Select Your Language

Notifications

webdunia
webdunia
webdunia
webdunia

ಸಾಜಿದ್ ನನ್ನ ಅಣ್ಣ ದಯಮಾಡಿ ಏನೇನೋ ಸುದ್ದಿ ಹರಡದಿರಿ ಎಂದಳು ನೋಡಿ ತಮನ್ನ

ಅಣ್ಣ
, ಗುರುವಾರ, 3 ಏಪ್ರಿಲ್ 2014 (11:10 IST)
PR
ಆತ ನನ್ನ ರಾಖಿ ಬ್ರದರ್. ನನ್ನ ಸ್ವಂತ ಅಣ್ಣನಂತೆ ನಾನು ಗೌರವಿಸುತ್ತಿದ್ದೇನೆ. ನಮ್ಮ ಈ ಪವಿತ್ರವಾದ ಬಾಂಧವ್ಯದ ಮೇಲೆ ಕೆಸರನ್ನು ಎರಚದಿರಿ ಎಂದು ನೊಂದು ಹೇಳಿದ್ದಾಳೆ ತಮನ್ನ ಭಾಟಿಯ.

ಆಕೆಗೆ ಸಿಕ್ಕಾಪಟ್ಟೆ ಬೇಸರ ಆಗಿದೆ. ಆರೀತಿ ಆಗಲು ಸಹಿತ ಕಾರಣ ಇದೆ. ತಮನ್ನ ಹಾಗೂ ನಿರ್ದೇಶಕ ಸಾಜಿದ್ ಖಾನ್ ಅವರಿಬ್ಬರಿಗೂ ಪ್ರೀತಿ ಉಂಟಾಗಿದೆ.ಈಗಾಗಲೇ ಗೃಹಸ್ಥಾಶ್ರಮ ನಡೆಸುತ್ತಿರುವ ಸಾಜಿದ್ ತಮನ್ನ ಜೊತೆಗೂ ಸಹಿತ ಎರಡನೇ ಮಾಡುವೆ ಮಾಡಿಕೊಂಡಿದ್ದಾರೆ. ಅವರಿಬ್ಬರೂ ಒಟ್ಟಾಗಿ ಸಂಸಾರ ನಡೆಸುತ್ತಿದ್ದಾರೆ ಹೀಗೆ ಊಹೆಗಳಿಗೆ ತಲೆ ಬಾಲ ಇಲ್ಲದಂತಾಗಿದೆ.

webdunia
PR
ಇಂತಹ ಸುದ್ದಿಗಳ ಬಗ್ಗೆ ಹೆಚ್ಚು ಗಮನ ನೀಡದೆ ಇದ್ದರು ಸಾಜಿದ್ ಮತ್ತು ತಮನ್ನ. ಆದರೆ ಇದು ದಿನೇದಿನೇ ಹೆಚ್ಚು ರಾಡಿ ಆಗುತ್ತಾ ಬಂದಾಗ ಇನ್ನು ಸುಮ್ಮನೆ ಇರುವುದರಲ್ಲಿ ಯಾವುದೇ ರೀತಿಯ ಪ್ರಯೋಜನ ಇಲ್ಲ ಎಂದು ಹಿಮ್ಮತ್ ವಾಲ ಚಿತ್ರದ ನಿರ್ದೇಶಕ ಸಾಜಿದ್ ಭಾಯ್ ಬಗ್ಗೆ ಹಾಗು ತನ್ನ ನಡುವಿನ ಬಾಂಧವ್ಯದ ಬಗ್ಗೆ ಬಿಚ್ಚಿ ಹೇಳಿದ್ದಾಳೆ ಆಕೆ.

ಇಂತಹ ಗಾಳಿ ಸುದ್ದಿಗಳಿಂದ ಕುಟುಂಬದಲ್ಲಿ ಇಲ್ಲದ ಸಮಸ್ಯೆಗಳು ಹುಟ್ಟಲು ಕಾರಣ ಆಗುತ್ತೆ. ದಯಮಾಡಿ ಈ ರೀತಿಯ ಸುದ್ದಿಗಳನ್ನು ಹರಡದಿರಿ ಎಂದು ಸುಂಕದವರಾದ ಮಾಧ್ಯಮದದ ಮುಂದೆ ತನ್ನ ದುಃಖ ಹೇಳಿದ್ದಾಳೆ ಆಕೆ!

ಈ ಬಗ್ಗೆ ಸಾಜಿದ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. ತಮನ್ನ ನನ್ನ ತಂಗಿ. ಆದಕಾರಣ ಹೆಚ್ಚು ಅವಳ ಜೊತೆಗೆ ಇರ್ತೀನಿ. ಇಂತಹ ಸುದ್ದಿಗಳನ್ನು ಹರಡುವವರ ಬಗ್ಗೆ ಏನು ಹೇಳ ಬೇಕೋ ಗೊತ್ತಾಗುತ್ತಿಲ್ಲ.ಇನ್ನುಮುಂದಾದರು ದಯಮಾಡಿ ಈ ರೀತಿಯ ಗಾಸಿಪ್ಸ್ ಹರಡದಿರಿ ಎನ್ನುವ ಮಾತನ್ನು ಹೇಳಿದ್ದಾರೆ ಸಾಜಿದ್..

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada