ಸಲ್ಲೂ ಬರ್ತಡೇ ಗೆ ಕತ್ರಿನಾ ಹೋಗ್ತಾಳಾ ?
Publish Date: Fri, 27 Dec 2013 (10:59 IST)
Updated Date: Fri, 27 Dec 2013 (10:58 IST)
ಬಾಲಿವುಡ್ ಎಂಗ್ ಬಾಯ್ ಬೈಸೆಪ್ಸ್ ಮ್ಯಾನ್ ಸಲ್ಮಾನ್ ಖಾನ್ ಹುಟ್ಟು ಹಬ್ಬ ಈ ತಿಂಗಳ 27 ನೇ ತಾರೀಖು. ಅಂದು ನಡೆಯುವ ಪಾರ್ಟಿಗೆ ಆತನ ಮಾಜಿ ಗರ್ಲ್ ಫ್ರೆಂಡ್ ಕತ್ರಿನಾ ಕೈಫ್ ಹೋಗುತ್ತಾಳ ಎನ್ನುವುದೇ ಈಗ ಬಿಟೌನ್ ಮಂದಿಯಲ್ಲಿ ಕಾಡುತ್ತಿರುವ ಪ್ರಶ್ನೆ. ಮುಖ್ಯವಾಗಿ ಈ ಪ್ರಶ್ನೆ ಮನದಲ್ಲಿ ಬರಲು ಕಾರಣ ಕಾಟ್ ಈಗ ನಟ ರಣಬೀರ್ ಜೊತೆಯಲ್ಲಿ ಲವ್ವಿಡವ್ವಿಯಲ್ಲಿ ಬ್ಯುಸಿ. ಈಕೆಯನ್ನು ಇತ್ತೀಚೆಗಷ್ಟೆ ನಟ ಸಲ್ಮಾನ್ ಖಾನ್ ತನ್ನ ನಾದಿನಿ ಎಂದು ಸಹ ಹೇಳಿದ್ದರು. ಪಾನ್ ವೆಲ್ ಫಾರ್ಮ್ ಹೌಸ್ ನಲ್ಲಿ ಸಲ್ಲೂ ಜನ್ಮದಿನ ನಡೆಯುತ್ತದೆ. ಅಲ್ಲಿಗೆ ಈ ಬಾರಿ ಕತ್ರಿನಾಳಿಗೂ ಆಹ್ವಾನ ಇರುವುದರಿಂದ ತಪ್ಪದೇ ಹೋಗುತ್ತಾಳೆ ಎಂದು ನಿರೀಕ್ಷಿಸಿದ್ದಾರೆ ಬಿಟೌನ್ ಮಂದಿ. ಈ ಕಾರ್ಯಕ್ರಮಕ್ಕೆ ಅಮೀರ್ ಖಾನ್, ಕಿರಣ್ ರಾವ್, ಕರಣ್ ಜೋಹರ್, ಫರಾನ್ ಅಕ್ತರ್, ಬಿಪಾಸ ಬಸು ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಲಿದ್ದಾರೆ.