಗೆ ಜೋಡಿ ದಕ್ಷಿಣದ ಚೆಲುವೆ

ಆಸಿನ್
IFM
ಇಬ್ಬರೂ ಯುವಕರು, ಸುಂದರಾಂಗರು ಮತ್ತು ಆಕರ್ಷಕರು. ಖಂಡಿತವಾಗಿಯೂ ಅವರು ಅತ್ಯುತ್ತಮ ಆನ್ ಸ್ಕ್ರೀನ್ ಜೋಡಿಯಾಗಬಲ್ಲರು. ಈ ಜೋಡಿ ಬಾಲಿವುಡ್ ಪರದೆ ಮೇಲೆ ಮಿಂಚಲಿದೆ ಮತ್ತು ಖಂಡಿತವಾಗಿಯೂ ಹೊಸದನ್ನು ನೀಡುತ್ತದೆ ಎಂಬ ನಿರೀಕ್ಷೆಯಿದೆ. ನಾವು ಮಾತಾನಾಡುತ್ತಿರುವ ಜೋಡಿ ದಕ್ಷಿಣದ ಚೆಲುವೆ ಆಸಿನ್ ಮತ್ತು ಬಾಲಿವುಡ್ ಚಾಕಲೇಟ್ ಬಾಯ್, ಸಾವರಿಯಾ ಪೋರ ರಣ್‌ಬೀರ್ ಕಪೂರ್ ಬಗ್ಗೆ. ಇವರಿಬ್ಬರು ಇನ್ನೂ ಹೆಸರಿಡದ ಚಿತ್ರದಲ್ಲಿ ಜೊತೆಯಾಗಲಿದ್ದಾರೆ.

ಈ ಹೆಸರಿಡದ ಚಿತ್ರವನ್ನು ತಮಿಳು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ತಯಾರಿಸಲಾಗುತ್ತದೆ. ಸ್ಕ್ರಿಪ್ಟ್ ಮತ್ತು ಇತರ ತಾರಗಣದ ಬಗ್ಗೆ ಹೆಚ್ಚಿನ ವಿವರಗಳಿಲ್ಲ. ದಕ್ಷಿಣ ಭಾರತದ ಜಿವಿ ಫಿಲಂಮ್ಸ್ ಚಿತ್ರವನ್ನು ನಿರ್ಮಿಸಲಿದೆ. ಏತನ್ಮಧ್ಯೆ, ನಿರ್ಮಾಪಕರಾದ ಉಷಾ ವೆಂಕಟರಮಣಿ ಮತ್ತು ಮಹದೇವನ್ ಗಣೇಶ್ ರಣ್‌ಬೀರ್ ಮತ್ತು ಆಸಿನ್‌ರನ್ನು ಮುಖ್ಯಪಾತ್ರಗಳಿಗೆ ಅಂತಿಮಗೊಳಿಸಿದ್ದಾರೆ.

ಈ ಚಿತ್ರವೂ ಬಹುಪಾಲು ರಜನಿಕಾಂತ್ ಮತ್ತು ಐಶ್ವರ್ಯ ರೈ ನಟಿಸುತ್ತಿರುವ ತಮಿಳು ಚಿತ್ರ ಇಂದಿರನ್‌ನಂತೆಯೇ ಇರುವುದಾಗಿ ಹೇಳಲಾಗುತ್ತಿದೆ.

Share this Story:

Follow Webdunia kannada