Article Bollywood Gossips %e0%b2%b8%e0%b2%be%e0%b2%b0%e0%b2%bf %e0%b2%85%e0%b2%ad%e0%b2%bf%e0%b2%b7%e0%b3%87%e0%b2%95%e0%b3%8d %e0%b2%b5%e0%b3%86%e0%b2%b0%e0%b3%8d%e0%b2%b0%e0%b2%bf %e0%b2%b5%e0%b3%86%e0%b2%b0%e0%b3%8d%e0%b2%b0%e0%b2%bf %e0%b2%b8%e0%b2%be%e0%b2%b0%e0%b2%bf 113121200010_1.htm

Daily Horoscope

Select Your Language

Notifications

webdunia
webdunia
webdunia
webdunia

ಸಾರಿ ಅಭಿಷೇಕ್ ವೆರ್ರಿ ವೆರ್ರಿ ಸಾರಿ

ಅಭಿಷೇಕ್ ಬಚ್ಚನ್
PR
ಧೂಂ3 ರ ನಿರ್ಮಾಣ ಸಂಸ್ಥೆ ಛೋಟಾ ಬಚ್ಚನ್ ಅಭಿಷೇಕ್ ಬಳಿ ಕ್ಷಮೆ ಯಾಚಿಸಿದೆ. ಇದೇನು ಹೀಗಿದೆ ಸುದ್ದಿ ಅನ್ನುವ ಕುತೂಹಲ ನಿಮ್ಮಲ್ಲಿ ಮೂಡುವುದು ಸಹಜ. ಧೂಂ3ನಲ್ಲಿ ನಟ ಅಭಿಷೇಕ್ ಬಚ್ಚನ್ ಸಹ ಹೀರೋಗಳಲ್ಲಿ ಒಬ್ಬರಾಗಿ ನಟಿಸುತ್ತಿದ್ದಾರೆ. ಹಾಗಾದರೆ ಅವರ ಬಳಿ ಯಾಕೆ ಕ್ಷಮಾಪಣೆ ಯಾಚಿಸಿದೆ ಆ ಪ್ರೊಡಕ್ಷನ್ ಹೌಸ್ ಎನ್ನುವ ಆಶ್ಚರ್ಯ ಮೂಡುವುದು ಸಹಜ. ನಿಮಗೆಲ್ಲರಿಗೂ ಗೊತ್ತಿರುವಂತೆ ಧೂಂ3ರ ಬಗ್ಗೆ ದಿನಕ್ಕೊಂದು ಹೊಸ ಬಗೆಯ ವಾರ್ತೆಗಳು ಕೇಳಿ ಬರುತ್ತಿವೆ. ಅದರ ಹಾಡಿಗೆ, ಕತ್ರಿನಾ ನೃತ್ಯಕ್ಕೆ, ಅಮೀರ್ ಬಾಡಿಗೆ,ಹೀಗೆ ಪ್ರತಿಯೊಂದು ಸಂಗತಿಗಳು .ಆದರೇ ಈ ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿರುವ ಅಭಿಷೇಕ್ ಬಚ್ಚನ್ ಬಗ್ಗೆ ಯಾವುದೇ ಬಗೆಯ ಸುದ್ದಿಯನ್ನು ಹೊರ ಬಿಟ್ಟಿಲ್ಲ, ಹಾಗೆನ್ನುವುದಕ್ಕಿಂತ ಅವರ ಬಗ್ಗೆ ಯಾವುದೇ ರೀತಿಯ ಪ್ರಚಾರ ಕಾರ್ಯದಲ್ಲಿ ತೊಡಗಿಲ್ಲ ಪ್ರೊಡಕ್ಷನ್ ಹೌಸ್. ಇದರಿಂದ ಜನರಿಗೆ ಅಭಿಷೇಕ್ ಬಚ್ಚನ್ ಈ ಚಿತ್ರದಲ್ಲಿ ಇರುವ ಸಂಗತಿಯೇ ಮರೆತುಹೋಗುವಂತಾಗಿದೆ.

ಅಲ್ಲದೇ ಆರಂಭದಿಂದಲೂ ಈ ಚಿತ್ರದಲ್ಲಿ ಅಮೀರ್ ಖಾನ್ ನೆಗಟಿವ್ ರೋಲ್ ಬಗ್ಗೆ ಹೆಚ್ಚು ಪ್ರಚಾರ ಮಾಡಿತ್ತು ಪ್ರೊಡಕ್ಷನ್ ಹೌಸ್. ಇದು ಅಭಿಷೇಕ್ ಬಚ್ಚನ್ ಮೇಲೆ ತೀವ್ರವಾದ ಪರಿಣಾಮ ಬೀರಿತ್ತು. ಇತ್ತೀಚೆಗೆ ನಡೆದ ಆಡಿಯೋ ಲಾಂಚ್ ನಲ್ಲಿ ಅಭಿಷೇಕ್ ಭಾಗವಹಿಸಿರಲಿಲ್ಲ. ಕಾರಣ ಕೇಳಿದಾಗ ತನ್ನನ್ನು ಯಾರೂ ಕರೆದಿರಲಿಲ್ಲ ಎಂದು ಹೇಳಿದ್ದರು . ಈ ರೀತಿ ಅಭಿಷೇಕ್ ಹೇಳುವುದಕ್ಕೆ ಕಾರಣ ನಿರ್ಮಾಪಕರು ಮಾಡಿರುವ ತಪ್ಪು ಎಂದು ಅರಿತ ಆದಿತ್ಯ ಚೋಪ್ರಾ ಖುದ್ದು ತಾನೇ ಅಭಿಷೇಕ್ ಬಳಿಗೆ ಹೋಗಿ ಸಾರಿ ಕೇಳಿದರಂತೆ. ಇದರಿಂದ ಅಷ್ಟು ಕಾಲದಿಂದ ಕೋಪದಿಂದ ಇದ್ದ ಅಭಿಷೇಕ್ ಆ ಬಳಿಕ ಶಾಂತರಾಗಿ ಸಿನಿಮಾ ಪ್ರಮೋಷನ್ ಗೆ ಬಂದರಂತೆ.

Share this Story:

Follow Webdunia kannada