Publish Date: Wed, 24 Oct 2007 (18:16 IST)Updated Date: Wed, 24 Oct 2007 (18:14 IST)
IFM
ಕನಸುಗಳು, ಕನಸುಗಳು ಅಸಂಖ್ಯಾತ ಕನಸುಗಳು ಎಲ್ಲವೂ ಬಾಲಿವುಡ್‌ನ ಮಾದಕ ಜಗತ್ತಿನಲ್ಲಿ ನನಸಾಗುತ್ತವೆ. ಅದು ಕೀರ್ತಿಯಾಗಿರಲಿ, ಹೆಸರಾಗಿರಲಿ, ಯಶಸ್ಸಾಗಿರಲಿ ಅಥವಾ ಜನಪ್ರಿಯತೆಯಾಗಿರಲಿ ಎಲ್ಲವೂ ಒಂದೇ ಸೂರಿನಡಿ ಸಿಗುತ್ತದೆ. ಶ್ರಮದ ದುಡಿಮೆ, ಹೋರಾಟ ಇವಕ್ಕೆ ಬೇಕಿದ್ದರೂ ಅದೃಷ್ಟವೂ ಇಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ
ಬಾಲಿವುಡ್ ಅದೃಷ್ಟ ಅರಸಿಕೊಂಡು ಬರುವ ನೂರಾರು ಹೊಸಮುಖಗಳಲ್ಲಿ ಕೆಲವೇ ಕೆಲವರು ಈ ಪ್ರದರ್ಶನ ಜಗತ್ತಿನಲ್ಲಿ ಅಚ್ಚೊತ್ತುತ್ತಾರೆ. ಇಂಡಿಯ ಎಫ್‌ಎಂ ಭರವಸೆಯ ಯುವ ಪ್ರತಿಭಾವಂತ ನಟರ ಹೊಸ ಗುಂಪನ್ನು ಪರಿಚಯಿಸುತ್ತಿದ್ದು ಅವರು ನಾಳೆಯ ಶೂಟಿಂಗ್ ಸ್ಟಾರ್‌ಗಳಾಗಬಹುದು.
ಅಂದಮೇಲೆ ನೀವು ಕೂಡ ಗೆಲ್ಲುವ ಕುದುರೆ ಮೇಲೆ ಬೆಟ್ ಕಟ್ಟುವ ಚೇತೋಹಾರಿ ಸ್ಪರ್ಧೆಯಲ್ಲಿ ಏಕೆ ಸೇರಬಾರದು?ಶೇಕ್ಸ್‌ಪಿಯರ್ ಹಿಂದೊಮ್ಮೆ ಹೆಸರಿನಲ್ಲಿ ಏನಿದೆ ಎಂದು ಕೇಳಿದ್ದರು. ಅವರು ಹೇಳಿದ್ದರಲ್ಲಿ ನೂರಕ್ಕೆ ನೂರು ಸತ್ಯವಿದೆ. ಆದರೆ ಕಪೂರ್ ಸರ್‌ನೇಮ್ ಬಗ್ಗೆ ಅವರು ಕೇಳಿರಲಾರರು.
ಈ ಸರ್‌ನೇಮ್ ಚಿನ್ನದ ತೂಕದಷ್ಟು ಮೌಲ್ಯಯುತವಾಗಿದೆ. ಒಳ್ಳಯ ರೂಪ, ಒಳ್ಳೆಯ ಬ್ಯಾನರ್, ಕನಸಿನ ಚೊಚ್ಚಲ ಪ್ರವೇಶ ಇವೆಲ್ಲವನ್ನು ಮಿಶ್ರಣ ಮಾಡಿದಾಗ ಸಿಗುವುದು ರಣಬೀರ್ ಕಪೂರ್. ತಂದೆ ರಿಷಿಕಪೂರ್ ಮತ್ತು ತಾತ ರಾಜ್ ಕಪೂರ್ ರೂಪ, ಸಂಜಯ್ ಲೀಲಾ ಬನ್ಸಾಲಿಯಂತ ಗುರುಗಳು,
ಇಂದಿನ ದಿನದ ರಾಕ್ ಸ್ಟಾರ್‌ಗಳಾದ ಕರಿಷ್ಮಾ ಮತ್ತು ಕರೀನಾ ಸೋದರಸಂಬಂಧಿಗಳು. ಇಷ್ಟೆಲ್ಲ ಪ್ಲಸ್ ಪಾಯಿಂಟ್ ಇರುವ ರಣಬೀರ್ ಕಪೂರ್ ಅಭಿನಯದ ಸವಾರಿಯಾ ತಪ್ಪದೇ ವೀಕ್ಷಿಸಿ.