'ಸಾವರಿಯಾ'ದಲ್ಲಿ ಬನ್ಸಾಲಿ ಕೈಚಳಕ
Publish Date: Fri, 08 Jun 2007 (15:29 IST)
Updated Date: Fri, 08 Jun 2007 (15:28 IST)
ಬಾಲಿವುಡ್‌ನ ಹೆಸರಾಂತ ಸಿನಿನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಇದೀಗ ಹೊಸತೊಂದು ಕ್ಷೇತ್ರದಲ್ಲಿ ತಮ್ ಕೈಚಳಕ ತೋರುತ್ತಿದ್ದಾರೆ. ಅದ್ನಾನಿ ಸಾಮಿ ಅವರ ರೋಮ್ಯಾಂಟಿಕ್ ಸಿನಿಮಾ 'ಸಾವರಿಯಾ'ದಲ್ಲಿ ಸಂಕಲನಕಾರರಾಗಿ ಕತ್ತರಿ ಕೈಗೆತ್ತಿಕೊಂಡಿದ್ದಾರೆ.ನಿರ್ದೇಶನಕ್ಕಿಂತ ಇದು ಕಠಿಣ ಎನ್ನುತ್ತಾರೆ ಸಂಜಯ್ ಏಕೆಂದರೆ ನಾವು ನಿಷ್ಠೆಯಿಂದ ತಯಾರಿಸಿದ ದೃಶ್ಯಗಳನ್ನು ನಿರ್ಭಾವುಕರಾಗಿ ಕತ್ತರಿಸಿ ಎಸೆದು ಚಿತ್ರವನ್ನು ಒಪ್ಪಗೊಳಿಸುವುದಿದೆಯಲ್ಲಾ ಅದೇ ನಿಜವಾದ ಕಷ್ಟಕರ ಕೆಲಸ ಎನ್ನುವುದು ಅವರ ಅಭಿಪ್ರಾಯ.ಪ್ರಸ್ತುತ ಚಿತ್ರವನ್ನು ಸಂಜಯ್ ಅವರ ಸೋದರಿ ಬೇಲಾ ಸೆಹ್ಗಲ್ ನಿರ್ದೇಶಿಸಿದ್ದಾರೆ. ಇದು ಅವರ ಚೊಚ್ಚಲ ಚಿತ್ರ. ಈ ಸಂದರ್ಭದಲ್ಲಿ ಇವರಿಬ್ಬರೂ ತಮ್ಮ ವೃತ್ತಿ ಬದಲಿಸಿಕೊಂಡಿದ್ದಾರೆ. ಬೇಲಾ ಇದುವರೆಗೆ ಚಿತ್ರಗಳ ಸಂಕಲನ ಮಾಡುತ್ತಿದ್ದರು.ಸಂಜಯ್ ಲೀಲಾ ಬನ್ಸಾಲಿ ಅವರ ಈ ಮೊದಲಿನ ಚಿತ್ರಗಳಾದ ಖಾಮೋಶಿ,ದೇವದಾಸ್,ಹಮ್ ದಿಲ್ ದೇ ಚುಕೇ ಸನಮ್, ಬ್ಲ್ಯಾಕ್ ಇತ್ಯಾದಿ ಚಿತ್ರಗಳನ್ನು ಬೇಲಾ ಸಂಕಲಿಸಿದ್ದರು.